ರಾಮನ ಜನ್ಮಸ್ಥಾನದ ಮೇಲೆ ಕಣ್ಣಿಟ್ಟ ಪಾಕ್ ಉಗ್ರರು, ಅಯೋಧ್ಯೆ ದಾಳಿಗೆ ಜೈಷ್ ಸ್ಕೆಚ್

ಹೊಸದಿಲ್ಲಿ: ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆ (ಜೆಇಎಂ) ಶ್ರೀರಾಮ ಜನ್ಮಸ್ಥಾನವಾದ ನಗರವನ್ನು ಗುರಿಯಾಗಿಸಿ ಭಾರಿ ದಾಳಿಗೆ ಸಂಚು ಹೆಣೆದಿದೆ ಎಂದು ಗುಪ್ತಚರ ಸಂಸ್ಥೆಗಳು ಸರಕಾರವನ್ನು ಎಚ್ಚರಿಸಿವೆ. ಸಾಮಾಜಿಕ ಮಾಧ್ಯಮವೊಂದರಲ್ಲಿ ಜೈಷ್‌ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ ಕಳುಹಿಸಿರುವ ದಾಳಿ ಕುರಿತಾದ ನಿರ್ದೇಶನ­ಗಳನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಯೋಧ್ಯೆ­ಯಲ್ಲಿನ ರಾಮಜನ್ಮಭೂಮಿ ಸ್ಥಾನವನ್ನೇ ನಾವು ಗುರಿಯಾಗಿಸಬೇಕು ಎಂದು ಉಗ್ರ ಅಜರ್‌ ತನ್ನ ಸಹಚರರಿಗೆ ಸೂಚನೆ ನೀಡಿರುವ ಸಂದೇಶ­ವೊಂದು ಟೆಲಿ­ಗ್ರಾಮ್‌ ಆ್ಯಪ್‌ ಮೂಲಕ ರವಾನೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಗುಪ್ತಚರ ಮಾಹಿತಿಯಿಂದ ಎಚ್ಚೆತ್ತು­ಕೊಂಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಯೋಧ್ಯೆಯಲ್ಲಿ ಬಂದೋಬಸ್ತ್ ಬಿಗಿಗೊಳಿಸ­ಲಾಗಿದೆ. ಹೆಚ್ಚುವರಿ ಸೇನೆ ಹಾಗೂ ಪೊಲೀಸರನ್ನು ಅಯೋಧ್ಯೆಗೆ ರವಾನಿಸಲಾಗಿದೆ. ಪೊಲೀಸರ ಗಸ್ತು ಹೆಚ್ಚಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಡುವಂತೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಲಾಗಿದೆ. ದೇಶಾದ್ಯಂತ ಜೈಷೆ ಉಗ್ರರ ಚಲನವಲನಗಳು ಪತ್ತೆಯಾಗಿರುವ ಸಂಶಯಾಸ್ಪದ ಪ್ರದೇಶ­ಗಳ ಮೇಲೆಯೂ ಹೆಚ್ಚಿನ ನಿಗಾ ಇರಿಸುವಂತೆ ಪೊಲೀಸರಿಗೆ ನಿರ್ದೇಶಿಸಲಾಗಿದೆ. 2019ರ ಮೇ 1ರಂದು ಉಗ್ರ ಮಸೂದ್‌ ಅಜರ್‌ನನ್ನು 'ಜಾಗತಿಕ ಉಗ್ರ' ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಘೋಷಿಸಿದೆ. ಲಾಡೆನ್‌ ನೆರವಿನಿಂದ ಜೈಷ್‌ ಸ್ಥಾಪನೆ: 1999ರಲ್ಲಿ ಭಾರತೀಯ ವಿಮಾನವೊಂದನ್ನು ಉಗ್ರರು ಹೈಜಾಕ್‌ ಮಾಡಿ ಅಫಘಾನಿಸ್ತಾನದ ಕಂದಾಹಾರ್‌ಗೆ ತೆಗೆದುಕೊಂಡು ಹೋಗಿದ್ದರು. 150 ಪ್ರಯಾಣಿಕರ ಬಿಡುಗಡೆಗೆ ಪ್ರತಿಯಾಗಿ ದೇಶದ ಜೈಲಿನಲ್ಲಿದ್ದ ಉಗ್ರ ಮೌಲಾನ ಮಸೂದ್‌ ಅಜರ್‌ನನ್ನು ಬಿಡುಗಡೆಗೆ ಮಾಡಿಸಿಕೊಂಡಿದ್ದರು. ಬಳಿಕ ಅಲ್‌-ಕೈದಾ ಮುಖ್ಯಸ್ಥ ಒಸಾಮ ಬಿನ್‌ ಲಾಡೆನ್‌ ಹಾಗೂ ತಾಲಿಬಾನ್‌ ಉಗ್ರರ ನೆರವಿನಿಂದ ಉಗ್ರ ಅಜರ್‌ ತನ್ನದೇ ಹೊಸ ಸಂಘಟನೆ 'ಜೈಷ್‌-ಎ-ಮೊಹಮ್ಮದ್‌' ಸ್ಥಾಪಿಸಿದ. ಭಾರತದ ಮೇಲೆ ದಾಳಿ ನಡೆಸಿ ಆತಂಕದ ವಾತಾವರಣ ಸೃಷ್ಟಿಸುವುದೇ ಈ ಸಂಘಟನೆಯ ಪ್ರಮುಖ ಉದ್ದೇಶ. 2001ರಲ್ಲಿ ಜಮ್ಮು-ಕಾಶ್ಮೀರದ ವಿಧಾನಸಭೆ ಹಾಗೂ ದಿಲ್ಲಿಯ ಸಂಸತ್‌ ಭವನದ ಮೇಲೆ ಜೈಷ್‌ ಉಗ್ರರು ದಾಳಿ ನಡೆಸಿ 50 ಜನರನ್ನು ಬಲಿ ಪಡೆದಿದ್ದರು. 2016ರಲ್ಲಿ ಉರಿ ಸೇನಾ ನೆಲೆ ಮೇಲೆಯೂ ಜೈಷ್‌ ಉಗ್ರರು ಭಾರಿ ದಾಳಿ ನಡೆಸಿ 19 ಯೋಧರನ್ನು ಹತ್ಯೆಗೈದಿದ್ದರು.


from India & World News in Kannada | VK Polls https://ift.tt/39fLdtN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...