ರಾಷ್ಟ್ರದೆಲ್ಲೆಡೆ 20-25 ಪೈಸೆ ಇಳಿಕೆಯಾದ ಪೆಟ್ರೋಲ್‌ ಮತ್ತು ಡೀಸೆಲ್‌ ದರ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಯಾವುದೇ ರೀತಿಯಲ್ಲಿ ಏರಿಕೆ ಕಂಡು ಬಂದಿಲ್ಲ. ಒಂದೋ ಯಥಾಸ್ಥಿತಿ ಕಾಯ್ದುಕೊಳ್ಳುತ್ತಿದೆ, ಇಲ್ಲದಿದ್ದರೆ 5-25 ಪೈಸೆ ವರೆಗೆ ಇಳಿಕೆಯಾಗುತ್ತಿದೆ. ನಗರದಲ್ಲಿ ಇಂದು ಒಂದು ಲೀಟರ್‌ ಪೆಟ್ರೋಲ್‌ ದರ 73.94 ರೂ. ಇದೆ. ಮಾರ್ಚ್‌ 2ರಂದು 74.17 ರೂ. ಇತ್ತು. ರಾಷ್ಟ್ರದ ಎಲ್ಲ ನಗರಗಳಲ್ಲಿ 20-25 ಪೈಸೆ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 71.49 ರೂ. ಇದೆ. ಚೆನ್ನೈನಲ್ಲಿ 74.29 ರೂ. ಇದೆ. ಹೈದರಾಬಾದ್‌ನಲ್ಲಿ 24 ಪೈಸೆ ಕಡಿಮೆಯಾಗಿದ್ದು, 75.99 ರೂ. ಇದೆ. ಕೋಲ್ಕತದಲ್ಲಿ 74.16 ರೂ. ಇದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ 5 ಪೈಸೆ ಕಡಿಮೆಯಾಗಿದ್ದು, ಇಂದು 77.62 ರೂ. ಇದೆ. ಬೆಂಗಳೂರಿನಲ್ಲಿ ಡೀಸೆಲ್‌ ದರದಲ್ಲಿಯೂ 21 ಪೈಸೆ ಇಳಿಕೆಯಾಗಿದೆ. ಒಂದು ಲೀಟರ್‌ 66.29 ರೂ. ಇದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಡೀಸೆಲ್‌ ದರದ ಮೇಲೆ 20 ಪೈಸೆ ಕಡಿಮೆಯಾಗಿದ್ದು, ಇಂದು ಒಂದು ಲೀಟರ್‌ ಡೀಸೆಲ್‌ ದರ 64.10 ರೂ. ಇದೆ. ಚೆನ್ನೈನಲ್ಲಿ 67.66 ರೂ. ಇದೆ. ಹೈದರಾಬಾದ್‌ನಲ್ಲಿ 69.79 ರೂ. ಇದೆ. ಕೋಲ್ಕತಾದಲ್ಲಿ 66.43 ರೂ. ಇದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ 67.75 ರೂ. ಇದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌ ಕಚ್ಚಾ ತೈಲ ದರ 3,264 ರೂ. ಇದೆ. ಸೂಚನೆ: ದೈನಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪರೀಷ್ಕರಣೆಯು ವಿತರಣಾ ಕಂಪನಿಗಳು ಮತ್ತು ಆಯಾ ಪ್ರದೇಶಕ್ಕೆ ಅನುಗುಣವಾಗಿ ಸ್ವಲ್ಪ ವ್ಯತ್ಯಾಸಗಳು ಇರುತ್ತವೆ ಎಂಬುದನ್ನು ಗ್ರಾಹಕರು ಗಮನಿಸತಕ್ಕದ್ದು.


from India & World News in Kannada | VK Polls https://ift.tt/2Ig4iQd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...