ವಾಷಿಂಗ್ಟನ್: ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಂದ ಕಾಡಿ ಬೇಡಿ ಪಡೆದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಪ್ರಭಾವ ಶೂನ್ಯ ಎಂದು ಅಮೆರಿಕದ ಅಧ್ಯಯನ ವರದಿಯೊಂದು ತಿಳಿಸಿದೆ. ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಅಥವಾ ಕೋವಿಡ್-19 ರೋಗಿಯ ಚಿಕಿತ್ಸಾ ಭಾಗವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಯಾವ ಪರಿಣಾಮವನ್ನೂ ಬೀರಿಲ್ಲ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆ(NIH)ಯ ಸಂಶೋಧನಾ ವರದಿ ಹೇಳಿದೆ. ಕೊರೊನಾ ವೈರಸ್ ವಿರುದ್ಧ ಒರಿಣಾಮಕಾರಿ ಔಷಧಿಯಾಗಬಲ್ಲದು ಎಂಬ ಆಶಾಭಾವನೆಯಿಂದ ಇದುವರೆಗೂ ಭಾರತವೂ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಂದ ಸುಮಾರು 3 ಕೋಟಿಗೂ ಅಧಿಕ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಆಮದು ಮಾಡಿಕೊಂಡಿದೆ. ಆದರೆ ಈ ಮಾತ್ರೆಗಳು ಚಿಕಿತ್ಸೆಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ನೀಡಿಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಕುರಿತು ಬಂದ ವರದಿಯನ್ನು ಪರಿಶೀಲಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳ ಬಳಕೆಯಿಂದಾಗಿ ಕೊರೊನಾ ವೈರಸ್ ಸೋಂಕು ಪೀಡಿತರಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವೆಂಟಿಲೇಟರ್ ಬಳಸುವ ಅಪಾಯವನ್ನು ಕಡಿಮೆ ಮಾಡಿಲ್ಲ ಎಂದು ಹೇಳಲಾಗಿದೆ. ವೈದ್ಯರು ಮತ್ತು ಆರೋಗ್ಯ ತಜ್ಞರ ವಿರೋಧದ ಹೊರತಾಗಿಯೂ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳು ಕೋವಿಡ್-19 ಚಿಕಿತ್ಸೆಯಲ್ಲಿ ಪರಿಣಾಮಕಾರಿ ಪಾತ್ರ ನಿರ್ವಹಿಸುತ್ತವೆ ಎಂದು ಟ್ರಂಪ್ ವಾದ ಮಂಡಿಸುತ್ತಲೇ ಇದ್ದರು. ಅದಾಗ್ಯೂ ಈ ಕುರಿತಾದ ಅಧ್ಯಯನ ಆರಂಭಿಕ ಹಂತದಲ್ಲಿದ್ದು, ಸಂಪೂರ್ಣ ವರದಿ ಬಂದ ಬಳಿಕವಷ್ಟೇ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಮೆರಿಕದ ಸ್ಪಷ್ಟಪಡಿಸಿದೆ.
from India & World News in Kannada | VK Polls https://ift.tt/34ZalUb