ಮಂಗಳೂರು: ಪತಿಯನ್ನು ಯಾರೋ ಬಲವಂತವಾಗಿ ಅಪಹರಿಸಿ ಅಕ್ರಮ ಬಂಧನದಲ್ಲಿರಿಸಿ ಅನ್ಯಧರ್ಮೀಯ ಯುವತಿಯ ಜತೆ ವಿವಾಹ ಮಾಡಿಸಿದ್ದಾರೆಂದು ಆರೋಪಿಸಿ ಪತ್ನಿ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಗರ ಬೋಳಾರ ನಿವಾಸಿ ಗಂಗಾಧರ್ (62) ಎಂಬವರು ಯುವತಿಯೊಬ್ಬಳ ಜತೆಯಿರುವ ಫೋಟೋವನ್ನು ಪೊಲೀಸ್ ದೂರಿನ ಜತೆ ನೀಡಲಾಗಿದೆ. ಗಂಗಾಧರ್ ಬಿಲ್ಡರ್ ಹಾಗೂ ಹೋಲ್‌ಸೇಲ್ ವ್ಯಾಪಾರಿಯಾಗಿದ್ದು, ಉದ್ಯೋಗ ನಿಮಿತ್ತ ಬೇರೆ ಬೇರೆ ಊರುಗಳಿಗೆ ಹೋಗುತ್ತಿರುತ್ತಾರೆ. ನಮ್ಮ ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆ ಎಂದು ದೂರಿನಲ್ಲಿ ಗಂಗಾಧರ್ ಅವರ ಪತ್ನಿ ಉಲ್ಲೇಖಿಸಿದದ್ದಾರೆ. ಉದ್ಯೋಗ ನಿಮಿತ್ತ ಹೊರಗೆ ಹೋದವರು 2021ನೇ ಜನವರಿ ಕೊನೆ ವಾರದಿಂದ ಮನೆಗೆ ಬಂದಿಲ್ಲ. ಅವರ ಮೊಬೈಲ್‌ಗೆ ಕರೆ ಮಾಡಿದಾಗ ಫೆ.8ರಂದು ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಆ ಬಳಿಕ ಅವರು ಕರೆಗೆ ಸಿಕ್ಕಿಲ್ಲ. ಮಾ.15ರಂದು ನನ್ನ ಪತಿಯನ್ನು ಮುಸ್ಲಿಂ ಯುವತಿ ಜತೆ ಬಲವಂತವಾಗಿ ವಿವಾಹ ಮಾಡಿರುವ ಬಗ್ಗೆ ಸ್ನೇಹಿತರು ಸಾಕ್ಷಿ ಸಮೇತ ತಿಳಿಸಿದ್ದಾರೆ. ಆದ್ದರಿಂದ ಇದಕ್ಕೆ ಕಾರಣರಾದ ಆರೋಪಿಗಳನ್ನು ಹಾಗೂ ತನ್ನ ಪತಿಯನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಪತ್ನಿ ಯಶೋದ ದೂರಿನಲ್ಲಿ ಆಗ್ರಹಿಸಿದ್ದಾರೆ. ತನಿಖೆಗೆ ವಿಹಿಂಪ ಆಗ್ರಹ: ಹೆಣ್ಮಕ್ಕಳನ್ನು ಛೂಬಿಟ್ಟು ಲವ್ ಜಿಹಾದ್ ನಡೆಸಲಾಗುತ್ತಿದ್ದು, ವಿಶೇಷ ತನಿಖೆ ನಡೆಸುವಂತೆ ವಿಶ್ವ ಹಿಂದೂ ಪರಿಷತ್ ಶರಣ್ ಪಂಪ್‌ವೆಲ್ ಆಗ್ರಹಿಸಿದ್ದಾರೆ.
from India & World News in Kannada | VK Polls https://ift.tt/3shs4ks