ಸೋಮವಾರ ಭಾರತ್ ಬಂದ್; ಕರ್ನಾಟದಲ್ಲಿ ಯಶಸ್ವಿಗೊಳಿಸಲು ನಡೆಯುತ್ತಿದೆ ಸಿದ್ಧತೆ

ಬೆಂಗಳೂರು: ಕೃಷಿ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಸೋಮವಾರ ಗೆ ವಿವಿಧ ಸಂಘಟನೆಗಳು ಕರೆ ಕೊಟ್ಟಿವೆ. ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಬಂದ್ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರೈತ ಸಂಘಟನೆಗಳು ಹಾಗೂ ಇತರ ಜನಪರ ಸಂಘಟನೆಗಳು ಸಜ್ಜುಗೊಳ್ಳುತ್ತಿವೆ. ಸೋಮವಾರ ಬೆಳಗ್ಗೆ 6 ರಂದ ಸಂಜೆ 6 ಗಂಟೆಯ ವರೆಗೆ ಭಾರತ್ ಬಂದ್ ನಡೆಯಲಿದೆ. ರೈತ ಪರ ಸಂಘಟನೆಗಳು ಪ್ರಬಲವಾಗಿರುವ ಜಿಲ್ಲೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬಂದ್ ನಡೆಸಲು ಸಹಕಾರ ಕೋರಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಹೆದ್ದಾರಿ ತಡೆ, ಬಸ್ ಸಂಚಾರ, ರೈಲು ಸಂಚಾರವನ್ನು ತಡೆ ಹಿಡಿಯುವುದು ರೈತ ಸಂಘಟನೆಗಳ ಯೋಜನೆಯಾಗಿದೆ. ರಾಜ್ಯದಲ್ಲಿ ಭಾರತ್ ಬಂದ್‌ಗೆ ದಲಿತ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳು ಬೆಂಬಲ ಘೋಷಣೆ ಮಾಡಿವೆ. ಅಲ್ಲದೆ ಆಟೋ ರಿಕ್ಷಾ, ಟ್ಯಾಕ್ಸಿ ಚಾಲಕರ ಸಂಘಟನೆಗಳು, ವರ್ತಕರ ಸಂಘಟನೆಗಳು ಕೂಡಾ ಬೆಂಬಲ ಘೋಷಿಸಿವೆ. ಬಂದ್ ಬೆಂಬಲಿಸುವಂತೆ ಮೈಸೂರಿನಲ್ಲಿ ರೈತರಿಂದ ಚಡ್ಡಿ ಮೆರವಣಿಗೆ ನಡೆದಿದೆ. ರೈತ ಸಂಘಟನೆಗಳ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಈ ಮೆರವಣಿಗೆ ನಡೆಸುವ ಮೂಲಕ ಬಂದ್‌ಗೆ ಬೆಂಬಲ ಕೋರಲಾಗಿದೆ. ಇನ್ನು ಸಾರಿಗೆ ನೌಕರರ ಕೂಟ, ಲಾರಿ ಮಾಲೀಕರ ಸಂಘಗಳ ಒಕ್ಕೂಟ, ಟ್ಯಾಕ್ಸಿ ಚಾಲಕರ ಸಂಘಗಳು ನೈತಿಕ ಬೆಂಬಲವನ್ನು ಘೋಷಿಸಿವೆ. ಆದರೆ ಸಾರಿಗೆ ಬಸ್‌ಗಳು ರಾಜ್ಯಾದ್ಯಂತ ಎಂದಿನಂತೆ ಸಂಚಾರ ನಡೆಸಲಿವೆ. ಈ ನಿಟ್ಟಿನಲ್ಲಿ ಭದ್ರತೆ ಒದಗಿಸುವಂತೆ ಕೋರಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು ಸಾಹಿತಿಗಳು, ಕಲಾವಿದರು ಕೂಡಾ ಭಾರತ್ ಬಂದ್‌ಗೆ ಬೆಂಬಲವನ್ನು ಸೂಚಿಸಿದ್ದಾರೆ. ಬಂದ್‌ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯೂ ಮುಂಜಾಗರೂಕತಾ ಕ್ರಮ ಕೈಗೊಳ್ಳಲು ಮುಂದಾಗಿದೆ. ಬೆಂಗಳೂರು ನಗರ ಸೇರಿದಂತೆ ಅಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಿದೆ. ಮತ್ತೊಂದು ಕಡೆಯಲ್ಲಿ ಬಂದ್ ಸರಿಯಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೋವಿಡ್ ಸಂಕಷ್ಟದಿಂದ ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತ ಸಂಘಟನೆಗಳು ಭಾರತ್ ಬಂದ್‌ಗೆ ಕರೆ ನೀಡಿರುವುದು ಸರಿಯಲ್ಲ ಎಂದಿದ್ದಾರೆ.


from India & World News in Kannada | VK Polls https://ift.tt/2ZCn9RP

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...