ಕೊಡಗಿನಲ್ಲಿ 2 ತಿಂಗಳ ಕಾಲ ಪ್ರವಾಸೋದ್ಯಮ ಸ್ಥಗಿತಗೊಳಿಸಲು ಆಗ್ರಹ..!

ಮಡಿಕೇರಿ (): ಕಾವೇರಿ ತುಲಾ ಸಂಕ್ರಮಣ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೊಡಗಿನಲ್ಲಿ ಎರಡು ತಿಂಗಳ ಕಾಲ ಪ್ರವಾಸೋದ್ಯಮವನ್ನು ಸಂಪೂರ್ಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿ, ಸೇವ್‌ ಫ್ರಮ್‌ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಕಾವೇರಿ ತುಲಾ ಸಂಕ್ರಮಣ ಹಾಗೂ ಭಕ್ತರ ಆರೋಗ್ಯ ದೃಷ್ಟಿಯಿಂದ ಜತೆಗೆ ಶಾಲಾ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅಕ್ಟೋಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಚಟುವಟಿಕೆಗಳನ್ನು ಕೊಡಗಿನಲ್ಲಿ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಸಂಘಟನೆಯ ಪ್ರಮುಖರು ಆಗ್ರಹಿಸಿದರು. ಸೇವ್‌ ಕೊಡಗು ಫ್ರಮ್‌ ಟೂರಿಸಂ ಸಂಘಟನೆ ಸಂಚಾಲಕ ಚಮ್ಮಟೀರ ಪ್ರವೀಣ್‌ ಉತ್ತಪ್ಪ ಮಾತನಾಡಿ, 'ಕೊಡಗಿನ ಗಡಿಯನ್ನು ಹಂಚಿಕೊಂಡಿರುವ ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ಸೋಂಕು ಅಧಿಕವಾಗಿದ್ದು, ಇದರ ಜೊತೆಗೆ ನಿಫಾ ವೈರಸ್‌ ಕೂಡ ಹೆಚ್ಚಾಗಿದೆ. ಇದರಿಂದ ಜಿಲ್ಲೆಗೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆ ಇದೆ. ಜಿಲ್ಲೆಯ ಹಿತದೃಷ್ಟಿಯಿಂದ ಮಾಕುಟ್ಟ ಹಾಗೂ ಕರಿಕೆ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸಿರುವುದು ಸ್ವಾಗತಾರ್ಹವಾದರೂ, ಎಲ್ಲಾ ಗಡಿಗಳು ಒಂದಲ್ಲಾ ಒಂದು ರೀತಿಯಲ್ಲಿ ಕೇರಳದ ಸಂಪರ್ಕವನ್ನು ಹೊಂದಿದೆ. ಆದ್ದರಿಂದ ಕೊಡಗು ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡಬೇಕು' ಎಂದು ಒತ್ತಾಯಿಸಿದರು. 'ಕೊಡಗಿನಲ್ಲಿ ಕೊರೊನಾ ಸೋಂಕು ಕಣ್ಣಾಮುಚ್ಚಾಲೆಯಾಡುತ್ತಿದ್ದು, ಕರ್ಫ್ಯೂ ತೆರವುಗೊಂಡ ನಂತರ ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಕೊಡಗಿಗೆ ಬರುತ್ತಿದ್ದಾರೆ. ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಬರುತ್ತಿರುವ ಇವರಿಂದ ಸೋಂಕು ಹರಡುವ ಭಯ ಸ್ಥಳೀಯರಾದ ನಮ್ಮನ್ನು ಕಾಡುತ್ತಿದೆ. ಹಾಗೂ ಮುಂಬರುತ್ತಿರುವ ಕಾವೇರಿ ತುಲಾ ಸಂಕ್ರಮಣದಲ್ಲಿ ಸೋಂಕು ಉಲ್ಭಣಗೊಂಡು ನಮ್ಮ ಧಾರ್ಮಿಕ ಕಟ್ಟುಪಾಡುಗಳನ್ನು ಆಚರಿಸಲು ತೊಂದರೆಯಾಗುವ ಸಾಧ್ಯತೆ ಇದೆ' ಎಂದು ಅಭಿಪ್ರಾಯಪಟ್ಟರು. ಸಂಘಟನೆ ಪ್ರಮುಖರಾದ ಶ್ರೀನಿವಾಸ್‌ ರೈ, ಉಮೇಶ್‌ ಕುಮಾರ್‌, ಅಜಿತ್‌ ಕೊಟ್ಟಕೇರಿಯನ, ಕಡೇಮಾಡ ವಿನೋದ್‌, ಅಪ್ಪಚ್ಚೀರ ಕಮಲ, ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಸಣ್ಣುಂಡ ದರ್ಶನ್‌ ಕಾವೇರಪ್ಪ, ಪುಲಿಯಂಡ ರೋಶನ್‌, ಅಪಾಡಂಡ ಧನು ದೇವಯ್ಯ ಮತ್ತಿತರರು ಹಾಜರಿದ್ದರು. ದಸರಾ ವೇಳೆ ಸಂಭ್ರಮಕ್ಕಿಲ್ಲ ಅಡೆತಡೆ..!? ಕೊರೊನಾ ಕಾರಣಕ್ಕೆ ಇತಿಹಾಸ ಪ್ರಸಿದ್ಧ ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾವನ್ನು ಸಾಂಕೇತಿಕವಾಗಿ, ಸಾಂಪ್ರದಾಯಕ್ಕೆ ಚ್ಯುತಿ ಬಾರದಂತೆ ಆಚರಿಸಲು ಸೂಚಿಸಿದ್ದರೂ ವ್ಯಾಪಾರೋದ್ಯಮ, ಪ್ರವಾಸೋದ್ಯಮ ಚೇತರಿಸಿಕೊಳ್ಳುವ ನಿರೀಕ್ಷೆ ಮೂಡಿಸಿದೆ. ಜಿಲ್ಲೆಯ ಆರ್ಥಿಕ ಪುನಶ್ಚೇತನ ದೃಷ್ಟಿಯಿಂದ ವಿಜೃಂಭಣೆಯ ದಸರಾ ಆಚರಣೆಗೂ ಹಲವರು ಆಸಕ್ತಿ ತೋರಿಸುತ್ತಿದ್ದಾರೆ. ಪ್ರಕೃತಿ ವಿಕೋಪ, ಕೊರೊನಾದಿಂದ ಜಿಲ್ಲೆಯ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಪ್ರಸ್ತುತ ಸಾಲಿನಲ್ಲಿ ಕೊರೊನಾ ನಡುವೆಯೂ ನಡೆಯುವ ದೊಡ್ಡ ಹಬ್ಬ ದಸರೆ. ಈ ಹಿನ್ನೆಲೆ ವ್ಯಾಪಾರೋದ್ಯಮಿಗಳು, ಸಣ್ಣ ಪುಟ್ಟ ವ್ಯಾಪಾರಿಗಳು ಸೇರಿದಂತೆ ಹಲವು ಮಂದಿ ದಸರೆಯಿಂದ ಆರ್ಥಿಕತೆಗೆ ಅನುಕೂಲವಾಗಲಿದೆ. ನೆಲಕಚ್ಚಿರುವ ವ್ಯಾಪಾರೋದ್ಯಮ ದಸರೆ ಕಾರಣದಿಂದಾದರೂ ತುಸು ಚೇತರಿಸಿಕೊಳ್ಳಲಿ ಎಂಬ ಅಶಾಭಾವನೆ ಹೊಂದಿದ್ದಾರೆ. ಇದೀಗ ಜಿಲ್ಲೆಯಲ್ಲಿ ವೀಕೆಂಡ್‌ ಲಾಕ್‌ಡೌನ್‌ ತೆರವುಗೊಳಿಸಿರುವ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ದಸರೆ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುವುದರಿಂದ ಪ್ರವಾಸೋದ್ಯಮದ ಚೇತರಿಕೆ ನಿರೀಕ್ಷೆಯೂ ಇದೆ.


from India & World News in Kannada | VK Polls https://ift.tt/3kHJSnj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...