ಭಾರತದ ಟೆನಿಸ್ ಐಕಾನ್ ಲಿಯಾಂಡರ್ ಪೇಸ್ 2020ರಲ್ಲಿ ನಿವೃತ್ತಿ

ಹೊಸದಿಲ್ಲಿ: ಭಾರತದ ದಿಗ್ಗಜ ಸುಮಾರು ಮೂರು ದಶಕಗಳ ಕಾಲದ ತಮ್ಮ ವೃತ್ತಿ ಜೀವನಕ್ಕೆ ಮುಂದಿನ ವರ್ಷ ಗುಡ್‌ ಬೈ ಹೇಳಲಿದ್ದಾರೆ. ಬುಧವಾರ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳಿಗೆ ಕ್ರಿಸ್ಮಸ್ ಶುಭಾಶಯ ಹೇಳುವ ಸಂದರ್ಭದಲ್ಲಿ 46 ವರ್ಷದ ಪೇಸ್ ಈ ವಿಷಯ ಬಹಿರಂಗಪಡಿಸಿದ್ದಾರೆ. 1991ರಲ್ಲಿ ವೃತ್ತಿ ಜೀವನ ಆರಂಭಿಸಿದ್ದ ಪೇಸ್ 2020ರಲ್ಲಿ ವೃತ್ತಿಪರನಾಗಿ 30 ವರ್ಷ ಪೂರೈಸಲಿದ್ದಾರೆ. ಈ ಅವಧಿಯಲ್ಲಿ ಸಾರ್ವಕಾಲಿಕ ಶ್ರೇಷ್ಠ ಡಬಲ್ಸ್ ಆಟಗಾರರಲ್ಲೊಬ್ಬರಾಗಿ ಗುರುತಿಸಿಕೊಂಡಿದ್ದರಾರೆ. ಇಲ್ಲಿಯ ತನಕ 18 ಗ್ರ್ಯಾನ್ ಸ್ಲಾಮ್ (ಪುರುಷರ ಡಬಲ್ಸ್‌ನಲ್ಲಿ ಎಂಟು ಮತ್ತು ಮಿಶ್ರ ಡಬಲ್ಸ್‌ನಲ್ಲಿ 10) ಪ್ರಶಸ್ತಿಗಳು ಸೇರಿದಂತೆ ಒಟ್ಟು 66 ಪ್ರಶಸ್ತಿಗಳು ಪೇಸ್ ಮಡಿಲ ಸೇರಿವೆ. 1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಹಿರಿಮೆ ಅವರದು. ಅಲ್ಲದೆ ಏಳು ಒಲಿಂಪಿಕ್ಸ್‌ಗಳಲ್ಲಿ ಸ್ಪರ್ಧಿಸಿದ ಏಕಮೇವಾದ್ವಿತೀಯ ಆಟಗಾರ ಎಂಬ ಹೆಗ್ಗಳಿಕೆಗೂ ಪೇಸ್ ಭಾಜನವಾಗಿದ್ದಾರೆ. ಇದೇ ಸಂದರ್ಭದಲ್ಲಿ ಸುದೀರ್ಘ ಪ್ರಯಾಣದುದ್ಧಕ್ಕೂ ತಮಗೆ ಸಾಥ್ ನೀಡಿದ ಹೆತ್ತವರು, ಕುಟಂಬ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಪೇಸ್ ಮರೆಯಲಿಲ್ಲ. ಪೋಷಕರ ಸಹಾಯ ಇಲ್ಲದಿರುತ್ತಿದ್ದರೆ ಈ ಹಂತಕ್ಕೆ ತಲುಪಿರಲಿಲ್ಲ ಎಂದು ನುಡಿದರು. 2020ನೇ ಸಾಲಿನಲ್ಲಿ ಕೇವಲ ಆಯ್ದ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುವುದಾಗಿ ಪೇಸ್ ಖಚಿತಪಡಿಸಿದ್ದಾರೆ. ಅಲ್ಲದೆ ಇದೊಂದು ಸಂಭ್ರಮಾಚರಣೆಯ ವರ್ಷವಾಗಿರಲಿದೆ ಎಂಬುದನ್ನು ಪೇಸ್ ತಿಳಿಸಿದರು. ಸಂತೋಷವನ್ನು ಹೊರತುಪಡಿಸಿದರೆ ಇನ್ಯಾವುದಕ್ಕಾಗಿ ಆಡಲು ಸಾಧ್ಯವೇ ಇಲ್ಲ. ನೀವು ಯಾವುದೇ ಗ್ರ್ಯಾನ್ ಸ್ಲಾಮ್ ನೋಡಿದರೂ (ಡಬಲ್ಸ್ ಹಾಗೂ ಮಿಶ್ರ ಡಬಲ್ಸ್) ಅವೆಲ್ಲವನ್ನು ನಾನು ಗೆದ್ದಿದ್ದೇನೆ. ಇನ್ನು ದೀರ್ಘ ಸಮಯದ ವರೆಗೂ ಆಡಿರುವುದನ್ನು ಪರಿಗಣಿಸಿದಾಗ ಸರ್ ರೊಡ್ ಲೇವರ್ ಹೊರತಾಗಿ ಮೂರು ವಿಭಿನ್ನ ದಶಕಗಳಲ್ಲಿ ವಿಂಬಲ್ಡನ್ ಗೆದ್ದಿರುವ ಏಕಮಾತ್ರ ಆಟಗಾರ ನಾನು ಎಂದು ಪೇಸ್ ವಿವರಿಸಿದರು. ಲಿಯಾಂಡರ್ ಪೇಸ್ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಸಾಧನೆಗಳು: ಆಸ್ಟ್ರೇಲಿಯಾ ಓಪನ್: 2012 ಫ್ರೆಂಚ್ ಓಪನ್: 1999, 2001, 2009 ವಿಂಬಲ್ಡನ್: 1999 ಅಮೆರಿಕನ್ ಓಪನ್: 2006, 2009, 2013 ಲಿಯಾಂಡರ್ ಪೇಸ್ ಮಿಶ್ರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಸಾಧನೆಗಳು: ಆಸ್ಟ್ರೇಲಿಯಾ ಓಪನ್: 2003, 2010, 2015 ಫ್ರೆಂಚ್ ಓಪನ್: 2016 ವಿಂಬಲ್ಡನ್: 1999, 2003, 2010, 2015 ಅಮೆರಿಕನ್ ಓಪನ್: 2008, 2015


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MuwKR5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...