ರಾಜ್ಯದಲ್ಲಿ ಬಿಸಿಲ ಝಳಕ್ಕೆ ತತ್ತರಿಸಿದ ಜನ , ತಂಪುಪಾನೀಯ ಸೇವನೆಗೆ ಕೊರೊನಾ ಭಯ

ಬೆಂಗಳೂರು: ರಾಜ್ಯಾದ್ಯಂತ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಸಿಲ ಝಳ ಏರುತ್ತಿರುವುದರಿಂದ ತೀವ್ರ ಸೆಕೆ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರಿನ ಕೇಂದ್ರ ಭಾಗಗಳಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಏಪ್ರಿಲ್‌ನಲ್ಲಿ ತಾಪಮಾನ ಇನ್ನೂ ಒಂದೆರಡು ಡಿಗ್ರಿ ಸೆಲ್ಸಿಯಸ್‌ ಏರುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ 32, 33 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿತ್ತು. ಒಂದು ವಾರದಿಂದ ಪ್ರತಿ ದಿನ 34 ಡಿಗ್ರಿ ಸೆಲ್ಸಿಯಸ್‌ ತಾಪಮಾನವಿದ್ದು, ಇಳಿಮುಖವಾಗುತ್ತಿಲ್ಲ. ಇದರಿಂದಾಗಿ ಸೆಕೆಯ ಕಿರಿಕಿರಿ ಜೋರಾಗಿದ್ದು, ರಾತ್ರಿಯಲ್ಲೂಎಸಿ, ಫ್ಯಾನ್‌ ಇಲ್ಲದೆ ನಿದ್ರಿಸದಂತಾಗಿದೆ. ಹಗಲಿನಲ್ಲಿ ಬಿಸಿಲ ಝಳ ಜೋರಿರುವುದರಿಂದ ಹೊರಗೆ ಓಡಾಡುವುದು ಕಷ್ಟವಾಗಿದೆ. ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ದಾಹ ತೀರಿಸಿಕೊಳ್ಳಲು ಜನರು ಐಸ್‌ಕ್ರೀಮ್‌, ತಂಪು ಪಾನೀಯದ ಮೊರೆ ಹೋಗುತ್ತಿದ್ದರು. ಈಗ ಕೊರೊನಾ ಭೀತಿ ನಗರವನ್ನು ಕಾಡುತ್ತಿರುವುದರಿಂದ ಆರೋಗ್ಯ ಕಾಪಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿಜನರು ತಂಪು ಪದಾರ್ಥಗಳನ್ನು ಕೊಳ್ಳಲು ಹೆಚ್ಚು ಆಸಕ್ತಿ ತೋರುತ್ತಿಲ್ಲ. ಎಚ್‌ಎಎಲ್‌ನಲ್ಲಿ 33 ಡಿಗ್ರಿ ಸೆ. ಹಾಗೂ ಕೆಐಎಎಲ್‌ನಲ್ಲಿ34 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಇತರ ಜಿಲ್ಲೆಗಳಲ್ಲಿ ಹೇಗಿದೆ? ಗುಲ್ಬರ್ಗದಲ್ಲಿ 35 ಡಿಗ್ರಿ ಸೆ. , ಮಂಗಳೂರಿನಲ್ಲಿ 34 ಡಿಗ್ರಿ ಸೆ. , ಬೀದರ್ 33 ಡಿಗ್ರಿ ಸೆ. ಬಿಜಾಪುರ 34 ಡಿಗ್ರಿ ಸೆ., ಮಡಿಕೇರಿ 29 ಡಿಗ್ರಿ ಸೆ. ಉಡುಪಿ 33 ಡಿಗ್ರಿ ಸೆ, ಬೆಳಗಾವಿ 34 ಡಿಗ್ರಿ ಸೆ. ಕೋಲಾರ 31 ಡಿಗ್ರಿ ಸೆ, ಹುಬ್ಬಳ್ಳಿ-ದಾರವಾಡದಲ್ಲಿ 34 ಡಿಗ್ರಿ ಸೆ., ಮೈಸೂರಿನಲ್ಲಿ 32 ಡಿಗ್ರಿ ಸೆ., ದಾಖಲಾಗಿದೆ.


from India & World News in Kannada | VK Polls https://ift.tt/2IRCnqb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...