ನ್ಯೂ ಇಯರ್ ಪಾರ್ಟಿ ವೇಳೆ ಹುಷಾರ್..! ಈ 12 ಮುನ್ನೆಚ್ಚರಿಕೆ ಮರೆಯಲೇಬೇಡಿ..!

ಗುಡ್‌ ಬೈ ಹೇಳುತ್ತಿದೆ, ಕೈಬೀಸಿ ಕರೆಯುತ್ತಿದೆ. ಹೊಸ ವರ್ಷಕ್ಕೆ ಸ್ವಾಗತ ಕೋರುವಾಗ ಎಷ್ಟೊಂದು ಹರ್ಷ..! , ಸಡಗರ, , ಮೋಜು, ಮಸ್ತಿ.. ಇದೇ ಸಂಭ್ರಮದಲ್ಲಿ ಕಿರಾತಕರೂ ಸಜ್ಜಾಗ್ತಿದ್ದಾರೆ! ಸುಲಿಗೆ ಮಾಡಲು, ಮೋಸ ಮಾಡಲು, ದೌರ್ಜನ್ಯ ಎಸಗಲು ಹೊಸ ಹೊಸ ಪ್ಲಾನ್‌ಗಳೊಂದಿಗೆ ಸಜ್ಜಾಗ್ತಿದ್ದಾರೆ. ವರ್ಷಾಂತ್ಯದ ಪಾರ್ಟಿಗಳೇ ಈ ಕಿರಾಕತರ ಟಾರ್ಗೆಟ್..! ಮದ್ಯದ ಅಮಲು ಭಾರೀ ಡೇಂಜರು..! ವರ್ಷಾಂತ್ಯದ ಸಂಭ್ರಮ ಅಂದಮೇಲೆ ಅಲ್ಲಿ ಮದ್ಯ ಇರಲೇಬೇಕು ಅನ್ನೋದು ಅಲಿಖಿತ ನಿಯಮ. ಹಿಂದೂಗಳ ಯುಗಾದಿಯಲ್ಲಿ ಬೇವು ಬೆಲ್ಲವಿರುತ್ತೆ. ಆದ್ರೆ, ಕ್ರೈಸ್ತರ ಹಾಗೂ ಪಾಶ್ಚಿಮಾತ್ಯರ ಹೊಸ ವರ್ಷವಾದ ಜನವರಿ 1ಕ್ಕೆ ಕೇಕ್, ಮದ್ಯ, ಪಾರ್ಟಿ, ಕುಣಿತವೇ ಫೇಮಸ್… ಡಿಸೆಂಬರ್ 31ರ ಚಳಿಯಲ್ಲಿ ಎಣ್ಣೆ ಪಾರ್ಟಿ ಇಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸುವವರೇ ಹುಷಾರ್..! ಪಡ್ಡೆ ಹುಡುಗರು, ಹುಡುಗಿಯರ ಹಿಂಡು ಮದ್ಯ ಸೇವಿಸುತ್ತಾ ನಡುರಾತ್ರಿಯಲ್ಲಿ ಚೀರಾಡಿ ಹ್ಯಾಪಿ ನ್ಯೂ ಇಯರ್ ಎನ್ನುವ ಮುನ್ನ ಎಚ್ಚರ..! ಯುವಕರಿಗೆ ಸುಲಿಗೆ ಭಯ..! ಯುವತಿಯರಿಗೆ ಕಾಮುಕರ ಕಾಟ..! ವರ್ಷಾಂತ್ಯದ ಪಾರ್ಟಿಗಳಲ್ಲಿ ಭಾಗವಹಿಸುವ ಯುವಕರು ಹಾಗೂ ಯುವತಿಯರು ಇಬ್ಬರನ್ನೂ ಟಾರ್ಗೆಟ್ ಮಾಡಲು ಕಿರಾಕತರು, ಕಾಮುಕರು ಹೊಂಚು ಹಾಕಿರುತ್ತಾರೆ. ಒಂಟಿಯಾಗಿ ಸಿಗುವ ಯುವಕರು, ಯುವತಿಯನ್ನು ದೋಚೋದು, ಯುವಕರ ಸುಲಿಗೆ ಮಾಡೋದು, ಯುವತಿಯರ ಮೇಲೆ ಲೌಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ಪ್ರತಿ ವರ್ಷವೂ ವರದಿಯಾಗುತ್ತಲೇ ಇರುತ್ತವೆ. ಹೀಗಾಗಿ, ಯುವಕ-ಯುವತಿಯರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ವರ್ಷಾಂತ್ಯದ ಪಾರ್ಟಿಗಳಲ್ಲಿ ಈ 12 ಅಂಶಗಳನ್ನು ಮರೆಯಬೇಡಿ..! 