ಸಕ್ಕರೆ ಆಯುಕ್ತಾಲಯ ಕಚೇರಿ ಅ.3ರಂದು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ; ಬೊಮ್ಮಾಯಿ

ಬೆಳಗಾವಿ: ರೈತರು ಹಾಗೂ ಉತ್ತರ ಕರ್ನಾಟಕ ಜನರ ಬೇಡಿಕೆಯಾಗಿರುವ ಕಚೇರಿಯನ್ನು ಅಕ್ಟೋಬರ್ 3 ರಂದು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಭಾನುವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಕ್ಕರೆ ಆಯುಕ್ತಾಲಯವನ್ನು ಸ್ಥಳಾಂತರ ಮಾಡಲು ಈಗಾಗಲೇ ಆದೇಶ ಮಾಡಲಾಗಿದೆ. ಅಕ್ಟೋಬರ್ 3ಕ್ಕೆ ಸ್ಥಳಾಂತರ ಮಾಡಲಾಗುವುದು. ಇದಲ್ಲದೆ, ಇನ್ನೂ ಕೆಲ ಕಚೇರಿಗಳು ಸ್ಥಳಾಂತರ ಮಾಡಲು ಆಜ್ಞೆಗಳಾಗಿದೆ. ಅವುಗಳನ್ನು ಕೂಡ ಶೀಘ್ರದಲ್ಲೇ ಸ್ಥಳಾಂತರ ಮಾಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಡಿಸೆಂಬರ್ ತಿಂಗಳಿನಲ್ಲಿ ಬೆಳಗಾವಿಯಲ್ಲಿ ಅಧಿವೇಶನ ಮಾಡಲು ತಿರ್ಮಾನ ಕೈಗೊಳ್ಳಲಾಗಿದೆ. ಅದರ ಒಳಗಾಗಿ ಸಾಧ್ಯವಿರುವ ಪ್ರಮುಖ ಸರಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡಲಾಗುವುದು ಎಂದರು. ಕಬ್ಬಿನ ಬಾಕಿ ಬಿಲ್ ಕೊಡುವ ಕುರಿತು ಅದು ಖಾಸಗಿ ಸಕ್ಕರೆ ಕಾರ್ಖಾನೆಯವರು ಕೊಡಬೇಕು. ಅವರಿಗೆ ಈಗಾಗಲೇ ಸರಕಾರದಿಂದ ಸೂಚನೆ ನೀಡಲಾಗಿದೆ. ಅವರು ಕೊಡಲೇ ಬೇಕು. ಕೊಡದಿದ್ದರೇ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಮಧ್ಯ ಅವರಿಗೆ ಯಾವ ರೀತಿ ಸಹಾಯ ಮಾಡಬೇಕೆಂದು ಸಕ್ಕರೆ ಕಾರ್ಖಾನೆ, ಅಪೇಕ್ಸ್ ಬ್ಯಾಂಕ್‌ನೊಂದಿಗೆ ಬೆಂಗಳೂರಿನಲ್ಲಿ ಸಭೆ ಕರೆಯುತ್ತೇವೆ ಎಂದರು. ಇನ್ನು ಕೊರೊನಾ ಸೋಂಕಿನ ಭೀತಿಯಿಂದ ಜನರು ಈಗ ತಾನೆ ಆರ್ಥಿಕ ಚಟುವಟಿಕೆಗಳು, ರೈತರ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆ. ಭಾರತ್ ಬಂದ್ ಕರೆಗೆ ಯಾರು ಬೆಂಬಲ ಮಾಡಬಾರದು ಎಂದು ಮನವಿ ಮಾಡಿಕೊಂಡರು. ಬೆಳಗಾವಿಯಲ್ಲಿ 2019-20ರಲ್ಲಿ ಅತಿ ಹೆಚ್ಚು ಮಳೆಯಾಗಿ ಬಳಹಷ್ಟು ಮನೆಗಳು ಹಾಗೂ ರೈತರ ಬೆಳೆಗಳು ಹಾನಿಯಾಗಿವೆ. ಆ ಸಂರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪೂರ್ಣ ಮನೆ ಬಿದ್ದಿರುವುದಕ್ಕೆ 5 ಲಕ್ಷ ರೂ. ಭಾಗಶಃ ಬಿದ್ದ ಮನೆಗೆ 1 ಲಕ್ಷ ರೂ., 3 ಲಕ್ಷ ರೂ. ದುರಸ್ಥಿಗಾಗಿ 50 ಸಾವಿರ ರೂ. ಪರಿಹಾರ ಕೊಡುವ ಕೆಲಸ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಒಟ್ಟು 44,205 ಮನೆಗಳಿಗೆ ಈಗಾಗಲೇ ಪರಿಹಾರ ಕೊಡುವ ಕೆಲಸ ಪ್ರಾರಂಭವಾಗಿದೆ ಎಂದರು. ಅಲ್ಲದೇ, ಸುಮಾರು ಎ ಮತ್ತು ಬಿ ಕೆಟಗರಿಗೆ 718 ಬಿ 1ಗೆ 9,64 ಸೇರಿದಂತೆ 861 ಕೋಟಿ ರೂ.ಗಳನ್ನು ಪರಿಹಾರ ನೀಡಲಾಗಿದೆ. ಬೆಳೆ ಹಾನಿಗೆ 263 ಕೋಟಿ ರೂ. 1 ಲಕ್ಷ 56 ಸಾವಿರ ರೈತರಿಗೆ ಪರಿಹಾರ ನೀಡಲಾಗಿದೆ. ಈಗ ಬಾಕಿ ಇರುವ ಪರಿಹಾರಕ್ಕೆ ಸಾಕಷ್ಟು ಸಮಸ್ಯೆಯಾಗಿದೆ ಎಂದು ರೈತರು, ಗ್ರಾಮಸ್ಥರು ಕೂಡ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿ ತರಲು ಹೇಳಿದ್ದೆ. ಅವರು ತಂದು ಕೊಟ್ಟಿದ್ದಾರೆ. ಅದರ ಅನ್ವಯ ನಾವು ಈಗಾಗಲೇ ಕಂದಾಯ ಇಲಾಖೆಯೊಂದಿಗೆ ಸಭೆ ನಡೆಸಿದ್ದೇವೆ. ಅದರ ವಿವರವನ್ನು ಕಂದಾಯ ಇಲಾಖೆಯವರು ಕೇಳಿದ್ದಾರೆ. ಅದರ ವಿವರನ್ನು ತೆಗೆದುಕೊಂಡು ಮುಂದಿನ ವಾರ ಜಿಲ್ಲಾಧಿಕಾರಿಗಳು ಬರಲಿದ್ದಾರೆ. ಮುಂದಿನವಾರ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಿ ಬಾಕಿ ಉಳಿದಿರುವ ಪರಿಹಾರವನ್ನು ಕೊಡಲು ಸಿದ್ಧತೆ ಮಾಡಲಾಗುವುದು ಎಂದರು.


from India & World News in Kannada | VK Polls https://ift.tt/3lWJscl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...