ಬೆಂಗಳೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 22 ರಂದು ಕರೆ ನೀಡಿರುವ ಜನತಾ ಕರ್ಪ್ಯೂ ಗೆ ಭಾರತದಾದ್ಯಂತ ಬೆಂಬಲ ವ್ಯಕ್ತವಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 9ರವರೆಗೆ ಸ್ವಯಂ ನಿರ್ಬಂಧ ಹಾಕಿಕೊಳ್ಳಿ ಎಂದು ದೇಶದ ಜನತೆಗೆ ಮೋದಿ ಕರೆ ಕೊಟ್ಟಿದ್ದರು. ಈ ಸಂಬಂಧ ಕ್ಷಣಕ್ಷಣದ ಮಾಹಿತಿ ಇಲ್ಲಿದೆ. ಕ್ಷಣಕ್ಷಣದ ಮಾಹಿತಿ -ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಪಾಂಡವಪುರ ಪಟ್ಟಣ ಸಂಪೂರ್ಣವಾಗಿ ಸ್ಥಬ್ಧ. ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ, ರಸ್ತೆಗಳು ಖಾಲಿಖಾಲಿ. ಅಂಗಡಿ ಮುಂಗಟ್ಟುಗಳು ಬಂದ್ -ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಕೋಟೆ ನಾಡು ಚಿತ್ರದುರ್ಗ ಸಂಪೂರ್ಣ ಬಂದ್. ಕೆಎಸ್ ಆರ್ ಟಿಸಿ, ಖಾಸಗಿ ಬಸ್ ಸಂಚಾರ ಸ್ಥಗಿತ - ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ ಸಂಪೂರ್ಣ ಬಂದ್. -ಚಾಮರಾಜನಗರದಲ್ಲಿ ಕೂಡ ಗೆ ವ್ಯಾವಕ ಬೆಂಬಲ ವ್ಯಕ್ತವಾಗಿದೆ. ಜನ ಹೊರಬರದೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ರಸ್ತೆಗಳು ಮತ್ತು ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಎನ್ನುತ್ತಿದೆ. -ಬಾಗಲಕೋಟೆಯಲ್ಲಿ ಜನತಾ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬೆಳಿಗ್ಗೆಯಿಂದಲೇ ಹೊಟೇಲ್ ಗಳು, ಟಂಟ ಮತ್ತು ಟ್ಯಾಕ್ಸಿಗಳು ಬಂದ್ ಆಗಿವೆ. -ರಾಜ್ಯ ರಾಜಧಾನಿ ಸ್ತಬ್ಧ. ಬೆಂಗಳೂರಿನಲ್ಲಿ ವಾಹನ ಸಂಚಾರ, ಜನಸಂಚಾರವಿಲ್ಲ. ರಸ್ತೆಗಳು ಖಾಲಿ ಖಾಲಿ.
from India & World News in Kannada | VK Polls https://ift.tt/39ek0GB