IND vs ENG: ಟಾಸ್‌ ಗೆದ್ದು ಫೀಲ್ಡಿಂಗ್‌‌ ಆಯ್ದುಕೊಂಡ ಇಂಗ್ಲೆಂಡ್‌!

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಅರಂಭವಾದ ಓಡಿಐ ಸರಣಿಯ ಆರಂಭಿಕ ಹಾಗೂ ಮೊದಲನೇ ಪಂದ್ಯದಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ನಾಯಕ ಐಯಾನ್‌ ಮಾರ್ಗನ್‌ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಟಾಸ್‌ ಗೆದ್ದ ಬಳಿಕ ಮಾತನಾಡಿದ ಇಂಗ್ಲೆಂಡ್‌ ನಾಯಕ ಐಯಾನ್ ‌ಮಾರ್ಗನ್‌, "ಇಲ್ಲಿನ ವಿಕೆಟ್‌ನಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ಜಾಸ್ತಿ ಹುಲ್ಲು ಕಾಣಿಸುತ್ತಿದೆ. ಹಾಗಾಗಿ, ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳುತ್ತೇವೆ. ಟಾಮ್‌ ಕರ್ರನ್‌, ಸ್ಯಾಮ್‌ ಬಿಲ್ಲಿಂಗ್ಸ್ ಹಾಗೂ ಮೊಯಿನ್‌ ಅಲಿ ಅಂತಿಮ 11ಕ್ಕೆ ಮರಳಿದ್ದಾರೆ," ಎಂದು ತಿಳಿಸಿದರು. ಟಾಸ್‌ ಬಳಿಕ ಮಾತನಾಡಿದ ವಿರಾಟ್‌ ಕೊಹ್ಲಿ, "ಮೊದಲು ಬ್ಯಾಟಿಂಗ್‌ ಮಾಡಲು ಇಷ್ಟಪಡುತ್ತೇವೆ. ಸಾಧ್ಯವಾದಷ್ಟು ಹೆಚ್ಚಿನ ಮೊತ್ತ ಗಳಿಸಲು ಪ್ರಯತ್ನಿಸುತ್ತೇವೆ. ಆದರೆ, ಒಂದು ತಂಡವಾಗಿ ನಾವು ಯಾವುದನ್ನು ಬೇಕಾದರೂ ಸ್ವೀಕರಿಸಲು ಸಿದ್ದರಿದ್ದೇವೆ. ಅದರಲ್ಲೂ ಇಂಗ್ಲೆಂಡ್‌ ವಿರುದ್ಧ ಆಡುವುದು ಅತ್ಯುತ್ತಮ ನೆನಪಾಗಿರುತ್ತದೆ. ಕೆ.ಎಲ್‌ ರಾಹುಲ್‌ 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಲಿದ್ದು ಜತೆಗೆ ವಿಕೆಟ್‌ ಕೀಪಿಂಗ್‌ ನಿರ್ವಹಿಸಲಿದ್ದಾರೆ," ಎಂದು ಹೇಳಿದರು. ಪ್ರಸಿದ್ದ್‌ ಕೃಷ್ಣ, ಕೃಣಾಲ್‌ ಪಾಂಡ್ಯ ಪದಾರ್ಪಣೆ: ಭಾರತ ತಂಡದ ಪರ ಕನ್ನಡಿಗ ಪ್ರಸಿದ್ದ್‌ ಕೃಷ್ಣ ಹಾಗೂ ಕೃಣಾಲ್‌ ಪಾಂಡ್ಯ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಟಾಸ್‌ ಮುನ್ನ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ರವಿಶಾಸ್ತ್ರಿ ಇವರಿಬ್ಬರಿಗೂ ಓಡಿಐ ಕ್ಯಾಪ್‌ ನೀಡಿ ಗೌರವಿಸಿದರು. ಉಭಯ ತಂಡಗಳ ಪ್ಲೇಯಿಂಗ್‌ ಇಲೆವೆನ್‌ ಭಾರತ: ರೋಹಿತ್‌ ಶರ್ಮಾ, ಶಿಖರ್ ಧವನ್‌, ವಿರಾಟ್‌ ಕೊಹ್ಲಿ(ನಾಯಕ), ಕೆ.ಎಲ್‌ ರಾಹುಲ್(ವಿ.ಕೀ), ಶ್ರೇಯಸ್‌ ಅಯ್ಯರ್, ಹಾರ್ದಿಕ್‌ ಪಾಂಡ್ಯ, ಕೃಣಾಲ್ ಪಾಂಡ್ಯ, ಶಾರ್ದುಲ್ ಠಾಕೂರ್‌, ಭುವನೇಶ್ವರ್ ಕುಮಾರ್, ಕುಲ್ದೀಪ್‌ ಯಾದವ್‌, ಪ್ರಸಿದ್ದ್ ಕೃಷ್ಣ ಇಂಗ್ಲೆಂಡ್‌: ಜೇಸನ್‌ ರಾಯ್‌, ಜಾನಿ ಬೈರ್‌ಸ್ಟೋವ್‌, ಐಯಾನ್‌ ಮಾರ್ಗನ್‌(ನಾಯಕ), ಜೋಸ್‌ ಬಟ್ಲರ್‌ (ವಿ.ಕೀ), ಬೆನ್‌ ಸ್ಟೋಕ್ಸ್, ಸ್ಯಾಮ್‌ ಬಿಲ್ಲಿಂಗ್ಸ್, ಮೊಯಿನ್‌ ಅಲಿ, ಸ್ಯಾಮ್ ಕರ್ರನ್‌, ಟಾಮ್‌ ಕರ್ರನ್‌, ಆದಿಲ್‌ ರಶೀದ್‌, ಮಾರ್ಕ್‌ವುಡ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3rcc69X

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...