ಮೋದಿಗಾಗಿ ಗುಡಿ ಕಟ್ಟಿ, ನಿತ್ಯ ಪೂಜೆ: ವಿಭಿನ್ನ ಅಭಿಮಾನ ಮೆರೆದ ತಮಿಳುನಾಡು ರೈತ

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರ ಬಹುದೊಡ್ಡ ಅಭಿಮಾನಿಯಾಗಿರುವ ರೈತನೋರ್ವ ಬಹಳ ವಿಭಿನ್ನವಾಗಿ ತನ್ನ ಪ್ರೇಮವನ್ನು ಮೆರೆದಿದ್ದಾನೆ. ತಿರುಚಿರಾಪಲ್ಲಿಯಲ್ಲಿ ಮೋದಿಗಾಗಿ ದೇವಾಲಯವನ್ನು ಕಟ್ಟಿಸಿದ್ದಾನೆ. ತಿರುಚಿರಾಪಲ್ಲಿಯ ಎರಾಕ್ಕುಡಿ ಎಂಬ ಗ್ರಾಮದಲ್ಲಿ 50 ವರ್ಷದ ಪಿ.ಶಂಕರ್ ಎಂಬ ಮೋದಿ ದೇವಾಲಯ ಕಟ್ಟಿಸಿದಾತ. ಅಯ್ಯ (ಮೋದಿ) ಗಾಗಿ ದೇಗುಲ ನಿರ್ಮಾಣ ಮಾಡಲು 8 ತಿಂಗಳ ಹಿಂದೆಯೇ ನಿರ್ಧಾರ ಮಾಡಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದೀಗ ವಾರಗಳ ಹಿಂದೆ ದೇಗುಲ ಉದ್ಘಾಟನೆಯಾಗಿದೆ. ಪ್ರಧಾನಿ ಮೋದಿ ಅವರು ಮಾಡಿರುವ ಕೆಲಸದಿಂದ ತುಂಬಾ ಪ್ರಭಾವಿತನಾಗಿದ್ದು, ಅವರ ಯೋಜನೆಗಳ ಫಲಾನುಭವಿಯೂ ಆಗಿದ್ದೇನೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ನನಗೆ ಹಲವು ಪ್ರಯೋಜನವಾಗಿದೆ. ಹೀಗಾಗಿ ಅವರಿಗೆ ದೇವಾಲಯ ಕಟ್ಟಿಸಿದ್ದೇನೆ" ಎಂದು ರೈತ ಹೇಳಿದ್ದಾನೆ. ಮೋದಿಗಾಗಿ ಕಟ್ಟಿರುವ ಈ ಗುಡಿಯು 8 ಚದರ ಅಡಿ ವಿಸ್ತೀರ್ಣ ಇದ್ದು, ಇದಕ್ಕೆ ಪ್ರತೀದಿನ ಪೂಜೆ ಸಲ್ಲಿಸಲಾಗುತ್ತಿದೆ. ಈ ಗುಡಿ ನಿರ್ಮಿಸಲು ರೂ.1.2 ಲಕ್ಷ ವೆಚ್ಚವಾಗಿದೆಯಂತೆ. ಮೋದಿ ಅವರ ಪ್ರತಿಮೆಯ ಜೊತೆಗೆ ಅದೇ ಕೊಠಡಿಯಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ, ಹಾಲಿ ಸಿಎಂ ಪಳನಿಸ್ವಾಮಿ, ಗೃಹ ಮಂತ್ರಿ ಅಮಿತ್ ಶಾ ಚಿತ್ರಗಳನ್ನೂ ಇಡಲಾಗಿದೆ.


from India & World News in Kannada | VK Polls https://ift.tt/2ESL8hJ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...