ಹೊಸ ಆಡಿಯೋದಲ್ಲಿ ಡಿಕೆಶಿ ಹೆಸರು ಉಲ್ಲೇಖ; ರೇಪ್‌ ಕೇಸ್‌ಗೂ ಹೆದರಲ್ಲ ಎಂದ ರಮೇಶ್‌ ಜಾರಕಿಹೊಳಿ!

ಬೆಂಗಳೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಅಶ್ಲೀಲ ಸಿಡಿ ಪ್ರಕರಣ ಶುಕ್ರವಾರ ಒಮ್ಮಿಂದೊಮ್ಮೆಗೇ ಹಲವು ತಿರುವುಗಳೊಂದಿಗೆ ರೋಚಕ ಘಟ್ಟ ತಲುಪಿದೆ. ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ತನ್ನನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ಸಿ.ಡಿಯಲ್ಲಿದ್ದ ಯುವತಿ ಇದೇ ಮೊದಲ ಬಾರಿ ಪೊಲೀಸರಿಗೆ ದೂರು ನೀಡಿದ್ದು, ಇದನ್ನು ಆಧರಿಸಿ ಎಫ್‌ಐಆರ್‌ ಕೂಡಾ ದಾಖಲಾಗಿದೆ. ಇದಕ್ಕೆ ಖಡಕ್‌ ಆಗಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ, ‘ಲೈಂಗಿಕ ದೌರ್ಜನ್ಯವನ್ನು ರೇಪ್‌ ಕೇಸ್‌ ಹಾಕಿದರೂ ಎದುರಿಸಬಲ್ಲೆ ಎಂದು ಸವಾಲು ಹಾಕಿದ್ದಾರೆ. ಇದರ ಬೆನ್ನಿಗೇ ಯುವತಿ ತನ್ನ ಮನೆಯವರೊಂದಿಗೆ ಮಾತನಾಡಿದ್ದೆಂದು ಹೇಳಲಾದ ಹಳೆಯ ಆಡಿಯೊವೊಂದು ಪ್ರತ್ಯಕ್ಷವಾಗಿದ್ದು, ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಹೆಸರು ಕೇಳಿಸಿದೆ. ಹೀಗೆ ತಂತ್ರ-ಪ್ರತಿತಂತ್ರಗಳ ನಡುವೆ ಸಿ.ಡಿ ಪ್ರಕರಣ ಮುಂದೆ ಸಾಗುತ್ತಿದೆ. ಬಹಿರಂಗೊಂಡಿರು ಆಡಿಯೋದಲ್ಲಿ ಯುವತಿ ‘ತಾನು ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇರುವ ಸ್ಥಳದಲ್ಲಿದ್ದು ಅವರನ್ನು ಭೇಟಿ ಮಾಡುತ್ತಿದ್ದೇನೆ’ ಎಂದು ಮಾ.2ರಂದು ಗೆಳೆಯನ ಜತೆ ಕುಟುಂಬದವರೊಂದಿಗೆ ಫೋನ್‌ನಲ್ಲಿ ಹೇಳಿದ್ದು, ಆಡಿಯೊ ಬಿಡುಗಡೆಯ ಹಿಂದೆ ಮಹಾನಾಯಕ ಇದ್ದಾರೆ ಎಂದು ರಮೇಶ್‌ ಜಾರಕಿಹೊಳಿ ಆರೋಪಿಸುತ್ತಿರುವ ನಡುವೆಯೇ ಆ ಮಹಾನಾಯಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಇರಬಹುದೇ ಎಂಬ ಅನುಮಾನಕ್ಕೆ ಈ ಆಡಿಯೊ ಪುಷ್ಟಿ ನೀಡಿದೆ. ರಮೇಶ್‌ ಜಾರಕಿಹೊಳಿ ವಿರುದ್ಧ ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ಸಂಜೆ ಬಿಡುಗಡೆ ಮಾಡಲಾದ 6 ನಿಮಿಷ 59 ಸೆಕೆಂಡ್‌ಧಿಗಳ ಆಡಿಯೊದಲ್ಲಿ ಯುವತಿ, ಯುವತಿ ಸಹೋದರ ಮತ್ತು ಯುವತಿಯ ಗೆಳೆಯ ಆಕಾಶ್‌ ಮಾತನಾಡಿದ್ದಾರೆ. ಮಾತನಾಡುವಾಗ ಯುವತಿಯ ಸಹೋದರ ತೀವ್ರ ಆತಂಕಗೊಂಡಿದ್ದಾನೆ. ಮತ್ತೊಂದೆಡೆ ಯುವತಿ ಅಜ್ಜಿ ಮತ್ತು ತಾಯಿ ಕೂಡ ಮಾತನಾಡಿದ್ದು, ಈ ಎಲ್ಲ ವ್ಯವಹಾರಗಳನ್ನು ಬಿಟ್ಟು ಸುಮ್ಮನೆ ಮನೆಗೆ ಬಾ ಎಂದು ಕರೆದಿದ್ದಾರೆ. ಆದರೆ, ಯುವತಿ ನನಗೆ ಏನೂ ಆಗುವುದಿಲ್ಲ. ಡಿ.ಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಲು ಬಂದಿದ್ದೇನೆ. ಎಲ್ಲವೂ ಸರಿ ಹೋಗುತ್ತದೆ ಎಂದಿದ್ದಾಳೆ. ‘ನನ್ನ ಮೇಲೆ, ತಾಯಿ ಮೇಲೆ ಮತ್ತು ಕೃಷ್ಣನ ಮೇಲೆ ಆಣೆ. ಆ ವಿಡಿಯೊದಲ್ಲಿ ಇರುವುದು ನಾನಲ್ಲ. ನ್ಯೂಸ್‌ನಲ್ಲಿ ತೋರಿಸುತ್ತಿರುವುದು ಗ್ರಾಫಿಕ್ಸ್‌. ಆಡಿಯೊ ಮಿಕ್ಸ್‌ ಮಾಡಲಾಗಿದೆ. ಅದರಲ್ಲಿ ಮಾತನಾಡಿರುವುದು ನಾನಲ್ಲ. ಬೇರೆಯವರು ಮಾಡಿದ್ದಾರೆ. ನನಗೆ ಯಾರೆಂದು ಗೊತ್ತಿಲ್ಲ. ನಾನು ಅದರಲ್ಲಿ ಇಲ್ಲ ಎಂದು ಯುವತಿ ಹೇಳಿದ್ದಾಳೆ. ಮಾ.2ರಿಂದ ಭೂಗತವಾಗಿದ್ದ 25 ವರ್ಷದ ಯುವತಿ, ಶುಕ್ರವಾರ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿ, ವಕೀಲರ ಮೂಲಕ ದೂರು ನೀಡುತ್ತೇನೆ ಎಂದು ತಿಳಿಸಿದ್ದರು. ಅದರಂತೆ, ವಕೀಲ ಜಗದೀಶ್‌ ಅವರು ಪೊಲೀಸ್‌ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಿದರು. ಅವರನ್ನು ಕಬ್ಬನ್‌ಪಾರ್ಕ್ ಠಾಣೆಗೆ ತೆರಳಿ ದೂರು ನೀಡಲು ಕಳುಹಿಸಲಾಯಿತು. ದೂರು ಸ್ವೀಕರಿಸಿದ ಪೊಲೀಸರು, ಕಾನೂನು ತಜ್ಞರ ಜತೆ ಚರ್ಚಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಪೊಲೀಸರ ಮುಂದಿನ ಕ್ರಮವೇನು ಎನ್ನುವುದು ಕುತೂಹಲ ಕೆರಳಿಸಿದೆ. ಯುವತಿ ಮಾಡಿರುವ ಪ್ರಧಾನ ಆರೋಪಗಳು
  • ಕೆಲಸ ಕೊಡಿಸುತ್ತೇನೆಂದು ಹೇಳಿ ದೈಹಿಕವಾಗಿ ಬಳಕೆ
  • ದಿಲ್ಲಿ, ಬೆಂಗಳೂರಿನಲ್ಲಿ ಮೂರು ಬಾರಿ ದೌರ್ಜನ್ಯ
  • ಕೆಲಸದ ವಿಷಯ ಪ್ರಸ್ತಾಪಿಸಿದ್ದಕ್ಕೆ ಅವಾಚ್ಯ ನಿಂದನೆ
  • ಪ್ರಭಾವದಿಂದ ದೂರು ನೀಡದಂತೆ ತಡೆ, ಕೊಲೆಗೆ ಯತ್ನ
  • ನನಗೆ, ಕುಟುಂಬಕ್ಕೆ ರಕ್ಷಣೆ ನೀಡಿದರೆ ಎಸ್‌ಐಟಿ ಮುಂದೆ ಹಾಜರು
ಮುಂದಿನ ಕ್ರಮ ಏನು?
