ಅಬುಧಾಬಿ: ಹದಿನಾಲ್ಕನೇ ಆವೃತ್ತಿಯ ಟೂರ್ನಿಯ ಎರಡನೇ ಚರಣದಲ್ಲಿ ಬ್ಯಾಕ್ ಟು ಬ್ಯಾಕ್ ಜಯ ದಾಖಲಿಸಿರುವ ತಂಡ ಈಗ ಬಲಿಷ್ಠ ತಂಡದ ಸವಾಲು ಎದುರಿಸಲಿದೆ. ಇಲ್ಲಿನ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಭಾನುವಾರ ಟಾಸ್ ಗೆದ್ದ ಕೆಕೆಆರ್ ತಂಡದ ನಾಯಕ ಐಯಾನ್ ಮಾರ್ಗನ್ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡರು. ಈ ಪಂದ್ಯಕ್ಕೆ ಕೆಕೆಆರ್ ತನ್ನ ಪ್ಲೇಯಿಂಗ್ ಇಲೆವೆನ್‌ನಲ್ಲಿ ಯಾವುದೇ ಬದಲಾವಣೆ ತಂದುಕೊಂಡಿಲ್ಲ. ಸಿಎಸ್‌ಕೆ ತಂಡಕ್ಕಿಲ್ಲಿ ಬ್ರಾವೋ ಸೇವೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ತನ್ನ ಪ್ರಮುಖ ಬೌಲರ್ ಡ್ವೇನ್ ಬ್ರಾವೋಗೆ ವಿಶ್ರಾಂತಿ ನೀಡಿದೆ. ಆಟಗಾರರ ಮೇಲಿನ ಹೊರೆ ನಿರ್ವಹಣೆ ಸಲುವಾಗಿ ಬ್ರಾವೋಗೆ ವಿಶ್ರಾಂತಿ ನೀಡಿರುವುದಾಗಿ ನಾಯಕ ಎಂಎಸ್ ಧೋನಿ ಟಾಸ್ ವೇಳೆ ಹೇಳಿದರು. ಬ್ರಾವೋ ಜಾಗದಲ್ಲಿ ಆಲ್‌ರೌಂಡರ್ ಸ್ಯಾಮ್ ಕರ್ರನ್ ಪ್ಲೇಯಿಂಗ್ ಇಲೆವೆನ್ ಸೇರಿದ್ದಾರೆ. KKR vs CSK ಪಂದ್ಯದ LIVE ಕೆಕೆಆರ್ ಪ್ಲೇಯಿಂಗ್ ಇಲೆವೆನ್ಶುಭಮನ್ ಗಿಲ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ಐಯಾನ್ ಮಾರ್ಗನ್ (ನಾಯಕ), ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ಕೀಪರ್), ಆಂಡ್ರೆ ರಸೆಲ್, ಸುನಿಲ್ ನರೈನ್, ಲಾಕಿ ಫರ್ಗ್ಯೂಸನ್, ವರುಣ್ ಚಕ್ರವರ್ತಿ, ಪ್ರಸಿಧ್ ಕೃಷ್ಣ. ಸಿಎಸ್‌ಕೆ ಪ್ಲೇಯಿಂಗ್ ಇಲೆವೆನ್ಋತುರಾಜ್ ಗಾಯಕ್ವಾಡ್, ಫಾಫ್ ಡು'ಪ್ಲೆಸಿಸ್, ಮೊಯೀನ್ ಅಲಿ, ಅಂಬಾಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ಕೀಪರ್/ಕ್ಯಾಪ್ಟನ್), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಶಾದುಲ್ ಠಾಕೂರ್, ದೀಪಕ್ ಚಾಹರ್, ಜಾಶ್ ಹೇಝಲ್‌ವುಡ್. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ)ಎಂಎಸ್ ಧೋನಿ (ನಾಯಕ, ವಿಕೆಟ್‌ಕೀಪರ್), ಸುರೇಶ್ ರೈನಾ, ಎನ್ ಜಗದೀಶನ್, ಋತುರಾಜ್ ಗಾಯಕ್ವಾಡ್, ಕೆಎಮ್ ಆಸಿಫ್, ಕರಣ್ ಶರ್ಮಾ, ಅಂಬಾಟಿ ರಾಯುಡು, ದೀಪಕ್ ಚಹರ್, ಫಾಫ್ ಡು'ಪ್ಲೆಸಿಸ್, ಶಾರ್ದುಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್, ಡ್ವೇನ್ ಬ್ರಾವೋ, ಲುಂಗಿ ಎನ್ಗಿಡಿ, ಸ್ಯಾಮ್ ಕರ್ರನ್, ರವೀಂದ್ರ ಜಡೇಜಾ, ಇಮ್ರಾನ್ ತಾಹಿರ್, ರಾಬಿನ್ ಉತ್ತಪ್ಪ, ಮೊಯೀನ್ ಅಲಿ, ಕೆ ಗೌತಮ್, ಚೇತೇಶ್ವರ್ ಪೂಜಾರ, ಎಂ. ಹರಿಶಂಕರ್ ರೆಡ್ಡಿ, ಕೆ. ಭಗತ್ ವರ್ಮ, ಸಿ. ಹರಿ ನಿಶಾಂತ್, ಆರ್ ಸಾಯ್ ಕಿಶೋರ್, ಜಾಶ್ ಹೇಝಲ್‌ವುಡ್. ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್)ಐಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಆಂಡ್ರೆ ರಸೆಲ್, ಕಮಲೇಶ್ ನಾಗರಕೋಟಿ, ಕುಲ್ದೀಪ್ ಯಾದವ್, ಲಾಕಿ ಫರ್ಗ್ಯೂಸನ್, ನಿತೀಶ್ ರಾಣಾ, ಪ್ರಸಿಧ್ ಕೃಷ್ಣ, ಗುರುಕೀರತ್ ಸಿಂಗ್ ಮಾನ್, ಸಂದೀಪ್ ವಾರಿಯರ್, ಶಿವಂ ಮಾವಿ, ಶುಭಮನ್ ಗಿಲ್, ಸುನೀಲ್ ನರೇನ್, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಪವನ್ ನೇಗಿ, ಟಿಮ್ ಸೀಫರ್ಟ್, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರಾ, ಕರುಣ್ ನಾಯರ್, ಹರ್ಭಜನ್ ಸಿಂಗ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್, ಟಿಮ್ ಸೌಥಿ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39IXuZ6