ಬೆಂಗಳೂರು: ಕೊರೊನಾ ಲಾಕ್‌ಡೌನ್ ಸಡಿಲಗೊಳ್ಳುತ್ತಿದ್ದಂತೆ ರಾಜಧಾನಿ ಬೆಂಗಳೂಳೂರು ಬೆಚ್ಚಿ ಬಿದ್ದಿದೆ. ಏಕೆಂದರೆ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಬೆಂಗಳೂರಿನ ಹೊಂಗಸಂದ್ರದ ಬಿಹಾರ ಮೂಲದ ಕಾರ್ಮಿಕನಿಂದ 9 ಜನರಿಗೆ ಸೋಂಕು ಹರಡಿರುವುದು ಪತ್ತೆಯಾಗಿದೆ. ಅಲ್ಲದೇ 150 ಜನರೊಂದಿಗೆ ಈತ ಸಂಪರ್ಕ ಹೊಂದಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ರಾಜಧಾನಿಗೆ ಈ ಕಾರ್ಮಿಕ ತಲೆನೋವಾಗಿ ಪರಿಣಮಿಸಿದ್ದಾರೆ. ಸದ್ಯಕ್ಕೆ ಈತನ ಜತೆ ಸಂಪರ್ಕದಲ್ಲಿದ್ದ 15 ಮಂದಿಯನ್ನು ಖಾಸಗಿ ಹೋಟೆಲ್ ನಲ್ಲಿ ಕ್ವಾರಂಟೇನ್ ಮಾಡಲಾಗಿದೆ. ಹೊಂಗಸಂದ್ರದಲ್ಲಿ ಒಂದೇ ಶೆಡ್‌ನಲ್ಲಿ 30 ಮಂದಿ ಇದ್ದರು ಎನ್ನಲಾಗಿದೆ. ಹೀಗಾಗಿ ಸೋಂಕು ಹರಡಿರಬಹುದು ಎಂದು ಹೇಳಲಾಗಿದೆ. ಈಗ ಪ್ರದೇಶವನ್ನು ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.
from India & World News in Kannada | VK Polls https://ift.tt/2VUPDjW