  • ಬಂಧನ ಭೀತಿಯಿಂದ ಜಾರಕಿಹೊಳಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಬಹುದು.
  • ಎಫ್‌ಐಆರ್‌ ದಾಖಲಾಗಿರುವುದರಿಂದ ತಲೆ ಮರೆಸಿಕೊಂಡಿರುವ ಯುವತಿ ಹೇಳಿಕೆ ನೀಡಲು ಪೊಲೀಸರ ಮುಂದೆ ಬರಲೇಬೇಕು.
  • ಮಹಿಳಾ ತನಿಖಾಧಿಕಾರಿ ಎದುರು ಮತ್ತು ಕೋರ್ಟ್‌ನಲ್ಲಿ ಹೇಳಿಕೆ ದಾಖಲಿಸಬೇಕು.
  • ಆರೋಪಕ್ಕೆ ಪೂರಕವಾದ ಸಾಕ್ಷ್ಯ ಒದಗಿಸುವ ಜವಾಬ್ದಾರಿ ಯುವತಿ ಮೇಲಿದೆ.
  • ರಮೇಶ್‌ ಜಾರಕಿಹೊಳಿ ಅವರನ್ನು ಎಸ್‌ಐಟಿ ವಿಚಾರಣೆ ನಡೆಸುವುದು ಅನಿವಾರ‍್ಯ.
  • ಯುವತಿ ಸಮರ್ಥ ಸಾಕ್ಷಿ ನೀಡಿದರೆ ಆರೋಪಿಯನ್ನು ಎಸ್‌ಐಟಿ ಬಂಧಿಸಬಹುದು.
ಯಾವ ಸೆಕ್ಷನ್‌ಗಳಡಿ ಕೇಸ್‌?
  • ಐಟಿ ಕಾಯಿದೆ ಕಲಂ 67(ಎ)' ಲೈಂಗಿಕತೆಗೆ ಸಂಬಂಧಿಸಿದ ವಿಡಿಯೊ ಬಿಡುಗಡೆ
  • ಐಪಿಸಿ ಕಲಂ 354(ಎ): ದೈಹಿಕ ಸಂಬಂಧಕ್ಕೆ ಬೇಡಿಕೆ, ಮಹಿಳೆ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲ ವಿಡಿಯೊ ತಯಾರಿ
  • ಐಪಿಸಿ ಕಲಂ 506 - ಅಪರಾಧಿಕ ಪ್ರಚೋದನೆ
  • ಐಪಿಸಿ ಕಲಂ 504 - ಸಾರ್ವಜನಿಕ ಶಾಂತಿಭಂಗ ಉದ್ದೇಶದಿಂದ ಅಪಮಾನ
  • ಐಪಿಸಿ ಕಲಂ 376(ಸಿ) - ಅಧಿಕಾರ ದುರ್ಬಳಕೆ ಮಾಡಿ ವಶದಲ್ಲಿಟ್ಟು ಲೈಂಗಿಕ ಸಂಪರ್ಕ
  • ಐಪಿಸಿ ಕಲಂ 417 - ಆಮಿಷ ಒಡ್ಡಿ ವಂಚನೆ


from India & World News in Kannada | VK Polls https://ift.tt/3w5fxTy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...