ಕೋಲಾರ: ಸ್ಥಳೀಯ ಕ್ರಿಕೆಟ್ ಪದ್ಯಾವಳಿಯಲ್ಲಿ ಕ್ಯಾಚ್ ಹಿಡಿಯಲು ಹೋಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡ ಆಟಗಾರರು ಪ್ರಜ್ಞೆ ಕಳೆದುಕೊಂಡ ಘಟನೆ ನಡೆದಿದೆ. ಶ್ರೀನಿವಾಸಪುರದ ಸೋಮಯಾಜಲಹಳ್ಳಿಯಲ್ಲಿ ನಡೆಯುತ್ತಿದ್ದ ಲೋಕಲ್ ಕ್ರಿಕೆಟ್ ಟೂರ್ನಮೆಂಟ್ ವೇಳೆ ಈ ಘಟನೆ ಸಂಭವಿಸಿದೆ. ಕ್ಯಾಚ್ ಹಿಡಿಯಲು ಹೋಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡ ಆಟಗಾರರು, ಪ್ರಜ್ಞೆ ತಪ್ಪಿದ್ದು, ಇಬ್ಬರೂ ಆಟಗಾರರ ಸ್ಥಿತಿ ಗಂಭೀರವಾಗಿದೆ. ಬ್ಯಾಟ್ಸ್‌ಮನ್ ಕ್ಯಾಚ್ ನೀಡುತ್ತಿದ್ದಂತೆ, ಫೀಲ್ಡಿಂಗ್‌ನಲ್ಲಿ ಇದ್ದ ಇಬ್ಬರೂ ಆಟಗಾರರು ಕ್ಯಾಚ್ ಹಿಡಿಯಲು ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಬಲವಾಗಿ ಡಿಕ್ಕಿ ಹೊಡೆದುಕೊಂಡಿದ್ದಾರೆ. ಬಾನು ಹಾಗೂ ಶ್ರೀನಿವಾಸ ಡಿಕ್ಕಿ ಹೊಡೆದುಕೊಂಡ ಪೀಲ್ಡರ್ಸ್. ಸೋಮಯಾಜಲಹಳ್ಳಿ ಯುವಕರು, ದೋನಿ ಕಪ್ ಆಯೋಜನೆ ಮಾಡಿದ್ದರು. ರೈಸಿಂಗ್ ಸ್ಟಾರ್ಸ್ & SAS ಕ್ರಿಕೆಟರ್ಸ್ ತಂಡಗಳ ನಡುವೆ ಟೆನಿಸ್ ಬಾಲ್ ಮ್ಯಾಚ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ತಂಡದ ಇಬ್ಬರು ಆಟಗಾರರು ಅವಘಡದಿಂದ ಪ್ರಜ್ಞೆ ತಪ್ಪಿದ್ದಾರೆ. ಇತರೆ ಆಟಗಾರರು ಈ ಇಬ್ಬರೂ ಆಟಗಾರರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸದ್ಯಕ್ಕೆ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲೇ ಇದ್ದಾರೆ. ಆಟಗಾರರು ಡಿಕ್ಕಿ ಹೊಡೆದುಕೊಂಡು ಕೆಳಗೆ ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
from India & World News in Kannada | VK Polls https://ift.tt/2ZlJC14