ಪ್ರಮೋದ ಹರಿಕಾಂತ ಬೆಳಗಾವಿ, ಬೇಸಿಗೆ ಆವರಿಸುತ್ತಿದ್ದಂತೆ ಎಲ್ಲೆಡೆ ನೀರಿನ ಅಭಾವ ಶುರುವಾಗಿದ್ದು, ಆತಂಕದ ನಡುವೆ ಕಾಪಾಡುವುದೇ ಸವಾಲಾಗುತ್ತಿದೆ. ರಾಜ್ಯದ ಗ್ರಾಮೀಣ,ನಗರ ಮತ್ತು ಹಳ್ಳಿ ಪ್ರದೇಶಗಳಲ್ಲಿ ಸಾಮಾಜಿಕ ಅಂತರದ ಮಹತ್ವ ಅರಿಯದಿರುವ ಬಗ್ಗೆ ಆಘಾತವಾಗುತ್ತಿದೆ. ಪ್ರವಾಹ ಸಂದರ್ಭದಲ್ಲಿ ಹಾಳಾಗಿರುವ ಕುಡಿಯುವ ನೀರಿನ ವ್ಯವಸ್ಥೆಗಳು ಇನ್ನೂ ಸರಿಯಾಗಿ ದುರಸ್ತಿಯಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳೂ ಬಹುತೇಕ ದುರಸ್ತಿಯಲ್ಲಿವೆ. ಕೆಲವಂತೂ ಚಾಲನೆ ಇಲ್ಲದೆ ಧೂಳು ಹಿಡಿಯುತ್ತಿವೆ. ಇದರಿಂದ ಎಲ್ಲೆಡೆ ನೀರಿನ ಪೂರೈಕೆಯಲ್ಲಿತೊಂದರೆಗಳು ಎದುರಾಗುತ್ತಿವೆ. ಹಾಗಾಗಿ ನಿಗದಿತ ಸಮಯಕ್ಕೆ ನಲ್ಲಿ ಮತ್ತು ಟ್ಯಾಂಕರ್‌ಗಳಲ್ಲಿ ಬರುವ ನೀರಿಗಾಗಿ ಜನರು ಮುಗಿಬೀಳುತ್ತಿದ್ದಾರೆ. ಇದರಿಂದ ಸಾಮಾಜಿಕ ಅಂತರ ಉಲ್ಲಂಘನೆ ವ್ಯಾಪಕವಾಗಿದೆ. ಈಗಾಗಲೇ ರಾಜ್ಯದಲ್ಲಿ ಕೊರೊನಾ ಸೋಂಕು ಅಪಾಯಕಾರಿ ಮಟ್ಟದಲ್ಲಿ ವಿಸ್ತರಿಸುತ್ತಿದೆ. ಲಾಕ್‌ಡೌನ್‌ನಿಂದಾಗಿ ಸೋಂಕು ಸಮುದಾಯದಲ್ಲಿ ವಿಸ್ತರಣೆ ಆಗದಂತೆ ಈವರೆಗೆ ತಡೆಯಲಾಗಿದೆ. ಹೀಗಿರುವಾಗ ನೀರು ಸಂಗ್ರಹ ಕಾರಣಕ್ಕೆ ಒಬ್ಬರಿಂದೊಬ್ಬರಿಗೆ ಸಂಪರ್ಕ ಏರ್ಪಟ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ. ನಗರಗಳಲ್ಲೂಇದೇ ಕತೆ: ಇದು ಕೇವಲ ಹಳ್ಳಿಗಳ ಸಮಸ್ಯೆ ಅಲ್ಲ. ನಗರ, ಪಟ್ಟಣಗಳಲ್ಲಿಯೂ ನೀರು ಸಂಗ್ರಹಿಸುವಾಗ ಸಾಮಾಜಿಕ ಅಂತರ ಪಾಲನೆ ಕಷ್ಟವಾಗುತ್ತಿದೆ. ನೀರಿನ ಅಭಾವವೂ ಜನರನ್ನು ಚಿಂತೆಗೀಡು ಮಾಡುತ್ತಿದೆ. ಹಾಗಾಗಿ ಇಂಥ ಸಂದರ್ಭದಲ್ಲಿನೀರು ಸಂಗ್ರಹಿಸುವುದಕ್ಕೂ ಜನರಿಗೆ ಮಾರ್ಗದರ್ಶನ ನೀಡಬೇಕಾದ ಸ್ಥಿತಿ ಸೃಷ್ಟಿಯಾಗಿದೆ.
