ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಬರೆಯಲಿದ್ದಾನೆ. ಮೈತ್ರಿ ಸರ್ಕಾರದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದೋಸ್ತಿ ಸರ್ಕಾರಕ್ಕೆ ಪತನಕ್ಕೆ ಕಾರಣರಾಗಿದ್ದ ಶಾಸಕರು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದಿದ್ದು, ಅವರ ಭವಿಷ್ಯ ಇಂದು ನಿರ್ಧಾರವಾಗಲಿದೆ. ಆದರೆ 15 ವಿಧಾನಸಭಾ ಕ್ಷೇತ್ರಗಳಲ್ಲಿ ಅನರ್ಹ ರನ್ನು ಸೋಲಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಇದಕ್ಕೆ ಟ್ವೀಟ್ ಟಾಂಗ್ ಕೊಟ್ಟಿದೆ. "ಕರ್ನಾಟಕದ ಜನತಾ ನ್ಯಾಯಾಲಯದಲ್ಲಿ : ಕಾಂಗ್ರೆಸ್ - ಅನರ್ಹ - ಅನರ್ಹ ನಾಳಿನ ಉಪಚುನಾವಣೆಯಲ್ಲಿ ಅನರ್ಹರನ್ನು ತಿರಸ್ಕರಿಸಿ ಕರ್ನಾಟಕ ಉಳಿಸಿ."ಎಂದು ಟ್ವೀಟ್ ಮಾಡಿ ಕರ್ನಾಟಕದಲ್ಲಿ ಬಿಜೆಪಿ ಅಲೆ ಎಂದು ಹ್ಯಾಶ್ ಟಾಗ್ ಬಳಸಿದೆ. ಬಿಜೆಪಿಯ ಈ ಟ್ವೀಟ್ ಪ್ರಕಾರ , ಅನರ್ಹ ಎನಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಉಪಚುನಾವಣೆಯಲ್ಲಿ ಸೋಲಿಸಿ ಕರ್ನಾಟಕವನ್ನು ಉಳಿಸಿ ಎಂದು. ಇದನ್ನೇ ಕಾಲೆಳೆದಿರುವ ಕಾಂಗ್ರೆಸ್ ಪಕ್ಷ, ಅನರ್ಹ ಪದ ಬಳಸಿಕೊಂಡು ಟ್ವೀಟ್ ಟಾಂಗ್ ಕೊಟ್ಟಿದೆ. " ಕಾಂಗ್ರೆಸ್ ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಮಾರಾಟವಾದ ಅನರ್ಹರನ್ನು ತಿರಸ್ಕರಿಸಿಎಂದು ಬಿಜೆಪಿಯೇ ಕರೆ ಕೊಟ್ಟಿದೆ. ಆಪರೇಷನ್ ಕಮಲ ಕುದುರೆ ವ್ಯಾಪಾರದಿಂದಪ್ರಜಾಪ್ರಭುತ್ವಕ್ಕೆ ಸಂವಿಧಾನಕ್ಕೆ ಅಪಚಾರ. ಸ್ವಾಭಿಮಾನಿ ಮತದಾರರು ಕರ್ನಾಟಕದಮರ್ಯಾದೆ ಉಳಿಸಲು ರಾಜಕೀಯ ಶುದ್ಧೀಕರಣಗೊಳಿಸಲು, ಕರ್ನಾಟಕದ ಮರ್ಯಾದೆ ಉಳಿಸಿ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿ ಕಾಲೆಳೆದಿದೆ.
from India & World News in Kannada | VK Polls https://ift.tt/2OPoVH3