15 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆಯ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಒಂದೊಂದು ಮತವೂ ಅತ್ಯಮೂಲ್ಯ. ರಾಜ್ಯದ ಉತ್ತಮ ಪ್ರಗತಿಗಾಗಿ ತಪ್ಪದೆ ಮತ ಚಲಾಯಿಸಿ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಮತದಾರರಿಗೆ ವಿನಂತಿ ಮಾಡಿದ್ದಾರೆ. ಬೆಂಗಳೂರು: ಅನರ್ಹ ಶಾಸಕರು ಹಾಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಭವಿಷ್ಯ ನಿರ್ಧರಿಸುವ ಹಿನ್ನೆಲೆ 15 ಕ್ಷೇತ್ರಗಳ ಉಪ ಚುನಾವಣೆ ಭಾರಿ ಮಹತ್ವದ್ದಾಗಿದೆ. ಸ್ಪೀಕರ್‌ರಿಂದ ಅನರ್ಹತೆ ಶಿಕ್ಷೆ ಅನುಭವಿಸಿದ್ದ ಶಾಸಕರನ್ನು ಸುಪ್ರೀಂ ಕೋರ್ಟ್ ಕೂಡಾ ಅನರ್ಹ ಎಂದು ಘೋಷಿಸಿದೆ. ಆದರೆ ಜನತಾ ತೀರ್ಪು ಏನಿರಲಿದೆ ಎಂಬ ಕುತೂಹಲ ರಾಷ್ಟ್ರದ ಮುಂದಿದೆ. ರಾಜೀನಾಮೆ ಮೂಲಕ ಸರಕಾರ ಉರುಳಿಸುವ ರಾಜಕೀಯ ತಂತ್ರಕ್ಕೆ ಜನ ಪಾಠ ಕಲಿಸುತ್ತಾರೆಯೇ ಎಂಬ ಕೂತುಹಲ ಉಂಟಾಗಿದೆ. ಅನರ್ಹರು ಗೆದ್ದರೆ ರಾಜೀನಾಮೆ ತಂತ್ರಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ. ಸೋತರೆ ಅಡ್ಡಮಾರ್ಗಕ್ಕೆ ತಡೆಗೋಡೆ ನಿರ್ಮಿಸಿದಂತಾಗುತ್ತದೆ. ಅನರ್ಹರನ್ನು ತಿರಸ್ಕರಿಸಿ ಕರ್ನಾಟಕ ಉಳಿಸಿ ರಾಣೇಬೆನ್ನೂರು ಕ್ಷೇತ್ರ ಉತ್ತರದ ಹೆಬ್ಬಾಗಿಲು ಹಾವೇರಿ ಜಿಲ್ಲೆಯ ವಾಣಿಜ್ಯನಗರಿ ಕ್ಷೇತ್ರದಲ್ಲೀಗ ಚುನಾವಣಾ ಜ್ವರ ಸುಡುತ್ತಿದೆ. ಅರುಣಕುಮಾರ ಗುತ್ತೂರ (ಪೂಜಾರ) ಬಿಜೆಪಿ ಅಭ್ಯರ್ಥಿಯಾಗಿದ್ದರೂ ಅಸಲಿಗೆ ಸ್ಪರ್ಧೆ ನಡೆಯುತ್ತಿರುವುದು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಮತ್ತು ಸಿಎಂ ಯಡಿಯೂರಪ್ಪ ಎಂಬ ಮಾತು ಕೇಳಿಬರುತ್ತಿದೆ. ಶಿವಾಜಿನಗರ ಕ್ಷೇತ್ರ ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಶಿವಾಜಿನಗರದಲ್ಲಿ19 ಅಭ್ಯರ್ಥಿಗಳು ಕಣದಲ್ಲಿದ್ದರೂ ಅಂತಿಮ ಹಣಾಹಣಿ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಮತ್ತು ಬಿಜೆಪಿಯ ಎಂ. ಶರವಣ ಮಧ್ಯೆ ಕೇಂದ್ರೀಕೃತವಾಗುವ ಸಾಧ್ಯತೆ ಇದೆ. ಮುಸ್ಲಿಂ ಮತ ವಿಭಜನೆಯ ಲಾಭ ಪಡೆದು ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು 1999 ಮತ್ತು 2004ರಲ್ಲಿಗೆದ್ದಿದ್ದರು. ನಂತರ 2008, 2013 ಹಾಗೂ 2018ರಲ್ಲಿಕಾಂಗ್ರೆಸ್‌ನಿಂದ ಆರ್. ರೋಷನ್ ಬೇಗ್ ಸತತವಾಗಿ ಆರಿಸಿಬಂದಿದ್ದರು. ಶಾಸಕತ್ವಕ್ಕೆ ರಾಜೀನಾಮೆ ಕೊಟ್ಟ ಬೇಗ್‌ಗೆ ತಾತ್ವಿಕ ಸಂಘರ್ಷ ಮತ್ತಿತರ ಕಾರಣಕ್ಕೆ ‘ಕಮಲ’ ಪಾಳಯದೊಳಗೆ ಪ್ರವೇಶ ಸಿಗಲಿಲ್ಲ. ಅತಂತ್ರರಾದ ಬೇಗ್ ಪಕ್ಷೇತರರಾಗಿ ಸ್ಪರ್ಧಿಸಲು ಬಯಸಿದ್ದರೂ ಕೊನೇ ಕ್ಷಣದಲ್ಲಿಹಿಂದೆ ಸರಿದರು. ಯಶವಂತಪುರ ಕ್ಷೇತ್ರ ಒಕ್ಕಲಿಗರೇ ನಿರ್ಣಾಯಕರಾಗಿರುವ ಯಶವಂತಪುರ ಕ್ಷೇತ್ರದಲ್ಲಿ ಇದೇ ಸಮುದಾಯದ ಹುರಿಯಾಳುಗಳ ನಡುವೆ ಬಿಗ್ ಫೈಟ್ ನಡೆಯುತ್ತಿದೆ. