ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ ಬೆಂಗಳೂರು: ಬೆಂಗಳೂರಿನ ಹೆಸರನ್ನು ತನ್ನೊಂದಿಗೆ ಬೆಸೆದುಕೊಂಡಿರುವ ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಅಭಿವೃದ್ಧಿಯ ಸ್ಪರ್ಶ ಸಿಗದಿದ್ದರೂ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಜಿಲ್ಲೆಯ ದೊಡ್ಡಬಳ್ಳಾಪುರದ ಮಾಕಳಿ ದುರ್ಗ ಸಾಲುಬೆಟ್ಟಗಳು, ಚೆನ್ನಗಿರಿ ಜಲಪಾತ, ಘಾಟಿ ಡ್ಯಾಂ, ಹುಲುಕಡಿ ಬೆಟ್ಟ, ಮಧುರೆ, ದೇವನಹಳ್ಳಿಯ ಐತಿಹಾಸಿಕ ಕೋಟೆ, ಹೊಸಕೋಟೆ ಕೆರೆ, ಶಿವಗಂಗೆ ಬೆಟ್ಟ ಸೇರಿದಂತೆ ಜಿಲ್ಲೆಯಲ್ಲಿಹತ್ತಾರು ಪ್ರದೇಶಗಳು ತೆರೆಮರೆಯಲ್ಲಿ ಪ್ರವಾಸಿಗರಿಗೆ ಮುದ ನೀಡುತ್ತಿವೆ. ನಿತ್ಯ, ನೂರಾರು ಪ್ರವಾಸಿಗರು ಈ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಸರಕಾರ ಅನುದಾನದ ನೀಡಿ ಅಭಿವೃದ್ಧಿ ಸ್ಪರ್ಶ ನೀಡಿದರೆ ಮತ್ತಷ್ಟು ಜನರು ಬರಲು ಅನುಕೂಲವಾಗಲಿದೆ. ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಗಡಿಯಲ್ಲಿರುವ ನಂದಿಬೆಟ್ಟಕ್ಕೆ ಸಿಕ್ಕಷ್ಟು ಪ್ರಾಶಸ್ತ್ಯ ಉಳಿದ ಸ್ಥಳಗಳಿಗೆ ಸಿಗುತ್ತಿಲ್ಲ. ಗ್ರಾಮಾಂತರ ಜಿಲ್ಲೆಯಲ್ಲಿಯೇ ಅನೇಕ ಪ್ರವಾಸಿ ತಾಣಗಳಿದ್ದರು ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ಬಾರದಂತಾಗಿವೆ. ಹೀಗಾಗಿ, ಮೂಲಸೌಕರ್ಯಗಳಿಲ್ಲದೆ ಬಣಗುಟ್ಟುವ ಸ್ಥಿತಿಗೆ ತಲುಪಿವೆ. ಮರೀಚಿಕೆಯಾಗಿರುವ ಅಭಿವೃದ್ಧಿಯ ನಡುವೆ ಪ್ರವಾಸಿಗರ ದಂಡು ಪ್ರವಾಸಿ ತಾಣಗಳಿಗೆ ವೀಕೆಂಡ್‌ನಲ್ಲಿ ದಾಂಗುಡಿಯಿಡುತ್ತಿದ್ದು, ಮಸ್ತಿ ಮೋಜುಗಳಿಗೇನು ಕಡಿಮೆಯಿಲ್ಲವೆಂತಾಗಿದೆ. ಇಲಾಖೆ ಇತ್ತ ಗಮನಿಸಿ, ನೀಡಿ ಸೂಕ್ತ ಬಂದೋಬಸ್ತ್ ನೊಂದಿಗೆ ಮೂಲಸೌಕರ್ಯ ಕಲ್ಪಿಸಿದಲ್ಲಿ ಪ್ರವಾಸಿಗರಿಗೆ ರಕ್ಷಣೆಯೊಂದಿಗೆ ವ್ಯವಸ್ಥಿತ ಪ್ರವಾಸ ಸಾಧ್ಯವಾಗಲಿದೆ ಎನ್ನುವುದು ಪರಿಸರಾಸಕ್ತರ ಒತ್ತಾಯ. ಅಭಿವೃದ್ಧಿಯಾಗಲಿ, ಹಾನಿಯಾಗದಿರಲಿಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಸಂರಕ್ಷಿತ ಅರಣ್ಯ ಪ್ರದೇಶಗಳಲ್ಲಿ ಗುರುತಿಸಿಕೊಂಡಿವೆ. ಹಲವು ಇಂದಿಗೂ ತೆರೆಮರೆಯಲ್ಲಿಯೇ ಉಳಿದುಕೊಂಡಿವೆ. ಈ ಪ್ರದೇಶಗಳಿಗೆ ಅಭಿವೃದ್ಧಿಯ ಸ್ಪರ್ಶ ನೀಡುವ ನೆಪದಲ್ಲಿಇಲಾಖೆ ಮುಂದಾಗಿ ಅರಣ್ಯ ನಾಶಕ್ಕೆ ಕಾರಣವಾದರೆ ಪ್ರಾಣಿ, ಪಕ್ಷಿಗಳಿಗೆ ಹಾನಿಯಾಗಲಿದೆ. ಅರಣ್ಯ ಇಲಾಖೆಯೂ ಸಂರಕ್ಷಿತ ಅರಣ್ಯ ಪ್ರದೇಶದ ರಕ್ಷಣೆಗೆ ಮುಂದಾಗುತ್ತಿಲ್ಲ. ಚೆನ್ನಗಿರಿ, ಮಾಕಳಿ, ಸೂಲುಕುಂಟೆ ಅರಣ್ಯ ಪ್ರದೇಶ, ನಲ್ಲೂರು ಹುಣಸೆತೋಪು ಸೇರಿದಂತೆ ಜಿಲ್ಲೆಯ ಕೆಲವೆಡೆ ಜನರ ಪ್ರವೇಶಕ್ಕೆ ನಿರ್ಬಂಧವಿದ್ದರು ಪ್ರವಾಸೋದ್ಯಮದ ಹೆಸರಲ್ಲಿ ತಂಡಗಳು ಪ್ರವೇಶ ಪಡೆಯುತ್ತಿವೆ. ಹೀಗಾಗಿ, ಸರಕಾರವೇ ಅಧಿಕೃತವಾಗಿ ಈ ಪ್ರದೇಶಗಳಲ್ಲು ಪ್ರವಾಸಿ ತಾಣಗಳನ್ನಾಗಿ ಗುರುತಿಸಿ, ಸೂಕ್ತ ರಕ್ಷಣಾ ಕ್ರಮಗಳೊಂದಿಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎನ್ನುವುದು ಜನರ ವಾದ. ಜಿಲ್ಲೆಯ ಪ್ರವಾಸಿ ತಾಣಗಳು
- ಮಾಕಳಿ ದುರ್ಗ ಸಾಲುಬೆಟ್ಟಗಳು
- ಚೆನ್ನಗಿರಿ
- ತಿಪ್ಪಗಾನಹಳ್ಳಿ ಕೆರೆ
- ದೇವನಹಳ್ಳಿ ಕೋಟೆ
- ನಲ್ಲೂರು ಹುಣಸೆ ತೋಪು
- ಶಿಲಾಯುಗದ ಪಳೆಯುಳಿಕೆಗಳ ಅರಣ್ಯ ಪ್ರದೇಶ
- ಗುಹೆಗಳಿರುವ ಸೂಲಿಕುಂಟೆ ಬೆಟ್ಟ
- ಹುಲುಕುಡಿ ಬೆಟ್ಟ
- ವಿದೇಶಿ ಪಕ್ಷಿಗಳಿಂದ ಕಣ್ಮನ ಸೆಳೆಯುವ ಮಧುರೆ ಕೆರೆ
- ನಂದಿಬೆಟ್ಟ, ಚೆನ್ನಗಿರಿ ಕಣಿವೆ ರಸ್ತೆ
- ಘಾಟಿ ಸುಬ್ರಹ್ಮಣ್ಯ ದೇವಸ್ಥಾನ
- ಸರ್ ಎಂವಿ ಪಿಕ್‌ಅಪ್ ಡ್ಯಾಂ
- ಜಕ್ಕಲಮಡುಗು ಜಲಾಶಯ
- ಶಿವಗಂಗೆ, ಚಿಕ್ಕಸಿದ್ಧರಬೆಟ್ಟ
- ಹೊಸಕೋಟೆ ಅಮಾನಿಕೆರೆ
- ಮಾಕಳಿದುರ್ಗ - 1.70ಕೋಟಿ
- ತಿಪ್ಪಗಾನಹಳ್ಳಿ ಕೆರೆ -2.80ಕೋಟಿ
- ಗುಂಡುಮಗೆರೆ ಕೆರೆ - 2.80ಕೋಟಿ
- ದೇವನಹಳ್ಳಿ ಕೋಟೆ - 50ಲಕ್ಷ
- ಹೊಸಕೋಟೆ ಕೆರೆ - 3.80ಕೋಟಿ
from India & World News in Kannada | VK Polls https://ift.tt/39FVYY4