ಜನತಾ ಕರ್ಫ್ಯೂ: ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲಾ? ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ವಿಶ್ವವನ್ನು ಕಾಡುತ್ತಿರುವ ಮಹಾಮಾರಿಗೆ ತಡೆಯೊಡ್ಡಲು ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 22ಕ್ಕೆ ಜನತಾ ಕರ್ಫೂಗೆ ಕರೆ ನೀಡಿದ್ದಾರೆ. ಭಾನುವಾರ ಬೆಳಗ್ಗೆ 7ರಿಂದ 9 ಗಂಟೆವರೆಗೆ ಯಾರೂ ಮನೆಯಿಂದ ಹೊರ ಬರದೆ ಸ್ವಯಂ ಕರ್ಫ್ಯೂ ಹೇರಿಕೊಳ್ಳಬೇಕು ಎಂದು ಮೋದಿ ಹೇಳಿದ್ದಾರೆ. ಜನತಾ ಕರ್ಫ್ಯೂಗೆ ರಾಷ್ಟ್ರಾದ್ಯಂತ ಜನ ಬೆಂಬಲ ವ್ಯಕ್ತವಾಗಿದ್ದು ರಾಜ್ಯದಲ್ಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದು ಬಂದ್‌? - ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ಮಧ್ಯರಾತ್ರಿವರೆಗೆ ರೈಲು ಸೇವೆ ರದ್ದು - ಬೆಂಗಳೂರು, ದಿಲ್ಲಿಯಲ್ಲಿ ಮೆಟ್ರೋ ರೈಲು ಸಂಚಾರ ಇರುವುದಿಲ್ಲ - ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ಸಂಚಾರ ಬಹುತೇಕ ರದ್ದು - ಬೆಂಗಳೂರಿನಲ್ಲಿ ಎಲ್ಲ ಹೋಟೆಲ್‌, ಬೇಕರಿ, ಜ್ಯೂಸ್‌ ಅಂಗಡಿ ಬಾಗಿಲು ತೆರೆಯುವುದಿಲ್ಲ. ರಾಜ್ಯದ ಇತರ ಭಾಗಗಳಲ್ಲೂ ಇದು ಜಾರಿಗೆ ಬರುವ ಸಾಧ್ಯತೆ - ಎಪಿಎಂಪಿ, ಕ್ಯಾಟರಿಂಗ್ ಸೇವೆ ಬಂದ್‌ - ರಾಜ್ಯಾದ್ಯಂತ ಎಲ್ಲ ಆಭರಣ ಮಳಿಗೆಗಳು - ಆಟೋ, ಲಾರಿ ಸಂಚಾರ ಸ್ತಬ್ಧ ಸಾಧ್ಯತೆ - ಓಲಾ, ಉಬರ್‌ ಟ್ಯಾಕ್ಸಿ ಸೇವೆ ಇರುವುದಿಲ್ಲ. - ರಾಜ್ಯದ ಎಲ್ಲಾ ಆಭರಣ ಮಳಿಗೆಗಳು ಸಂಪೂರ್ಣ ಬಂದ್ ಯಾವುದು ಓಪನ್‌?- ಯಾವುದನ್ನೂ ಬಲವಂತವಾಗಿ ಮುಚ್ಚಿಸುವಂತಿಲ್ಲ - ಆಸ್ಪತ್ರೆ, ಮೆಡಿಕಲ್‌, ತುರ್ತು ಸೇವೆ ಸಿಗಲಿದೆ - ಹಾಲು, ಪತ್ರಿಕೆ, ಪೆಟ್ರೋಲ್‌ ಬಂಕ್‌, ಆ್ಯಂಬುಲೆನ್ಸ್‌ ಸೇವೆ ಲಭ್ಯ ಮುಂಜಾಗೃತ ಕ್ರಗಮಗಳುಭಾನುವಾರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಇಂದೇ ಖರೀದಿಸಿ ಹೊರಗೆ ಹೋಗುವ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳಬೇಡಿ ಊರು ಬಿಟ್ಟು ಬೇರೆ ಊರಿಗೆ ಹೋಗುವ ಸಾಹಸ ಬೇಡ


from India & World News in Kannada | VK Polls https://ift.tt/2J62qdy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...