ಹೊಸದಿಲ್ಲಿ: ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ನಡೆಸಿದ ಎಲ್ಲ ಕಾನೂನು ತಂತ್ರಗಳು ಅಂತ್ಯಗೊಂಡಿದ್ದು, ಶುಕ್ರವಾರ ಬೆಳಗ್ಗೆ 5.30ಕ್ಕೆ ದಿಲ್ಲಿಯ ತಿಹಾರ್‌ಜೈಲಿನಲ್ಲಿ ನೇಣುಗಂಬಕ್ಕೆ ಕೊರಳೊಡ್ಡಲಿದ್ದಾರೆ. ತಿಹಾರ್ ಜೈಲಿನ ಇತಿಹಾಸದಲ್ಲೇ ಮದಲ ಬಾರಿಗೆ ಒಬ್ಬರಾದ ಮೇಲೆ ಒಬ್ಬರಂತೆ ನಾಲ್ವರು ಅತ್ಯಾಚಾರ ಮತ್ತು ಕೊಲೆ ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು. 5.35ಕ್ಕೆ ಎಲ್ಲ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು. ರಾಷ್ಟ್ರದ ಮಗಳಿಗೆ ನ್ಯಾಯ ಸಿಕ್ಕಿತು. ಕಳೆದ 7 ವರ್ಷಗಳಿಂದ ನಮ್ಮ ಜೊತೆಗಿದ್ದ ಎಲ್ಲರಿಗೂ ಧನ್ಯವಾದಗಳು. ನಮಗೆ ಬೆಂಬಲ ನೀಡಿದ ರಾಷ್ಟ್ರದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ನಾಳೆ ಉದಯಿಸುವ ಸೂರ್ಯ ಇತಿಹಾಸವನ್ನು ಉಲ್ಲೇಖಿಸುತ್ತದೆ. ನಿರ್ಭಯಾಗೆ ನ್ಯಾಯ ಒದಗಿಸಿದ ನ್ಯಾಯಾಂಗ ವ್ಯವಸ್ಥೆಗೆ ಧನ್ಯವಾದಗಳು. ಗಲ್ಲು ಶಿಕ್ಷೆಯನ್ನು ವಿಳಂಬಗೊಳಿಸುವ ಪ್ರಯತ್ನಗಳನ್ನು ವಿಫಲಗೊಳಿಸಿದ್ದಕ್ಕೆ ಕೋರ್ಟ್‌ಗೆ ಧನ್ಯವಾದ ಸಲ್ಲಿಸುತ್ತೇನೆ. ಕೊನೆಗೆ ನಮ್ಮ ಪರವಿದ್ದ ಇಬ್ಬರು ವಕೀಲರಿಗೂ ಧನ್ಯವಾದಗಳು. - ಆಶಾ ದೇವಿ, ನಿರ್ಭಯಾ ತಾಯಿ ನಮ್ಮ ಮಗಳಿಗೆ ಅಂತಿಮವಾಗಿ ನ್ಯಾಯ ಸಿಕ್ಕಿತು ಎಂಬ ಕಾರಣಕ್ಕೆ ನನಗೀಗ ಸಮಾಧಾನವಾಗುತ್ತಿದೆ. ಈ ಅಪರಾಧದಿಂದ ಇಡೀ ರಾಷ್ಟ್ರವೇ ನಾಚಿಕೆ ಪಡುವಂತಾಯಿತು. ಇವತ್ತು ರಾಷ್ಟ್ರಕ್ಕೆ ನ್ಯಾಯ ಸಿಕ್ಕಿದೆ. - ಆಶಾ ದೇವಿ, ನಿರ್ಭಯಾ ತಾಯಿ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುತ್ತಿರುವ ಹಿನ್ನೆಲೆ ತಿಹಾರ್ ಜೈಲಿನ ಹೊರಗೆ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. 