ದೇಶಾದ್ಯಂತ ಲಾಕ್ ಡೌನ್: ಕೊರೊನಾ ಅಂದ್ರೆ ಕ್ಯಾರೇ ಎನ್ನದ ರಾಮನಗರ ಜನ ರಾಮನಗರ: ಮಹಾಮಾರಿ ಕರೋನಾದ ರುದ್ರನರ್ತನ ತಡೆಯುವ ಅಂತಿಮ ಪ್ರಯತ್ನವಾಗಿ ಭಾರತ ಮುಂದಿನ 21 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಆದರೆ ಯುಗಾದಿ ಹಬ್ಬವಾದ ಇಂದು ಸಾವಿರಾರು ಜನ ಮಾರ್ಕೆಟ್ ನಲ್ಲಿ ಸೇರಿದ್ದು, ಬೆಳಗ್ಗೆಯಿಂದಲೇ ವ್ಯಾಪಾರ, ವಹಿವಾಟು ಜೋರಾಗಿಯೇ ನಡೆಯುತ್ತಿದೆ. ಮಾರ್ಕೆಟ್ ನ ಮುಖ್ಯದ್ವಾರಕ್ಕೆ ಪೊಲೀಸರು ಬೀಗ ಜಡಿದಿದ್ದು, ಅಲ್ಲಿಯೇ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಆದರೆ, ಪೊಲೀಸರನ್ನು ಸಹ ಕೇರ್ ಮಾಡದೇ ವ್ಯಾಪಾರ ಮಾಡುತ್ತಿರುವ ಜನ, ಕೊರೊನಾ ಸೋಂಕಿನ ಬಗ್ಗೆ ಸಹ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪತ್ರಿಕಾ ವಿತರಕರಿಗೆ ವಿಜಯ ಕರ್ನಾಟಕದಿಂದ ಉಚಿತ ಹ್ಯಾಂಡ್ ಗ್ಲೌಸ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣೆ ಚಿಕ್ಕಮಗಳೂರು: ನಗರದ ಪತ್ರಿಕಾ ವಿತರಕರಿಗೆ ಬುಧವಾರ ನಸುಕಿನಲ್ಲಿ ವಿಜಯ ಕರ್ನಾಟಕದಿಂದ ಉಚಿತವಾಗಿ ಹ್ಯಾಂಡ್ ಗ್ಲೌಸ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು. ಪತ್ರಿಕೆ ಸುರಕ್ಷಿತ ಎಂಬ ಬಗ್ಗೆ ಓದುಗರಿಗೆ ತಿಳಿವಳಿಕೆ ನೀಡುವಂತೆ ವಿತರಕರಿಗೆ ಅರಿವು ಮೂಡಿಸಲಾಯಿತು. ದ.ಕ. ಜಿಲ್ಲೆಯಲ್ಲಿ ಟೀಮ್ ವರ್ಕ್ ನಲ್ಲಿ ಕೊರೊನಾ ಸೋಂಕು ನಿಯಂತ್ರಣ: ಡಿಎಚ್‌ಒ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಕೊರೊನಾ ನಿಯಂತ್ರಣಕ್ಕೆ ತರಲು ಹೋಂ ಕ್ವಾರಂಟೆನ್ (ಗೃಹ ನಿಗಾ) ಮತ್ತು ಕಾಸರಗೋಡು ಜಿಲ್ಲೆಯ ಸದ್ಯದ ಸ್ಥಿತಿಗತಿ ದೊಡ್ಡ ಸವಾಲಾಗಿದೆ. ಇದನ್ನು ಪ್ರತಿಯೊಬ್ಬರು ಗಂಭೀರವಾಗಿ ಪರಿಗಣಿಸಿ ಟೀಮ್ ವರ್ಕ್ ಮೂಲಕ ಬಗೆಹರಿಸಬೇಕಾಗಿದೆ. ಪರಿಸ್ಥಿತಿ ಕೈಮೀರಿದ ಬಳಿಕ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ ಎಂದು ನೂತನ ದ.ಕ. ಜಿಲ್ಲಾಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ. ಇದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಂಡು ತಮಗೆ ಲಕ್ಷ್ಮಣ ರೇಖೆ ಹಾಕಿಕೊಂಡು ಸರಕಾರದ ಗೈಡ್‌ಲೈನ್ ಪಾಲಿಸಿದರೆ ಮಾತ್ರ ಕೊರೊನಾ ಮಾಹಾಮಾರಿ ನಿಯಂತ್ರಣ ಮಾಡಲು ಸಾಧ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇನ್ನೂ ಸಾಮೂಹಿಕವಾಗಿ ಹರಡದ ಕಾರಣ ನಿಯಂತ್ರಣ ಸುಲಭವಿದೆ ಎಂದರು. ಬೆಂಗಳೂರು: 'ಕೊರೊನಾ ವಾರಿಯರ್ಸ್'ಗೆ ಮೂರು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ನೋಂದಣಿ ಬೆಂಗಳೂರು: ಕೊರೊನಾ ವೈರಸ್ ಸೋಂಕು ವಿರುದ್ಧ ಹೋರಾಡಲು ಮೂರು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರು ನೋಂದಣಿಯಾಗಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಹಾಗೂ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಇಲಾಖೆಯ ಉಪ ನಿರ್ದೇಶಕಿ ಪಲ್ಲವಿ ಹೊನ್ನಾಪುರ, ''ಮೂರು ದಿನಗಳ ಹಿಂದೆ ರೆಡ್ ಕ್ರಾಸ್ ಸೊಸೈಟಿ, ವಾರ್ತಾ ಇಲಾಖೆ ಹಾಗೂ ಕಾರ್ಮಿಕ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಪ್ರಾರಂಭಗೊಂಡ 'ಕೊರೊನಾ ವಾರಿಯರ್ಸ್' ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಹೇಳಿದರು.
from India & World News in Kannada | VK Polls https://ift.tt/2xqssW1