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಈಗ ಬಿಜೆಪಿ ಅಭ್ಯರ್ಥಿ. ಇದೇ ಚುನಾವಣೆಗಳಲ್ಲಿ ಜೆಡಿಎಸ್‌ನಿಂದ ಕಣಕ್ಕಿಳಿದು ಸೋತಿದ್ದ ತೆನೆ ಪಕ್ಷದ ಹುರಿಯಾಳು. ಇಲ್ಲಿ ಕಾಂಗ್ರೆಸ್‌ನ ಕದನ ಕಲಿ. ಕೆ.ಆರ್. ಪುರ ಕ್ಷೇತ್ರ ಕೆ.ಆರ್. ಪುರದಲ್ಲಿ ಪಾತ್ರಗಳೆಲ್ಲವೂ ಅದಲು ಬದಲು. 2018ರಲ್ಲಿಬೈರತಿ ಬಸವರಾಜ್ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿಯ ನಂದೀಶ್ ರೆಡ್ಡಿ ಈ ಬಾರಿ ಬೈರತಿಯನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ. ಕಳೆದ ಬಾರಿ ಕುರುಬ ಸಮುದಾಯದ ಈ ನಾಯಕನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ಸೋಲಿಸಿಯೇ ತೀರುವ ಹಠದಲ್ಲಿದ್ದಾರೆ. ಇದಕ್ಕೆಲ್ಲ ಕಾರಣ, ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದದ್ದು. ಜಿಗಿತದಿಂದ ಅವರು ಅನುಭವಿಸಿದ ಅನರ್ಹತೆ ಕಾಂಗ್ರೆಸ್‌ಗೆ ಪ್ರಧಾನ ಅಸ್ತ್ರವಾಗಿದೆ. ಬೈರತಿ ಬಸವರಾಜ್ ಇಲ್ಲಿಹಳೆ ಹುಲಿ. 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದವರು. ಚಿಕ್ಕಬಳ್ಳಾಪುರ ಕ್ಷೇತ್ರ 2018ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಡೆದ ಮತ 82,006. ಬಿಜೆಪಿಗೆ ಸಿಕ್ಕಿದ್ದು 5576 ವೋಟು. ಆಗ ಕಾಂಗ್ರೆಸ್‌ನಲ್ಲಿದ್ದ ಡಾ. ಕೆ. ಸುಧಾಕರ್ ಈಗ ಬಿಜೆಪಿಯಲ್ಲಿದ್ದಾರೆ. ಸುಧಾಕರ್ ಅವರಂತೆಯೇ ಕಾಂಗ್ರೆಸ್ ಮತಗಳೂ ಬಿಜೆಪಿಗೆ ಶಿಫ್ಟ್ ಆಗುತ್ತವಾ? ಕಾಂಗ್ರೆಸ್-ಜೆಡಿಎಸ್‌ನ ಭದ್ರಕೋಟೆಯಲ್ಲಿ ವರ್ಷದ ಹಿಂದೆ ಮೂರನೇ ಸ್ಥಾನದಲ್ಲಿದ್ದ ಬಿಜೆಪಿ ಒಂದನೇ ಸ್ಥಾನಕ್ಕೆ ಜಿಗಿದೇರುತ್ತದಾ? ಇದು ಬಹುದೊಡ್ಡ ಕುತೂಹಲ. ಹೊಸಕೋಟೆ ಕ್ಷೇತ್ರ ಹಣ ಬಲ, ತೋಳ್ಬಲಕ್ಕೆ ಹೆಸರಾದ ಕ್ಷೇತ್ರದಲ್ಲಿ ಈಗ ಜಾತಿ ಲೆಕ್ಕಚಾರದ ಜತೆಗೆ ಅಭಿವೃದ್ಧಿ ಜಪ ಪ್ರಮುಖ ಚುನಾವಣಾ ತಂತ್ರವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಸಮಬಲದ ಕೋಟೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಛಲ ಎಂ.ಟಿ.ಬಿ. ನಾಗರಾಜ್ ಅವರದ್ದು. ಇವರ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಮತ್ತು ಸ್ವಾಭಿಮಾನಿ ಬಣ ನಾನಾ ತಂತ್ರಗಳನ್ನು ಹೆಣೆಯುತ್ತಿದೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಇದ್ದರೂ ಅಂತಿಮ ಕದನ ಎಂ.ಟಿ.ಬಿ ಮತ್ತು ಬಿಜೆಪಿಯಿಂದ ಸಿಡಿದ ಶರತ್ ಬಚ್ಚೇಗೌಡರ ನಡುವೆ ಎನ್ನಲಾಗುತ್ತಿದೆ. ಇದು ಕಳೆದ ವರ್ಷದ ಮರುಸವಾಲು.
from India & World News in Kannada | VK Polls https://ift.tt/2YhOIec