ಕಳೆದ ವರ್ಷ ಪ್ರವಾಹದ ಹೊಡೆತದಿಂದ ಸುಧಾರಿಸಿಕೊಳ್ಳುತ್ತಿರುವ ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ನೀರಿನ ಮೂಲಗಳು ಸಮಸ್ಯೆಯಲ್ಲಿವೆ. ಬಹುಗ್ರಾಮ , ಶುದ್ಧ ಕುಡಿಯುವ ನೀರಿನ ಘಟಕಗಳು ತುರ್ತಾಗಿ ದುರಸ್ತಿಯಾಗಬೇಕಿದೆ. 53 ಲಕ್ಷ ಜನಸಂಖ್ಯೆ ಇರುವ ಬೆಳಗಾವಿ ಜಿಲ್ಲೆಯಲ್ಲಿಈಗಲೇ 140ಕ್ಕೂ ಹೆಚ್ಚು ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪ್ರದೇಶ ಎಂದು ಗುರುತಿಸಲಾಗಿದೆ. ಜತೆಗೆ ಬೆಳಗಾವಿ ಮಹಾನಗರ ಸೇರಿ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ನೀರಿನ ಕ್ರಮಬದ್ಧ ಪೂರೈಕೆ ಇಲ್ಲ. ಕೆಲವು ಕಡೆ ನಲ್ಲಿಗಳಲ್ಲಿ ನೀರು ಪೂರೈಸಿದರೆ, ಇನ್ನು ಕೆಲವು ಕಡೆ ಟ್ಯಾಂಕರ್ ನೀರು ಕೊಡಲಾಗುತ್ತದೆ. ಅಂಥ ಕಡೆಗಳಲ್ಲಿಜನರು ಕೊರೊನಾವನ್ನೂ ಲೆಕ್ಕಿಸದೆ ನೀರು ಸಂಗ್ರಹಕ್ಕೆ ಮುಗಿ ಬೀಳುತ್ತಿದ್ದಾರೆ. ಈ ವಿಷಯದಲ್ಲಿಜನರನ್ನು ನಿಯಂತ್ರಿಸುವುದೇ ಸವಾಲಾಗುತ್ತಿದೆ. ಗ್ರಾಮೀಣ ಕಾರ್ಯಪಡೆ ಕುಡಿಯುವ ನೀರು ಸಂಗ್ರಹದಲ್ಲಿಸಾಮಾಜಿಕ ಅಂತರ ಪಾಲನೆಯಾಗಬೇಕಾದರೆ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರ ಪಾತ್ರ ಪ್ರಮುಖ. ಅವರು ತಮ್ಮ ವಾರ್ಡ್ ಗಳಲ್ಲಿಸಾಮಾಜಿಕ ಅಂತರದೊಂದಿಗೆ ಜನರಿಗೆ ನೀರು ವಿತರಿಸಬೇಕು. ಈ ಕಾರಣಕ್ಕಾಗಿಯೇ ಬೆಳಗಾವಿಯಲ್ಲಿಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಗ್ರಾಮೀಣ ಕಾರ್ಯಪಡೆ ರಚಿಸಲಾಗಿದೆ. ಗ್ರಾಪಂ ಸದಸ್ಯರು, ಸಿಬ್ಬಂದಿ ನೀರು ಸಂಗ್ರಹ ವೇಳೆ ಸಾಮಾಜಿಕ ಅಂತರ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು. ಆದರೆ, ಅದರಲ್ಲಿಕೆಲವು ಕಡೆ ಮಾತ್ರ ಪಾಲನೆಯಾಗುತ್ತಿದೆ. ನೀರು ಸಂಗ್ರಹದ ವೇಳೆ ಸಾಮಾಜಿಕ ಅಂತರ ಉಲ್ಲಂಘನೆ ಆಗದಂತೆ ತಡೆಯಲು ಗ್ರಾಮೀಣ ಕಾರ್ಯಪಡೆ ರಚಿಸಲಾಗಿದೆ. ನಿರ್ದಿಷ್ಟ ಅಂತರ ಕಾಯ್ದುಕೊಂಡು ನೀರು ಪಡೆಯುವಂತೆ ಜಾಗೃತಿ ಮೂಡಿಸಲಾಗುತ್ತಿದೆ.- ಕೆ.ವಿ. ರಾಜೇಂದ್ರ, ಸಿಇಒ, ಬೆಳಗಾವಿ ಜಿಪಂ
from India & World News in Kannada | VK Polls https://ift.tt/2y1jQ9d