ಕೋಲಾರ: ತಾಲೂಕಿನ ಹೊಳಲಿ ಗ್ರಾಮದ 19 ವರ್ಷದ ಯುವತಿಯೊಂದಿಗೆ ಪರಾರಿಯಾಗಿರುವ ಬಂಧನ ಭೀತಿಯಿಂದ ತಿರುಪತಿ ಬಿಟ್ಟು ಜಿಲ್ಲೆಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದೆ. ಕಳೆದ ಫೆ.24ರಂದು ಹೊಳಲಿ ಗ್ರಾಮದ ಯುವತಿಯೊಂದಿಗೆ ಪರಾರಿಯಾಗಿದ್ದ ಸ್ವಾಮೀಜಿ ಆಂಧ್ರದ ತಿರುಪತಿಯಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರ ವಿಶೇಷ ತಂಡ ಆಂಧ್ರಕ್ಕೆ ತೆರಳಿದ ಮಾಹಿತಿ ಸಿಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾನೆ. ಬಂಧನ ಭೀತಿಯಿಂದ ಪದೇ ಪದೆ ಸ್ವಾಮೀಜಿ ಸ್ಥಳ ಬದಲಾಯಿಸುತ್ತಿರುವುದು ಪೊಲೀಸರಿಗೆ ತಲೆ ನೋವಾಗಿ ಪರಿಗಣಿಸಿದೆ. ಪೊಲೀಸರು ಸ್ವಾಮೀಜಿ ಮೊಬೈಲ್ ಟವರ್ ಜಾಡು ಹಿಡಿದು ತಿರುಪತಿಗೆ ಹೋಗುವಷ್ಟರಲ್ಲಿ ಅಲ್ಲಿಂದ ಕಾಲ್ಕಿತ್ತಿರುವ ಸ್ವಾಮೀಜಿ, ಅಲ್ಲಿಂದ ದಾವಣಗೆರೆ, ಬಳಿಕ ಹಾವೇರಿಗೆ ಹೋಗಿ ತಲೆಮರೆಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಸ್ವಾಮೀಜಿ ಬಂಧಿಸಲು ಬೆನ್ನು ಬಿದ್ದಿರುವ ವಿಶೇಷ ಪೊಲೀಸ್ ತಂಡವು ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿಸಿದ್ದು, ಹಾವೇರಿಯಲ್ಲಿರುವ ಸ್ವಾಮೀಜಿ ಸ್ನೇಹಿತರು ಹಾಗೂ ಆಪ್ತರ ವಿಚಾರಣೆ ನಡೆಸುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ. ಪರಾರಿಯಲ್ಲಿರುವ ಸ್ವಾಮೀಜಿ ಭೀಮಲಿಂಗೇಶ್ವರ ದೇವಾಲಯಕ್ಕೆ ಭಕ್ತರು ದೇಣಿಗೆ ರೂಪದಲ್ಲಿ ನೀಡಿದಂತಹ ಸುಮಾರು 10 ಲಕ್ಷ ರೂ.ಗಳನ್ನು ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
from India & World News in Kannada | VK Polls https://ift.tt/2TncGTa