1 - ಪಾನೀಯಗಳಲ್ಲಿ ಅಮಲು ಪದಾರ್ಥ ಸೇರಿಸಿಕೊಡುವ ಕಿರಾತಕರ ಕಾಟ ಹೆಚ್ಚಾಗಿದೆ 2 - ಬಣ್ಣ, ರುಚಿ, ವಾಸನೆ ರಹಿತ ಮಾದಕ ಪದಾರ್ಥಗಳನ್ನು ಸೇರಿಸಿ ಕೊಲೆ, ಸುಲಿಗೆ, ಲೈಂಗಿಕ ದೌರ್ಜನ್ಯ ಎಸಗುತ್ತಾರೆ 3 - ಪರಿಚಿತರೇ ಇರಬಹುದು, ಅಪರಿಚಿತರೇ ಇರಬಹುದು ಯಾರನ್ನೇ ನಂಬುವ ಮುನ್ನ ಎಚ್ಚರವಾಗಿರಿ 4 - ಯುವತಿಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತೆ 5 - ಪ್ರೀತಿ ಹೆಸರಲ್ಲೂ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತೆ 6 - ನೀವು ನಂಬುವ, ನಿಮಗೆ ಚನ್ನಾಗಿ ಗೊತ್ತಿರುವ ಜನರ ಜೊತೆಗೆ ಮಾತ್ರ ಪಾರ್ಟಿಗೆ ಹೋಗಿ 7 - ನೀವು ಏಕಾಂಗಿಯಾಗಿದ್ದರೆ, ಪ್ರಯಾಣ ಮಾಡುತ್ತಿದ್ದರೆ ಸುರಕ್ಷತೆವಹಿಸಿ 8 - ಇತರರು ನೀಡುವ ಪಾನೀಯ ಸ್ವೀಕರಿಸುವಾಗ ಎಚ್ಚರವಿರಲಿ 9 - ತೆರೆದ ಕಂಟೇನರ್‌ನಲ್ಲಿ ತುಂಬಿದ ಪಾನೀಯ ಸೇವಿಸಬೇಡಿ 10 - ಪಾನೀಯವನ್ನು ಅರ್ಧ ಸೇವಿಸಿ ಎಲ್ಲಿಗೋ ಹೋಗಿ ಪುನಃ ಬಂದು ಅದೇ ಪಾನೀಯ ಸೇವಿಸಬೇಡಿ 11 - ಆಲ್ಕೋಹಾಲ್ ಸೇವಿಸುವ ಚಟವಿದ್ದರೆ ನಿಮ್ಮ ಜೊತೆಗೆ ಮದ್ಯ ಸೇವಿಸದೇ ಇರುವ ಗೆಳೆಯರು ಇರಲಿ 12 - ಮಹಿಳೆಯರ ಸುರಕ್ಷತೆಗಾಗಿ ಇರುವ ಆಪ್‌ ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳೋದು ಮರೆಯಬೇಡಿ


from India & World News in Kannada | VK Polls https://ift.tt/39hTPAr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...