ಸೂರತ್: ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ , ಮುಂಬರುವ ಶ್ರೀಲಂಕಾ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೂ ಮುನ್ನ ಗುಜರಾತ್ ಮತ್ತು ಕೇರಳ ನಡುವಣ ರಣಜಿ ಪಂದ್ಯದಲ್ಲಿ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಿತ್ತು. ಅಂತೆಯೇ ಬುಧವಾರ ಇಲ್ಲಿನ ಲಾಲಾಭಾಯ್ ಕಂಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ಶುರುವಾರ ಕ್ರಿಕೆಟ್ ಪಂದ್ಯದಲ್ಲಿ ಬುಮ್ರಾ ಕಣಕ್ಕಿಳಿಯಬೇಕಿತ್ತು. ಆದರೆ, ಅಧ್ಯಕ್ಷ ಮಧ್ಯ ಪ್ರವೇಶಿಸಿ ಸ್ಟಾರ್ ವೇಗಿಗೆ ರಣಜಿ ಪಂದ್ಯದಲ್ಲಿ ಆಡದೇ ಇರುವಂತೆ ಸೂಚಿಸಿದ್ದು, ಸೀಮಿತ ಓವರ್‌ಗಳ ಕ್ರಿಕೆಟ್ ಕಡೆಗೆ ಗಮನ ನೀಡುವಂತೆ ಸೂಚಿಸಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಕಳೆದ ಆಗಸ್ಟ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದಲೂ ಬುಮ್ರಾ ಟೀಮ್ ಇಂಡಿಯಾದಿಂದ ಬಹು ಕಾಲ ಹೊರಗುಳಿದಿದ್ದಾರೆ. ಮರುಕಳಿಸುತ್ತಿರುವ ಬೆನ್ನು ನೋವಿನ ಸಮಸ್ಯೆ ಕಾರಣ ಬುಮ್ರಾ ವಿಶ್ರಾಂತಿ ಮೊರೆ ಹೋಗಿದ್ದರು. ಈ ಸಲುವಾಗಿ ಲಂಡನ್‌ನಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡಿದ್ದಾರೆ. ಈ ಮಧ್ಯತೆ ಚಿಕಿತ್ಸೆ ನಂತರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಅಡಿಯಲ್ಲಿ ಪುನರ್ ವಸತಿ ಶಿಬಿರಕ್ಕೆ ಒಳಪಡೆದೆ ಖಾಸಗಿಯಾಗಿ ಚೇತರಿಕೆ ಕಾರ್ಯಕ್ರಮ ಪಡೆದುಕೊಂಡ ಬುಮ್ರಾ ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದರು. ಎನ್‌ಸಿಎ ಕಣ್ಗಾವಲಿನಲ್ಲಿ ಬುಮ್ರಾ ಚೇತರಿಕೆ ಆಗದೇ ಇರುವ ಕಾರಣಕ್ಕೆ ಎನ್‌ಸಿಎ ಬುಮ್ರಾ ಅವರ ಫಿಟ್ನೆಸ್ ಪರೀಕ್ಷೆ ನಡೆಸಲು ನಿರಾಕರಿಸಿತ್ತು. ಹೀಗಾಗಿ ಗುಜರಾಜ್ ವಿರುದ್ಧದ ರಣಜಿ ಪಂದ್ಯದ ಮೂಲಕ ಬುಮ್ರಾ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಿತ್ತು. ಆದರೀಗ ಬಿಸಿಸಿಐ ಬಾಸ್ ಆದೇಶದಂತೆ ಬುಮ್ರಾ ರಣಿ ಪಂದ್ಯದಿಂದ ಹೊರಗುಳಿದು ಟಿ20 ಮತ್ತು ಏಕದಿನ ಕ್ರಿಕೆಟ್ ಕಡೆಗೆ ಗಮನ ನೀಡಿದ್ದಾರೆ. ಭಾರತ ತಂಡ ಮುಂಬರುವ ಜನವರಿಯಲ್ಲಿ ಮೊದಲಿಗೆ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಕ್ರಿಕೆಟ್ ಸರಣಿ ಮತ್ತು ಆಸ್ಟ್ರೇಲಿಯಾ ಎದುರು 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನಾಡಲಿದೆ. ಈ ಎರಡೂ ಸರಣಿಗಳಿಗೆ ಬುಮ್ರಾ ಭಾರತ ತಂಡಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬುಮ್ರಾ, ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ವಿಶಾಖಪಟ್ಟಣದಲ್ಲಿ ಭಾರತ ತಂಡ ತನ್ನ 2ನೇ ಏಕದಿನ ಕ್ರಿಕೆಟ್ ಪಂದ್ಯ ಸಲುವಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ನೆಟ್ಸ್‌ನಲ್ಲಿ ಬೌಲಿಂಗ್ ನಡೆಸಿದ್ದರು. ಈ ಸಂದರ್ಭದಲ್ಲಿ ಹಲವುರು ಬುಮ್ರಾ ಮೊದಲಿಗಿಂತಲೂ ಅತ್ಯುತ್ತಮ ಫಿಟ್ನೆಸ್ ಪಡೆದುಕೊಂಡಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದರು. ಆದರೆ, ಫಿಟ್ನೆಸ್ ಪರೀಕ್ಷೆ ನಡೆಸದೇ ಬುಮ್ರಾಗೆ ಟೀಮ್ ಇಂಡಿಯಾದ ಆಡುವ 11ರ ಬಳಗದಲ್ಲಿ ಆಡುವ ಅವಕಾಶ ನೀಡಲಾಗುತ್ತದೆಯೇ ಎಂಬದನ್ನು ಕಾದು ನೋಡಬೇಕಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯು ಜನವರಿ 5ರಂದು ಆರಂಭವಾಗಲಿದ್ದು, ಆಸ್ಟ್ಏಲಿಯಾ ವಿರುದ್ಧದ ಏಕದಿನ ಸರಣಿ ಜ.15ರಂದು ಆರಂಭವಾಗಲಿದೆ. ಬಳಿಕ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು 5 ಪಂದ್ಯಗಳ ಅಂತಾರಾಷ್ಟ್ರೀಯ ಟಿ20, 3 ಪಂದ್ಯಗಳ ಏಕದಿನ ಹಾಗೂ 2 ಪಂದ್ಯಗಳ ಟೆಸ್ಟ್ ಸರಣಿಗಳನ್ನು ಆಡಲಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2t48q1K