ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವುದರಿಂದ 'ನ್ಯಾಯ' ಸಿಗ್ಗಲ್ಲ: ಸುಪ್ರೀಂ ಮಾಜಿ ನ್ಯಾಯಮೂರ್ತಿ!

ನವದೆಹಲಿ: ಇಡೀ ದೇಶ ನಿರ್ಭಯಾ ಹಂತಕರು ಗಲ್ಲಿಗೇರುವುದನ್ನು ಕಾತರದಿಂದ ಕಾಯುತ್ತಿದೆ. ಇದೇ ಮಾ.೨೦ರಂದು ಪಾಪಿಗಳ ಕುತ್ತಿಗೆಗೆ ಕುಣಿಕೆ ಬೀಳುವುದನ್ನು ನೋಡಲು ದೇಶ ಎದುರು ನೋಡುತ್ತಿದೆ. ಕ್ಷಮೆಗೆ ಅರ್ಹವೇ ಅಲ್ಲದ ಮಹಾಪಾಪ ಮಾಡಿರುವ ಈ ನಾಲ್ವರಿಗೆ ಬದುಕುವ ಯೋಗ್ಯತೆ ಇಲ್ಲ ಎಂಬುದು ಇಡೀ ಸಮಾಜದ ಒಕ್ಕೊರಲಿನ ನಿರ್ಣಯ. ಆದರೆ ಕೆಲವರು ಮಾತ್ರ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವುದರಿಂದ ಏನು ಪ್ರಯೋಜನ ಎಂದು ಕೇಳುತ್ತಿದ್ದಾರೆ. ಹೀಗೆ ಗಲ್ಲುಶಿಕ್ಷೆಯನ್ನು ಪ್ರಶ್ನಿಸುವವರ ಸಾಲಿಗೆ ನಿವೃತ್ತ ನ್ಯಾಯಮೂರ್ತಿಯೇ ಸೇರಿರುವುದು ಮಾತ್ರ ವಿಪರ್ಯಾಸವೇ ಸರಿ. ಜ. ಕುರಿಯನ್ ಜೋಸೆಫ್ ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ. ನಾಲ್ವರೂ ಹಂತಕರನ್ನು ಗಲ್ಲಿಗೇರಿಸುವುದರಿಂದ ನಿರ್ಭಯಾ ಪೋಷಕರಿಗೆ ನ್ಯಾಯ ಸಿಕ್ಕಂತಾಗುವುದಿಲ್ಲ ಎಂದು ಜ.ಕುಇರಯನ್ ಜೋಸೆಫ್ ಅಭಿಪ್ರಾಯಪಟ್ಟಿದ್ದಾರೆ. ನಿರ್ಭಯಾ ಹಂತಕರನ್ನು ಗಲ್ಲಿಗೇರಿಸುವುದರಿಂದ ಅವರ ಅಪರಾಧವೂ ಮರೆಯಾಗುತ್ತದೆ. ಸಮಾಜ ಕೆಲವೇ ದಿನಗಳಲ್ಲಿ ಅವರ ಪಾಪ ಕೃತ್ಯವನ್ನು ಮರೆತು ಬಿಡುತ್ತದೆ. ಬದಲಿಗೆ ಅವರನ್ನು ಜೈಲಿನಲ್ಲಿಯೇ ಇಡುವುದರಿಂದ ಅವರಿಗೆ ತಮ್ಮ ಪಾಪ ಪ್ರಜ್ಞೆಯ ಅರಿವಾಗುತ್ತದೆ. ಅಲ್ಲದೇ ಸಮಾಜ ಕೂಡ ಘಟಿಸಿದ ಹೀನಕೃತ್ಯವನ್ನು ನೆನೆಪಿನಲ್ಲಿಟ್ಟುಕೊಂಡು ಜಾಗೃತವಾಗಿರುತ್ತದೆ ಎಂದು ಕುರಿಯನ್ ಅಭಿಪ್ರಾಯಪಟ್ಟಿದ್ದಾರೆ. ನ್ಯಾಯದ ಅರ್ಥ ಜೀವದ ಬದಲಿಗೆ ಜೀವ ತೆಗೆಯುವುದಲ್ಲ. ಅದರಿಂದ ಅಪರಾಧ ಚಟುವಟಿಕೆಗಳೇನೂ ಕಡಿಮೆಯಾಗುವುದಿಲ್ಲ ಎಂದು ಜ.ಕುರಿಯನ್ ಜೋಸೆಫ್ ಹೇಳಿದ್ದಾರೆ. ಇದೇ ವೇಳೆ ನಿರ್ಭಯಾ ಪೋಷಕರು ಅನುಭವಿಸುತ್ತಿರುವ ನೋವು ಮತ್ತು ಸಂಕಟ ತಮಗೆ ಅರ್ಥವಾಗುತ್ತದೆ ಎಂದಿರುವ ಜೋಸೆಫ್, ಅಂದ ಮಾತ್ರಕ್ಕೆ ಕಣ್ಣಿಗೆ ಕಣ್ಣು ಎಂಬ ಹಮ್ಮುರಾಬಿ ಶಾಸನವನ್ನಂತೂ ಜಾರಿ ಮಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/2vBGrrM

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...