ಪುತ್ತೂರು: ನಗರ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಜುವೆಲ್ಲಸ್೯ ಮಳಿಗೆಯೊಂದಕ್ಕೆ ಬುಧವಾರ ರಾತ್ರಿ ನುಗ್ಗಿರುವ ಕಳ್ಳರು ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ. ಮುಖ್ಯ ರಸ್ತೆಯ ಪಕ್ಕದಲ್ಲಿರುವ ಶ್ರೀಧರ್ ಭಟ್ ಆಂಡ್ ಬ್ರದಸ್೯ ಎಂಬ ವಾಣಿಜ್ಯ ಮಳಿಗೆಯ ಒಂದು ಪಾಶ್ವ ೯ದಲ್ಲಿ ಶ್ರೀಧರ ಭಟ್ ಜುವೆಲಸ್೯ ಎಂಬ ಚಿನ್ನಾಭರಣಗಳ ಮಳಿಗೆಯಿದೆ. ಜ್ಯುವೆಲ್ಲರ್ಸ್ ನ ರೋಲಿಂಗ್ ಶೆಟರ್ ತೆಗೆದು ಒಳಗಿನ ಸ್ಲೈಡ್ ಗೇಟ್ ನ ಬೀಗ ಒಡೆದ ಕಳ್ಳರು ಒಳನುಗಿ ಚಿನ್ನಾಭರಣ, ಬೆಳ್ಳಿಯ ಸಾಮಾಗ್ರಿ ಕಳವು ಮಾಡಿದ್ದಾರೆ. ಗುರುವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ವಿಶೇಷವೆಂದರೆ ಈ ಮಳಿಗೆಯ ಬಲಭಾಗದಲ್ಲಿ ಕೇವಲ 50 ಮೀಟರ್ ಅಂತರದಲ್ಲಿ ನಗರ ಠಾಣೆಯಿದೆ. ಎಡಕ್ಕೆ 25 ಮೀಟರ್ ದೂರದಲ್ಲಿ ಮಹಿಳಾ ಠಾಣೆಯಿದೆ. ಹಿಂಭಾಗದಲ್ಲಿ 25 ಮೀಟರ್ ಅಂತರದಲ್ಲಿ ಟ್ರಾಫಿಕ್ ಠಾಣೆಯಿದೆ.
from India & World News in Kannada | VK Polls https://ift.tt/3tRKfh4