ಬೆಂಗಳೂರು: ಮಾರ್ಚ್ ತಿಂಗಳ ಆರಂಭದಿಂದಲೂ ಹಂತಹಂತವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣ ಖರೀದಿಸಲು ಹೊರಟಿರುವವರಿಗೆ ಗಾಯದ ಮೇಲೆ ಬರೆ ಎಳೆದಂತೆ ಭಾಸವಾಗ್ತಿತ್ತು. ಈ ವಾರವೂ ಇದಕ್ಕೆ ಹೊರತೇನಲ್ಲ. ಆದರೆ ಶುಕ್ರವಾರ ಬೆಳಗಿನ ವೇಳೆ ನೋಡೋದಾದ್ರೆ, 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ ಇಳಿಕೆ ಕಂಡು ₹4,491 ದಾಖಲಾಗಿದೆ. ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಶುಕ್ರವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ ₹41,700ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹45,490 ರೂಪಾಯಿಗೆ ದಾಖಲಾಗಿದೆ. ಬೆಳ್ಳಿ ದರ: ದೇಶದಲ್ಲಿ ಬೆಳ್ಳಿ ಬೆಲೆಯಲ್ಲಿ ಇಂದು ಒಂದು ಕೆಜಿಗೆ ₹67,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ₹67,500 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹71,800 ರೂ ನಿಗದಿಯಾಗಿದೆ. ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ: ಬೆಂಗಳೂರು: ₹41,700(22 ಕ್ಯಾರಟ್) ₹45,600(24 ಕ್ಯಾರಟ್) ಚೆನ್ನೈ: ₹42,300 (22 ಕ್ಯಾರಟ್) ₹46,360 (24 ಕ್ಯಾರಟ್) ದಿಲ್ಲಿ: ₹44,190 (22 ಕ್ಯಾರಟ್), ₹48,210 (24 ಕ್ಯಾರಟ್) ಹೈದರಾಬಾದ್: ₹41,900 (22 ಕ್ಯಾರಟ್) ₹45,490 (24 ಕ್ಯಾರಟ್) ಕೋಲ್ಕತಾ: ₹44,390 (22 ಕ್ಯಾರಟ್), ₹46,990 (24 ಕ್ಯಾರಟ್) ಬೆಂಗಳೂರು: ₹41,700(22 ಕ್ಯಾರಟ್) ₹45,490 (24 ಕ್ಯಾರಟ್) ಮುಂಬಯಿ: ₹42,990(22 ಕ್ಯಾರಟ್), ₹43,990 (24 ಕ್ಯಾರಟ್) ಮೈಸೂರು: ₹42,000(22 ಕ್ಯಾರಟ್) ₹45,490 (24 ಕ್ಯಾರಟ್) ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ತುಸು ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿ ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.
from India & World News in Kannada | VK Polls https://ift.tt/3lPUvUe