ನಾನು ನಾಸ್ತಿಕನಲ್ಲ, ಆದರೆ ಆಷಾಢಭೂತಿತನದ ಭಕ್ತಿ ನನ್ನದಲ್ಲ: ರಾಯರ ಪೂಜೆ ಬಳಿಕ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು: ಉತ್ತರಹಳ್ಳಿಯ ಪೂರ್ಣಪ್ರಜ್ಞ ಲೇಔಟ್‌ನಲ್ಲಿರುವ ಕಲ್ಪವೃಕ್ಷ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಶೇಷ ಆಹ್ವಾನದ ಮೇರೆಗೆ ಮಠಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಶ್ರೀ ರಾಯರ ಬೃಂದಾವನಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು. ಶ್ರೀ ಮಠದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ನಾಸ್ತಿಕನಲ್ಲ. ನನಗೆ ದೇವರ ಮೇಲೆ ಭಕ್ತಿಯಿದೆ. ಮನುಷ್ಯನಿಗೆ ದೇವರ ಮೇಲೆ ನಿಜ ಭಕ್ತಿ ಇರಬೇಕು. ಆಷಾಢಭೂತಿತನದ ಭಕ್ತಿ ಒಳ್ಳೆಯದಲ್ಲ. ನಾನು ದೇವರನ್ನು ನಂಬಿದ್ದೇನೆ. ಆದರೆ, ದೇವರೊಬ್ಬ ನಾಮ ಹಲವು ಎಂದುಕೊಂಡಿದ್ದೇನೆ. ಹೀಗಾಗಿ, ದೇವರು ಎಲ್ಲರಲ್ಲೂಇದ್ದಾನೆ. ಮನುಷ್ಯನಲ್ಲಿ ದೇವರನ್ನು ಕಾಣುವ ಮನಸ್ಥಿತಿ ಇದ್ದರೆ ಸಾಕು ದೇವರು ಕಾಣುತ್ತಾನೆ'' ಎಂದರು. ಬಸವಾದಿ ಶರಣರು 'ಉಳ್ಳವರು ದೇವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯಾ, ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂದು ಹೇಳಿದ್ದಾರೆ. ದೇವರು ನಮ್ಮನ್ನು ನಿತ್ಯ ನೋಡುತ್ತಿದ್ದಾನೆ. ದೇವರ ಅನುಗ್ರಹ ಪಡೆದುಕೊಳ್ಳುವುದಕ್ಕೆ ದೇವಸ್ಥಾನಕ್ಕೆ ಹೋಗಬೇಕಿಲ್ಲ. ದೇವಸ್ಥಾನಕ್ಕೆ ಹೋದವರೆಲ್ಲಆಸ್ತಿಕರಲ್ಲ, ದೇವಸ್ಥಾನಕ್ಕೆ ಹೋಗಲಿಲ್ಲಎಂದ ಮಾತ್ರಕ್ಕೆ ನಾಸ್ತಿಕರೂ ಅಲ್ಲ. ಮತ್ತೊಬ್ಬರಿಗೆ ಒಳ್ಳೆಯದನ್ನು ಬಯಸಿ, ಒಳ್ಳೆಯದನ್ನು ಮಾಡಿದರೆ ಸಾಕು ದೇವರು ಮೆಚ್ಚುತ್ತಾನೆ'' ಎಂದು ಪ್ರತಿಪಾದಿಸಿದರು. ಶ್ರೀ ಮಠದ ಸಂಸ್ಥಾಪಕ ಕೆ.ಆರ್‌. ನಾಗೇಂದ್ರ, ಸಿದ್ದರಾಮಯ್ಯ ಅವರನ್ನು ಸನ್ಮಾನಿಸಿದರು. ಈ ವೇಳೆ ಶಾಸಕ ಬೈರತಿ ಸುರೇಶ್‌, ಮಾಜಿ ಶಾಸಕರಾದ ಸರೋವರ ಶ್ರೀನಿವಾಸ್‌, ಅಶೋಕ್‌ ಪಟ್ಟಣ್‌ ಅವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು.


from India & World News in Kannada | VK Polls https://ift.tt/3vXW7js

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...