5.13ಕ್ಕೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವ ಸ್ಥಳಕ್ಕೆ ಕರೆದುಕೊಂಡು ಹೋದ ತಿಹಾರ್ ಜೈಲಿನ ಅಧಿಕಾರಿಗಳು (ಮಾಹಿತಿ: ಎಎನ್‌ಐ) ಬೆಳಗ್ಗೆ 4.50: ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುತ್ತಿರುವ ಹಿನ್ನೆಲೆ ಜೈಲಿನ ಹೊರಗೆ ಸೇರುತ್ತಿರುವ ಜನ 4.45ರ ಹೊತ್ತಿಗೆ ನಾಲ್ವರು ಅಪರಾಧಿಗಳ ವೈದ್ಯಕೀಯ ಪರೀಕ್ಷೆ ಮತ್ತಿತರ ಕಾರ್ಯಗಳು ಪೂರ್ಣಗೊಂಡಿವೆ. ಎಲ್ಲರೂ ಗಲ್ಲು ಶಿಕ್ಷೆ ಎದುರಿಸಲು ದೈಹಿಕವಾಗಿ ಮತ್ತು ಆರೋಗ್ಯದಲ್ಲಿ ಸರಿಯಾಗಿದ್ದಾರೆ. ಗಲ್ಲು ಶಿಕ್ಷೆ ಪೂರ್ಣಗೊಳ್ಳುವವರೆಗೆ ಜೈಲು ಲಾಕ್‌ಡೌನ್ ಆಗಿರಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದರು. 4.30ಕ್ಕೆ ಅಪರಾಧಿಗಳನ್ನು ನೇಣುಗಂಬಕ್ಕೇರಿಸುವವರು ಎದ್ದಿದ್ದಾರೆ. ಜೈಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದರು. ನಾಲ್ವರು ಅಪರಾಧಿಗಳ ಪೈಕಿ ಪವನ್ ಗುಪ್ತಾ ಸಲ್ಲಿಸಿದ್ದ 2ನೇ ಕ್ಷಮಾದಾನ ಅರ್ಜಿ ಇತ್ಯರ್ಥವಾಗದಿರುವ ಹಿನ್ನೆಲೆಯಲ್ಲಿ ನೇಣು ಶಿಕ್ಷೆ ಜಾರಿಗೆ ತಡೆ ನೀಡಬೇಕು ಎಂದು ಕೋರಿ ನಾಲ್ವರೂ ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯನ್ನು ದಿಲ್ಲಿ ಕೋರ್ಟ್ ತಿರಸ್ಕರಿಸಿತು. ಇದರ ಬೆನ್ನಲ್ಲೇ ಘಟನೆ ನಡೆದ ದಿನ ದಿಲ್ಲಿಯಲ್ಲಿ ಇರಲಿಲ್ಲ ಎಂದು ವಾದಿಸಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿತು. ಬಳಿಕ ಅಪರಾಧಿಗಳು ಮತ್ತೆ ಮರಣದಂಡನೆಗೆ ತಡೆಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಡರಾತ್ರಿ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿತು. ಏನಿದು ? 2012ರ ಡಿಸೆಂಬರ್ 16ರಂದು ದಿಲ್ಲಿಯಲ್ಲಿ ಚಲಿಸುವ ಬಸ್‌ನಲ್ಲಿ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಆರು ಮಂದಿ ಅತ್ಯಾಚಾರ ಎಸಗಿದ್ದರು. ಜೀವನ್ಮರಣ ಹೋರಾಟ ನಡೆಸಿ ಡಿಸೆಂಬರ್ 29ರಂದು ಸಿಂಗಾಪುರ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮೃತಪಟ್ಟಿದ್ದರು. ಆರು ಅಪರಾಧಿಗಳ ಪೈಕಿ ಒಬ್ಬ ಬಾಲಾಪರಾಧಿಗೆ ಶಿಕ್ಷೆ ಪೂರ್ಣಗೊಂಡಿದೆ. ಮತ್ತೊಬ್ಬ ಅಪರಾಧಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
from India & World News in Kannada | VK Polls https://ift.tt/2UngKna