ಹೊಸದಿಲ್ಲಿ: ಕಳೆದ ಮಾರ್ಚ್ ನಲ್ಲಿ ಗೆ ಸೇರ್ಪಡೆಯಾಗಿದ್ದ, ಪ್ರಮುಖ , ಮಾಜಿ ಸಂಸದೆ ಕಾಂಗ್ರೆಸ್ ಪಕ್ಷ ತೊರೆದಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ಪಕ್ಷದ ಸದಸ್ಯರಾಗಿದ್ದ ಪುಕೆ ಕಳೆದ ವರ್ಷ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿ ದಿನ ಬಿಜೆಪಿಯ ಮೂಲ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಆಡಳಿತ ಪಕ್ಷವು ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು. ಬಳಿಕ ಕಳೆದ ಮಾರ್ಚ್ ನಲ್ಲಿ ಕೈ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಕಾಂಗ್ರೆಸ್ ಪಕ್ಷವನ್ನು ಕೂಡ ತೊರೆದಿರುವ ಅವರು ಕಾಂಗ್ರೆಸ್ ನಲ್ಲಿ ತನ್ನ ಧ್ವನಿ ಕೇಳುತ್ತಿಲ್ಲ ಎಂಬ ಕಾರಣ ನೀಡಿ ರಾಜೀನಾಮೆ ಸಲ್ಲಿಸಿದ್ದಾರೆ. ಬಿಎಸ್‌ಪಿ ನಾಯಕಿ ಮಾಯಾವತಿಗೆ ಅತ್ಯಂತ ನಿಕಟವರ್ತಿ ಎನಿಸಿಕೊಂಡಿದ್ದ ಪುಲೆ, 2000 ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. 2002, 2007 ಮತ್ತು 2012 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 2012 ರಲ್ಲಿ ಗೆದ್ದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದ್ದರು.
from India & World News in Kannada | VK Polls https://ift.tt/2sccoFv