ಉತ್ತರ ಪ್ರದೇಶ: ಹೋಳಿ ಬಣ್ಣದಿಂದ ರಕ್ಷಣೆ ಪಡೆಯಲು 40 ಮಸೀದಿಗಳಿಗೆ ಪ್ಲಾಸ್ಟಿಕ್‌ ಹೊದಿಕೆ

ಲಖನೌ: ಹೋಳಿ ಆಚರಣೆ ವೇಳೆ ದುಷ್ಕರ್ಮಿಗಳು ಮಸೀದಿಗಳ ಮೇಲೆ ಬಣ್ಣಗಳನ್ನು ಎರಚಿ ಕೋಮುಸೌಹಾರ್ದತೆ ಕೆಡವಲು ಯತ್ನ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶಹಜಹಾನ್‌ಪುರದ 40 ಮಸೀದಿಗಳನ್ನು ಪ್ಲಾಸ್ಟಿಕ್‌ ಹೊದಿಕೆಯಿಂದ ಮುಚ್ಚಿ ರಕ್ಷಿಸಲಾಗಿದೆ. ''ಮಾರ್ಚ್ 28ರಂದು ಹೋಳಿಕಾ ದಹನ ನಡೆಯಲಿದೆ. ಅಲ್ಲಿಯವರೆಗೂ ಮಸೀದಿಗಳಿಗೆ ಪ್ಲಾಸ್ಟಿಕ್‌ ಮುಚ್ಚುಗೆ ಇರಲಿದೆ. ಜತೆಗೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 200 ಶಂಕಿತ ಆರೋಪಿಗಳ ಮೇಲೆ ನಿಗಾ ಇರಿಸಲಾಗಿದೆ. ಡ್ರೋನ್‌ ಕ್ಯಾಮೆರಾಗಳನ್ನು ಕೂಡ ಬಳಸಲಾಗುತ್ತಿದೆ,'' ಎಂದು ಪೊಲೀಸ್‌ ಆಯುಕ್ತ ಸಂಜಯ್‌ ಕುಮಾರ್‌ ಹೇಳಿದ್ದಾರೆ. 18ನೇ ಶತಮಾನದಿಂದಲೂ ಶಹಜಹಾನ್‌ಪುರದಲ್ಲಿ ವಿಶೇಷವಾಗಿ ಹೋಳಿ ಅಂಗವಾಗಿ ಮೆರವಣಿಗೆ ನಡೆಸಲಾಗುತ್ತದೆ. ಲಾತ್‌ ಸಾಬ್‌ ಎಂದು ಕರೆಯಲಾಗುವ ಈ ಮೆರವಣಿಗೆಯಲ್ಲಿ ಎಮ್ಮೆ ಮೇಲೆ ಬ್ರಿಟಿಷ್‌ ಅಧಿಕಾರಿಯನ್ನು ಹೋಲುವ ಗೊಂಬೆಯನ್ನು ಕೂರಿಸಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಗೊಂಬೆಗೆ ಚಪ್ಪಲಿಯಿಂದ ಹೊಡೆಯಲಾಗುತ್ತದೆ. ಶಹಜಹಾನ್‌ಪುರದಲ್ಲಿ 1857ರವರೆಗೂ ಹಿಂದು-ಮುಸ್ಲಿಂ ಎರಡೂ ಸಮುದಾಯಗಳಲ್ಲಿ ಜನಪ್ರಿಯನಾಗಿದ್ದ ನವಾಬ ಅಬ್ದುಲ್ಲಾಖಾನ್‌ನನ್ನು ಒಂಟೆ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುತ್ತಿತ್ತು. ಈ ಒಗ್ಗಟ್ಟು ಸಹಿಸದ ಬ್ರಿಟಿಷ್‌ ಅಧಿಕಾರಿಗಳು 1858ರ ಹೋಳಿ ಮೆರವಣಿಗೆ ದಾಳಿ ನಡೆಸಿದ್ದರು. ಹಿಂದೂ-ಮುಸ್ಲಿಂ ಎರಡೂ ಸಮುದಾಯಗಳ ನೂರಾರು ಜನ ದಾಳಿಯಲ್ಲಿ ಮೃತಪಟ್ಟಿದ್ದರು.


from India & World News in Kannada | VK Polls https://ift.tt/2QxdBCQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...