ಕಡಿಮೆ ಸೀಟು ಗೆದ್ದರೂ ಸರಕಾರ ರಚನೆ ಪಾಠ ಕಲಿಸಿದ ಪವಾರ್‌!

ಮುಂಬಯಿ: ಕಡಿಮೆ ಸ್ಥಾನ ಗೆದ್ದರೂ ಸರಕಾರ ರಚಿಸುವುದು ಹೇಗೆ ಎನ್ನುವುದನ್ನು ಎನ್‌ಸಿಪಿ ನಾಯಕ ತಮಗೆ ಕಲಿಸಿಕೊಟ್ಟಿದ್ದಾರೆ ಎನ್ನುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಅವರು ತಮ್ಮ ಹಳೆಯ ಮಿತ್ರಪಕ್ಷ ಬಿಜೆಪಿಗೆ ಟಾಂಗ್‌ ನೀಡಿದ್ದಾರೆ. ವಸಂತದಾದಾ ಶುಗರ್‌ ಇನ್ಸ್‌ಟಿಟ್ಯೂಟ್‌ನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಉದ್ಧವ್‌, ''ಕಡಿಮೆ ಜಮೀನಿನಲ್ಲಿ ಹೆಚ್ಚು ಇಳುವರಿ ಪಡೆಯುವುದು ಹೇಗೆ ಎಂಬ ಬಗ್ಗೆ ಇಲ್ಲಿ ಚಿಂತನೆ ನಡೆಯುತ್ತಿದೆ. ಅದೇರೀತಿ ಕಡಿಮೆ ಸ್ಥಾನ ಗೆದ್ದರೂ ಸರಕಾರ ರಚಿಸುವುದು ಹೇಗೆ ಎನ್ನುವುದನ್ನು ಶರದ್‌ ಪವಾರ್‌ ನನಗೆ ಕಲಿಸಿಕೊಟ್ಟಿದ್ದಾರೆ,'' ಎಂದು ಹೇಳಿದರು. ಇತ್ತೀಚೆಗೆ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್‌ ಅವರು, ಬಿಜೆಪಿ ಹೆಚ್ಚು ಸ್ಥಾನ ಗಳಿಸಿದ ಅತಿದೊಡ್ಡ ಪಕ್ಷವಾಗಿದ್ದರೂ ಅಪವಿತ್ರ ಮೈತ್ರಿಯ ಸರಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಟೀಕಿಸಿದ್ದರು. ಅದಕ್ಕೆ ಮುಖ್ಯಮಂತ್ರಿ ಟಾಂಗ್‌ ನೀಡಿದ್ದಾರೆ. ಇದೇವೇಳೆ, ರಾಜ್ಯದ ರೈತರ ಬೆಳೆ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿಯೂ ಉದ್ಧವ್‌ ಘೋಷಿಸಿದ್ದಾರೆ. ಈ ಹಿಂದೆ 2 ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಮಾಡುವುದಾಗಿ ಪ್ರಕಟಿಸಿದ್ದರು. 50-50 ಸೂತ್ರದಡಿ ಅಧಿಕಾರ ಹಂಚಿಕೆಗೆ ಬಿಜೆಪಿ ಒಪ್ಪದ ಕಾರಣ ಶಿವಸೇನೆಯು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆ ಸೇರಿ ಸರಕಾರ ರಚಿಸಿದೆ. ಎನ್‌ಸಿಪಿ ಪರ ಜನಮತವಿಲ್ಲ. ಹಾಗಾಗಿ ನಾವು ಸರಕಾರ ರಚಿಸುವುದಿಲ್ಲ ಎಂದೇ ಹೇಳಿಕೊಂಡು ಬಂದಿದ್ದ ಶರದ್‌ ಪವಾರ್‌, ಕೊನೆಗೆ ಮಹಾರಾಷ್ಟ್ರದಲ್ಲಿ ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.


from India & World News in Kannada | VK Polls https://ift.tt/2QnmHhV

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...