ಬೆಂಗಳೂರು: ಮಾಜಿ ಸಚಿವ ಜೊತೆಗೆ ಸಿ.ಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಮತ್ತೊಂದು ವಿಡಿಯೋ ಬಿಡುಗಡೆ ಆಗಿದ್ದು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ನಿರ್ಧಾರ ಮಾಡಿರುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ. 29 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ದೂರು ನೀಡುವ ಕುರಿತಾಗಿ ಯುವತಿ ಹೇಳಿಕೊಂಡಿದ್ದಾರೆ. ಕರ್ನಾಟಕದ ಎಲ್ಲಾ ಜನತೆ ಹಾಗೂ ತಂದೆ ತಾಯಿಯರ ಆಶೀರ್ವಾದದ ಜೊತೆಗೆ ಎಲ್ಲಾ ಪಕ್ಷದ ನಾಯಕರು, ಸಂಘಟನೆಗಳು ಬೆಂಬಲ ಕೊಟ್ಟಿದ್ದಾರೆ.ಇಷ್ಟು ದಿನ ಜೀವ ಭಯದಿಂದ ಬದುಕುತ್ತಿದ್ದೆ. ಆದರೆ ಇವಾಗ ಧೈರ್ಯ ಬಂದಿದೆ. ಈ ನಿಟ್ಟಿನಲ್ಲಿ ತನ್ನ ವಕೀಲರಾದ ಜಗದೀಶ್ ಅವರ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು ಮಾಡುತ್ತಿದ್ದೇನೆ ಎಂದು ಯುವತಿ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
from India & World News in Kannada | VK Polls https://ift.tt/3rxcNLj