ವಾಷಿಂಗ್ಟನ್: ವಿಶ್ವದಾದ್ಯಂತ ಕೊರೊನಾ ವೈರಸ್ ಹರಡಲು ಕಾರಣವಾಗಿರುವ ಮೇಲೆ ತಮಗೆ ಅಸಮಾಧಾನವಿದೆ ಎಂದು ಅಧ್ಯಕ್ಷ ಹೇಳಿದ್ದಾರೆ. ಕೊರೊನಾ ವೈರಸ್ ಮತ್ತು ಅದರ ಅಪಾಯಗಳ ಕುರಿತು ಚೀನಾ ಜಗತ್ತಿಗೆ ಮೊದಲೇ ತಿಳಿಸಿದ್ದರೆ ಇಷ್ಟೊಂದು ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ವೈರಸ್ ಕುರಿತು ಚೀನಾದ ಮೌನವೇ ಇಡೀ ಜಗತ್ತು ಈ ಮಾರಕ ವೈರಾಣುವಿನ ಕಬಂದಬಾಹುವಿನಲ್ಲಿ ಸಿಲುಕಲು ಕಾರಣ ಎಂದು ಅಮೆರಿಕ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ. ತಾವು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ತುಂಬ ಗೌರವಿಸುವುದಾಗಿ ಹೇಳಿರುವ ಟ್ರಂಪ್, ಚೀನಾ ದೇಶದ ಬಗ್ಗೆಯೂ ತಮಗೆ ಅಪಾರ ಹೆಮ್ಮೆಯಿದೆ ಎಂದು ಹೇಳಿದ್ದಾರೆ. ಆದರೆ ಕೊರೊನಾ ವೈರಸ್ ವಿಚಾರದಲ್ಲಿ ಆ ದೇಶ ನಡೆದುಕೊಂಡ ರೀತಿ ತಮಗೆ ಅಸಮಾಧಾನ ತರಿಸಿದೆ ಎಂದು ಟ್ರಂಪ್ ಗುಡುಗಿದರು. ಕೊರೊನಾ ವೈರಸ್ ದಾಳಿ ಆರಂಭವಾದಾಗಿನಿಂದ ಶೀತಲ ಸಮರದಲ್ಲಿ ನಿರತವಾಗಿರುವ ಅಮೆರಿಕ-ಚೀನಾ, ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ಮೊದಲು ಚೀನಾದಲ್ಲಿ ಕೊರೊನಾ ವೈರಸ್ ಹರಡಲು ಅಮೆರಿಕ ಸೇನೆ ಕಾರಣ ಎಂದು ಚೀನಾ ಗಂಭೀರ ಆರೋಪ ಮಾಡಿತ್ತು. ಚೀನಾದ ಈ ಆರೋಪದಿಂದ ಕೆಂಡಾಮಂಡಲವಾಗಿದ್ದ ಅಮೆರಿಕ, ಚೀನಿ ರಾಯಭಾರಿಗೆ ಸಮನ್ಸ್ ಜಾರಿ ಮಾಡಿ ಅಸಮಾಧಾನ ಹೊರಹಾಕಿತ್ತು.
from India & World News in Kannada | VK Polls https://ift.tt/2wmQYrg