ರಾಜ್ಯಸಭಾ ಸದಸ್ಯರಾಗಿ ಗೊಗೊಯ್ ಪ್ರಮಾಣವಚನ: 'ಶೇಮ್' ಎಂದು ಕೂಗಿದ ವಿಪಕ್ಷಗಳು!

ನವದೆಹಲಿ: ಮಹತ್ದದ ಬೆಳವಣಿಗೆಯೊಂದರಲ್ಲಿ ನಿವೃತ್ತ ಮುಖ್ಯ ನ್ಯಾಯಮೂರ್ತಿ , ರಾಜ್ಯಸಭಾ ನಾಮ ನಿರ್ದೇಶಿತ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ರಂಜನ್ ಗೊಗೊಯ್ ಅವರಿಗೆ ಸಭಾಪತಿ ವೆಂಕಯ್ಯ ನಾಯ್ಡು ಪ್ರಮಾಣವಚನ ಬೋಧಿಸಿದರು. ಈ ಮೂಲಕ ದೇಶದ ಇತಿಹಾಸದಲ್ಲೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ರಾಜ್ಯಸಭೆ ಪ್ರವೇಶಿಸಿದಂತಾಗಿದೆ. ಆದರೆ ಗೊಗೊಯ್ ಪ್ರಮಾಣವಚನ ಸ್ವೀಕರಿಸುವ ವೇಳೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು 'ಶೇಮ್ ಶೇಮ್' ಎಂದು ಕೂಗಿ ವಿರೋಧ ವ್ಯಕ್ತಪಡಿಸಿದರು. ನಿವೃತ್ತ ನ್ಯಾಯಮೂರ್ತಿಯೊಬ್ಬರನ್ನು ರಾಜ್ಯಸಭೆಗೆ ಕರೆಸಿಕೊಂಡ ಸರ್ಕಾರ, ನ್ಯಾಯಾಂಗದ ಮೇಲೆ ಪ್ರಭಾವ ಬೀರಲು ಹವಣಿಸುತ್ತಿದೆ ಎಂದು ಕಾಂಗ್ರೆಸ್ ಹರಿಹಾಯ್ದಿದೆ. ರಂಜನ್ ಗೊಗೊಯ್ ಅವರ ರಾಜ್ಯಸಭೆ ಪ್ರವೇಶ ಕರ್ತವ್ಯ ನಿರತ ನ್ಯಾಯಮೂರ್ತಿಗಳ ಮೇಲೆ ಪ್ರಭಾವ ಬೀರುತ್ತದೆ. ಸರ್ಕಾರದ ಪರವಾಗಿ ತೀರ್ಪುಗಳನ್ನು ನೀಡಿದರೆ ಉನ್ನತ ಮಟ್ಟದ ಹುದ್ದೆ ಪಡೆಯಬಹುದು ಎಂಬ ಆಸೆ ಅವರಲ್ಲಿಯೂ ಮೊಳಕೆಯೊಡೆಯುವ ಸಾಧ್ಯತೆ ಇರುತ್ತದೆ ಎಂದು ಪ್ರತಿಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ಇನ್ನು ಗೊಗೊಯ್ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವುದಕ್ಕೆ ನ್ಯಾಯಾಂಗ ಕ್ಷೇತ್ರದಲ್ಲೂ ವಿರೋಧದ ಮಾತುಗಳು ಕೇಳಿ ಬಂದಿವೆ. ಗೊಗೊಯ್ ನಡೆಗೆ ಹಲವು ನಿವೃತ್ತ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನೀವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್, ಗೊಗೊಯ್ ರಾಜ್ಯಸಭೆ ಪ್ರವೇಶಿಸುವುದರಿಂದ ಜನ ನ್ಯಾಯಾಂಗದ ಮೇಲೆ ಭರವಸೆ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದು ಹೇಳಿದ್ದಾರೆ. ಗೊಗೊಯ್ ಸಮರ್ಥನೆ ಏನು?: ಆದರೆ ಈ ಎಲ್ಲಾ ಅಪಸ್ವರಗಳಿಗೆ ಸೂಕ್ತ ತಿರುಗೇಟು ನೀಡಿರುವ ಗೊಗೊಯ್, ದೇಶದ ಒಳಿತಿಗಾಗಿ ನ್ಯಾಯಾಂಗ ಹಾಗೂ ಶಾಸಕಾಂಗ ಕೆಲವೊಮ್ಮೆ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಅದರಂತೆ ರಾಜ್ಯಸಭೆಯಲ್ಲಿ ತಮ್ಮ ಇರುವಿಕೆ ಶಾಸಕಾಂಗಕ್ಕೆ ನ್ಯಾಯಾಂಗದ ಮಹತ್ವ ತಿಳಿಸುವುದಷ್ಟೇ ಅಲ್ಲದೇ ನ್ಯಾಯಾಂಗದ ಬೇಕು ಬೇಡಗಳ ಕುರಿತು ಸಮರ್ಥವಾಗಿ ಧ್ವನಿ ಎತ್ತಲು ಅವಕಾಶ ಸಿಕ್ಕಂತಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.


from India & World News in Kannada | VK Polls https://ift.tt/3b6cNtI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...