ಅಡ್ಯಾರ್‌ : ಮದುವೆಯಾದ ಮರುದಿನ ಮುಂಜಾನೆ ಹೃದಯಾಘಾತದಿಂದ ವಧು ಸಾವು, ಮನೆಯಲ್ಲಿ ಸ್ಮಶಾನ ಮೌನ

ಮಂಗಳೂರು: ಮನೆಯಲ್ಲಿ ಮದುವೆಯ ಸಂಭ್ರಮ ಕಳೆಕಟ್ಟಿತ್ತು. ದೂರದ ಊರುಗಳಿಂದ ನೆಂಟರು ಕೂಡ ಮನೆಗೆ ಬಂದು ಸೇರಿದ್ದರು. ಇತ್ತ ನವ ವಧುಗಳು ಕೂಡ ನೂರಾರು ಕನಸುಗಳನ್ನು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಆ ದೇವರಿಗೆ ಇವರಿಬ್ಬರು ಒಂದಾಗೋದು ಇಷ್ಟವಿರಲಿಲ್ಲ ಅನಿಸುತ್ತೆ. ಮದುವೆಯ ದಿನದ ರಾತ್ರಿಯೇ ಮದುಮಗಳು ಹೃದಯಾಘಾತದಿಂದ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಹೌದು, ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್‌ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ಲ ಕರೀಂ ಹಾಜಿಯ ಪುತ್ರಿ ಲೈಲಾ ಆಫಿಯಾ (23) ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮದುಮಗ ಮುಬಾರಕ್‌ ಎಂಬವರೊಂದಿಗೆ ಭಾನುವಾರ ನಡೆದಿತ್ತು. ಅಡ್ಯಾರ್‌ ಕಣ್ಣೂರು ಜುಮಾ ಮಸ್ಜಿದ್‌ನಲ್ಲಿ ಭಾನುವಾರ ನಿಖಾಹ್‌ ನಡೆದಿದ್ದು, ಬಳಿಕ ಅಡ್ಯಾರ್‌ ಗಾರ್ಡನ್‌ನಲ್ಲಿ ಔತಣಕೂಟ ಅದೇ ದಿನ ರಾತ್ರಿ ಏರ್ಪಡಿಸಲಾಗಿತ್ತು. ಇನ್ನು ಔತಣ ಕೂಟದ ಮುಗಿದ ಬಳಿಕ ಮದುಮಗ ಮುಬಾರಕ್‌ ಪತ್ನಿಯನ್ನು ಸಂಪ್ರಾದಾಯದಂತೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಮದುವೆಯ ಸಂಭ್ರಮದಲ್ಲಿದ್ದ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ. ಮಗಳನ್ನು ಕಳೆದುಕೊಂಡ ನೋವಿನಲ್ಲಿ ಪೋಷಕರು ಕಣ್ಣೀರು ಹಾಕುತ್ತಿದ್ದರೆ. ಇತ್ತ ಕೈ ಹಿಡಿದು ದಿನ ಕಳೆಯೋದರೊಳಗೆ ಸಾವನಪ್ಪಿರುವ ಪತ್ನಿಯ ನೆನೆದರು ವರ ದುಃಖತಪ್ತನಾಗಿದ್ದಾನೆ.


from India & World News in Kannada | VK Polls https://ift.tt/3uJOlZN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...