ಬೆಂಗಳೂರು: ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್‌ನಡಿ ಏರ್ ಇಂಡಿಯಾದ ಅಲೈನ್ಸ್ ಏರ್ ಕಲಬುರಗಿಯಿಂದ ಬೆಂಗಳೂರು ಮತ್ತು ಮೈಸೂರಿಗೆ ಪ್ರತಿನಿತ್ಯ ನೇರ ವಿಮಾನ ಸಂಚಾರವನ್ನು ಆರಂಭಿಸಿದೆ. ವಿಮಾನ ನಿಲ್ದಾಣದ ಅಭಿವೃದ್ಧಿಯಿಂದ ಬೆಂಗಳೂರು ಹಾಗೂ ರಾಜ್ಯದ ಇತರ ವಾಣಿಜ್ಯಿಕ ಕೇಂದ್ರಗಳ ನಡುವೆ ನೇರ ಸಂಪರ್ಕಕ್ಕೆ ಅನುವು ಮಾಡಿಕೊಟ್ಟಂತಾಗಿದೆ. ಪ್ರಯಾಣಿಕರಿಗೆ ಗರಿಷ್ಠ ಸೌಲಭ್ಯಗಳನ್ನು ಹೊಂದಿರುವ 70 ಸೀಟ್‌ಗಳ ವಿಮಾನವನ್ನು ಅಲೈನ್ಸ್ ಏರ್ ನಿಯೋಜಿಸಿದೆ. ಕಲಬುರಗಿ - ಬೆಂಗಳೂರು -ಮೈಸೂರು ಮಾರ್ಗದ ಸಂಚಾರ ಆರಂಭದೊಂದಿಗೆ ನಾಗರಿಕ ವಿಮಾನಯಾನದ ಸಚಿವಾಲಯ ಉಡಾನ್ ಯೋಜನೆಯಡಿ ಒಟ್ಟಾರೆ 238 ಮಾರ್ಗಗಳಲ್ಲಿ ಕಾರ್ಯಾಚರಣೆ ಆರಂಭಿಸಿದಂತಾಗಿದೆ.
from India & World News in Kannada | VK Polls https://ift.tt/2ZsObqw