ಬುಧವಾರದವರೆಗೆ ದೇಶಾದ್ಯಂತ ರೈಲು ಸೇವೆ ರದ್ದು: ರಾಜ್ಯವಾರು ನಿರ್ಧಾರಗಳೇನು?

ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಇಂದು ಪ್ರಧಾನಿ ಮೋದಿ ಕರೆಯಂತೆ ದೇಶಾದ್ಯಂತ ಜಾರಿಯಲ್ಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೈನಂದಿನ ವ್ಯವಹಾರಗಳು ಸಂಪೂರ್ಣ ಸ್ಥಗಿತಗೊಂಡಿವೆ. ಈ ಮಧ್ಯೆ ಇದೇ ಬುಧವಾರ(ಮಾ.25)ದವರೆಗೂ ರದ್ದು ಮಾಡಿ ರೈಲ್ವೇ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಬುಧವಾರದವರೆಗೆ ದೇಶಾದ್ಯಂತ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಕೊರೊಣಾ ವೈರಸ್ ಮುಂಜಾಗ್ರತಾ ಕ್ರಮವಾಗಿ ಇಡೀ ರಾಜಸ್ಥಾನವನ್ನು ಬಂಧ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಾ.31ರವರೆಗೂ ಸಂಪೂರ್ಣ ರಾಜಸ್ಥಾನ ಬಂದ್ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಾವರ್ಜನಿಕ ಸಭೆ-ಸಮಾರಂಭಗಳು, ಸರ್ಕಾರಿ ಕಚೇರಿಗಳು ಹಾಗೂ ಇತರ ದೈನಂದಿನ ವ್ಯವಹಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಅತ್ತ ಗುಜರಾತ್ ಕೂಡ ತನ್ನ ನಾಲ್ಕು ಪ್ರಮುಖ ನಗರಗಳಾದ ಅಹಮದಾಬಾದ್, ಸೂರತ್, ರಾಜ್‌ಕೋಟ್ ಹಾಗೂ ವಡೋದರಾ ನಗರಗಳನ್ನು ಇದೇ ಬುಧವಾರ(ಮಾ.25)ರವರೆಗೆ ಬಂದ್ ಮಾಡಿ ಆದೇಶ ಹೊರಡಿಸಿದೆ. ಗೋವಾ ಕೂಡ ತನ್ನ ಗಡಿಗಳನ್ನು ಮುಚ್ಚಿದ್ದು, ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿದೆ. ಜಾರ್ಖಂಡ್ ರಾಜ್ಯ ಸರ್ಕಾರ ಮಾ.31ರವೆರೆಗೆ ತನ್ನ ರಾಜ್ಯದಲ್ಲಿ ಯಾವುದೇ ಅನ್ಯ ರಾಜ್ಯಗಳಿಂದ ಬರುವ ರೈಲುಗಳಿಗೆ ಪ್ರವೇಶ ನಿರ್ಬಂಧಿಸಿದೆ. ರಾಜ್ಯವಾರು ಕೊರೊನಾ ಪೀಡಿತರ ಸಂಖ್ಯೆ: ಮಹಾರಾಷ್ಟ್ರ:63 ಕೇರಳ:40 ದೆಹಲಿ:27 ಉ.ಪ್ರದೇಶ:24 ತೆಲಂಗಾಣ:21 ರಾಜಸ್ಥಾನ:17 ಹರಿಯಾಣ:17 ಕರ್ನಾಟಕ:15 ಪಂಜಾಬ್:13 ಲಡಾಕ್:13 ಗುಜರಾತ್:07 ಜಮ್ಮುಮತ್ತುಕಾಶ್ಮೀರ:04 ತಮಿಳುನಾಡು:03 ಆಂಧ್ರಪ್ರದೇಶ:-03 ಉತ್ತರಾಖಂಡ್:03 ಪ.ಬಂಗಾಳ:03 ಒಡಿಶಾ:-02 ಛತ್ತೀಸ್‌ಗಡ್:01 ಚಂಡೀಗಡ್:01 ಪಪುದುಚೇರಿ:01


from India & World News in Kannada | VK Polls https://ift.tt/2xbHpeF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...