ಹೊಸದಿಲ್ಲಿ: ರಾಜಸ್ಥಾನದ ಉದಯಪುರದಲ್ಲಿ ಕಣ್ಮನ ಸೆಳೆಯುವಂಥ ಮದುವೆ ಮಹೋತ್ಸವ ಇತ್ತೀಚೆಗೆ ನಡೆಯಿತು. ಫ್ಯಾಷನ್ ಕಂಪನಿಯ ಸಂಸ್ಥಾಪಕಿ ಫಾಲ್ಗುಣಿ ನಾಯರ್ ಪುತ್ರಿ ಅದ್ವೆತ್ರೖತ ನಾಯರ್ ಮತ್ತು ಅನುಭವ್ ಗುಪ್ತಾ ನಡುವಿನ ವಿವಾಹದ ಸುದ್ದಿ ಒಂದು ಕಡೆಯಾದರೇ, ತಮ್ಮ ಪುತ್ರಿಗೆ ಫಾಲ್ಗುಣಿ ನೀಡಿರುವ ಸಲಹೆಯು ಎಲ್ಲರ ಗಮನ ಸೆಳೆಯುವಂತಿದೆ. ನೈಕಾ ಫ್ಯಾಶನ್ ಸಿಇಒ ಸಹ ಆಗಿರುವ ಆದ್ವೈತಾ ಅವರಿಗೆ ಮದುವೆಗೆ ಮುನ್ನವೇ, ''ಇನ್ನು ಮುಂದೆ ನೀನು ಮತ್ತು ನಿನ್ನ ಭಾವಿ ಪತಿ ಬೇರೆಬೇರೆಯಲ್ಲ. ಇಬ್ಬರೂ ಒಂದೇ ಜೀವ ಎನ್ನುವಂತೆ ಯೋಚಿಸು,'' ಎಂಬುದಾಗಿ ಫಾಲ್ಗುಣಿ ಸಲಹೆ ನೀಡಿದ್ದರು. ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿರುವ ಫಾಲ್ಗುಣಿ, ''ಮದುವೆ ಎಂದರೆ ಒಟ್ಟಿಗೆ ಇರುವುದು ಮತ್ತು ಎಲ್ಲವನ್ನೂ ಒಟ್ಟಿಗೆ ಮಾಡುವುದು, ಒಂದೇ ರೀತಿ ಯೋಚಿಸುವುದು ಮತ್ತು ಒಬ್ಬರಿಗೊಬ್ಬರು ಆಸರೆಯಾಗಿ ನಿಲ್ಲುವುದು ಎಂದರ್ಥ. ಇಬ್ಬರು ಸ್ವತಂತ್ರ ವ್ಯಕ್ತಿಗಳು ವಿಲೀನಗೊಳ್ಳಬೇಕು. ಇದಕ್ಕಾಗಿ ಅದ್ವೆತ್ರೖತಾ ಶ್ರಮಿಸಬೇಕು. ಇಂದಿನ ಜಗತ್ತಿನಲ್ಲಿ ಈ ಕೆಲಸವು ಬಹಳ ಕಷ್ಟದ್ದಾಗಿದೆ,'' ಎಂದಿದ್ದಾರೆ.
from India & World News in Kannada | VK Polls https://ift.tt/2PZEBbl