ಕೊರೊನಾ ನಿಯಂತ್ರಣಕ್ಕೆ ಭಾರತ-ರಷ್ಯಾ ಜಂಟಿ ಹೋರಾಟ: ಪುಟಿನ್‌ ಜತೆ ಮಾತನಾಡಿದ ಮೋದಿ

ಹೊಸದಿಲ್ಲಿ: ಪ್ರಧಾನಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಬುಧವಾರ ರಾತ್ರಿ ದೂರವಾಣಿಯಲ್ಲಿ ಜಾಗತಿಕ ವ್ಯಾಪಕತೆ ಮತ್ತು ತಡೆ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾತುಕತೆ ನಡೆಸಿದ್ದಾರೆ. ರಷ್ಯಾದಲ್ಲಿ ಕೊರೊನಾ ವೈರಸ್‌ಗೆ ತುತ್ತಾಗಿರುವವರಿಗೆ ಶೀಘ್ರ ಗುಣಮುಖರಾಗುವಂತೆ ಆಶಿಸಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾದಲ್ಲಿ ಪುಟಿನ್‌ ನೇತೃತ್ವದಲ್ಲಿ ಸಮರೋಪಾದಿಯಾಗಿ ನಡೆಯುತ್ತಿರುವ ಕೊರೊನಾ ತಡೆ ಕಾರ್ಯವನ್ನು ಶ್ಲಾಘಿಸಿದರು. ಜಾಗತಿಕವಾಗಿ ಕಾಡುತ್ತಿರುವ ಕೊರೊನಾ ವೈರಸ್‌ ತಡೆಗೆ ಉಭಯ ರಾಷ್ಟ್ರಗಳು ಜಂಟಿಯಾಗಿ ಕೆಲಸ ಮಾಡಲು ನಿರ್ಧರಿಸಿದರು. ಕೊರೊನಾಗೆ ಔಷಧ, ವೈಜ್ಞಾನಿಕ ಸಂಶೋಧನೆ, ಮಾನವೀಯತೆ ಕಾರ್ಯಗಳಿಗೆ ಒತ್ತು ನೀಡಲು ನಿರ್ಧರಿಸಿದರು. ಜಿ20 ಮೂಲಕ ಕೊವಿಡ್‌-19 ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಸ್ಪರ ಸಹಕಾರದೊಂದಿಗೆ ಒಟ್ಟಾಗಿ ಹೋರಾಡಬೇಕು ಎಂಬ ಸಂದೇಶವನ್ನು ಉಭಯ ನಾಯಕರು ನೀಡಿದರು. ರಷ್ಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಗೆ ರಷ್ಯಾದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಮೋದಿ, ಇದೇ ರೀತಿಯ ಸಹಕಾರ ಮುಂದೆಯು ಸಿಗುವ ಬದ್ದೆ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು. ರಾಷ್ಯಾದ ನಾಗರಿಕರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸಾಗಲು ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಿಕೊಡುವುದಾಗಿ ಮೋದಿ ಭರವಸೆ ನೀಡಿದರು.


from India & World News in Kannada | VK Polls https://ift.tt/2xrWNna

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...