ಹೆಚ್ಚು ರೇಷನ್ ಬೇಕು ಅಂದ್ರೆ 20 ಮಕ್ಕಳನ್ನು ಹೆರಬೇಕಿತ್ತು: ಉತ್ತರಾಖಂಡ್ ಸಿಎಂ ಬಡವರಾಗಿರಬೇಕಿತ್ತು!

ರಾಮನಗರ್: ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ, ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಪ್ರಧಾನಿ ಮೋದಿ ಅವರನ್ನು ಪ್ರಭು ಶ್ರೀರಾಮನಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ತಿರತ್ ಸಿಂಗ್ ರಾವತ್, ಮಹಿಳೆಯರ ತುಂಡುಡುಗೆ ಕುರಿತು ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದರು. ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ತಿರತ್ ಸಿಂಗ್ ರಾವತ್, ಲಾಕ್‌ಡೌನ್ ಕಾಲದಲ್ಲಿ ಹೆಚ್ಚು ಬೇಕು ಎಂದಾದರೆ 20 ಮಕ್ಕಳನ್ನು ಹೆರಬೇಕಿತ್ತು ಎಂದು ಹೇಳಿ ಬಡತನವನ್ನೇ ಗೇಲಿ ಮಾಡಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರ ಪ್ರತಿಯೊಂದು ಮನೆಗೂ ಐದು ಕೆಜಿ ಪಡಿತರವನ್ನು ವಿತರಣೆ ಮಾಡಿತ್ತು. 10 ಜನರಿರರುವ ಮನೆಗೆ 50 ಕೆಜಿ ರೇಷನ್ ಬರುತ್ತಿತ್ತು. ನಿಮಗೆ ಹೆಚ್ಚು ರೇಷನ್ ಬೇಕು ಎಂದಾಗಿದ್ದರೆ 20 ಮಕ್ಕಳನ್ನು ಹೆರಬೇಕಿತ್ತು. ಆಗ 100 ಕೆಜಿ ಪಡಿತರ ನಿಮ್ಮ ಮನೆಗೆ ಬಂದು ಬೀಳುತ್ತಿತ್ತು ಎಂದು ರಾವತ್ ವ್ಯಂಗ್ಯವಾಡಿದ್ದಾರೆ. ಎರಡು ಮಕ್ಕಳನ್ನು ಹೆತ್ತವರು ಹೆಚ್ಚು ರೇಷನ್ ಕೇಳುತ್ತಿದ್ದಾರೆ. 20 ಮಕ್ಕಳನ್ನು ಹೆತ್ತಿದ್ದರೆ ಸರ್ಕಾರ ಹೆಚ್ಚು ರೇಷನ್ ಕೊಡುತ್ತಿರಲಿಲ್ಲವೇ ಎಂದು ರಾವತ್ ಪ್ರಶ್ನಿಸಿದ್ದಾರೆ. ಮಾರಕ ಕೊರೊನಾ ವೈರಸ್ ಹಾವಳಿಯ ಕಾರಣಕ್ಕೆ ಲಾಕ್‌ಡೌನ್ ಹೇರಿದ್ದ ಸಂದರ್ಭದಲ್ಲಿ, ಕೇಂದ್ರ ಸರ್ಕಾರ ಬಿಪಿಎಲ್‌ ಹೊಂದಿರುವ ಪ್ರತಿ ಮನೆಗೆ ಐದು ಕೆಜಿ ಪಡಿತರ ವನ್ನು ವಿತರಣೆ ಮಾಡಿತ್ತು. ಆದರೆ ಮಕ್ಕಳ ಸಂಖ್ಯೆ ಕಡಿಮೆ ಇರುವ ಮನೆಗೆ ಕಡಿಮೆ ಪ್ರಮಾಣದ ರೇಷನ್ ಬರುತ್ತಿದೆ ಎಂಬ ಆರೋಪಕ್ಕೆ ಪ್ರತಿಯಾಗಿ, 20 ಮಕ್ಕಳನ್ನು ಹೆತ್ತು ಹೆಚ್ಚು ರೇಷನ್ ಪಡೆಯಿರಿ ಎಂದು ರಾವತ್ ಸಲಹೆ ನೀಡಿ ವಿವಾದ ಸೃಷ್ಟಿಸಿದ್ದಾರೆ.


from India & World News in Kannada | VK Polls https://ift.tt/3cVayMj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...