ಹೊಸಿದಿಲ್ಲಿ: ಬದಲಾವಣೆ ಆತಂಕ ಜಗತ್ತನ್ನು ವ್ಯಾಪಿಸಿದ್ದರೂ 2010ರ ದಶಕ ಗರಿಷ್ಠ ತಾಪಮಾನದ ದಶಕವಾಗಿ ಇತಿಹಾಸದಲ್ಲಿ ದಾಖಲಾಗುವ ಅಪಾಯ ಎದುರಾಗಿದೆ. ಅದರಲ್ಲಿಯೂ 2019 ಈ ಶತಮಾನದ ಮೂರನೇ 'ಬಿಸಿ ವರ್ಷ'ವಾಗಿ ದಾಖಲೆ ಬರೆಯಲಿದೆ. () ವರದಿಯು ಈ ಕುರಿತು ಆತಂಕದ ಸಂದೇಶಗಳನ್ನು ರವಾನಿಸಿದೆ. ವರದಿಯ ಸಾರಾಂಶ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯು 'ಸಮುದ್ರಗಳು ಕುದಿಯುತ್ತಿದ್ದು ಭೂಮಿ ಧಗಿಸುತ್ತಿದೆ. ಹವಾಮಾನ ಬದಲಾವಣೆ ವಿಚಾರದಲ್ಲಿಎಚ್ಚೆತ್ತುಕೊಳ್ಳದಿದ್ದರೆ ಮಾನವ ಸಂಕುಲಕ್ಕೆ ಉಳಿಗಾಲವಿಲ್ಲ' ಎಂದು ಎಚ್ಚರಿಕೆ ನೀಡಿದೆ. ಡಬ್ಲ್ಯೂಎಂಒ ವರದಿಯ ಎಚ್ಚರಿಕೆ ಏನು?
- - ಹಸಿರುಮನೆ ಅನಿಲಗಳಿಂದ ಸೃಷ್ಟಿಯಾಗುವ ಶೇ.90ರಷ್ಟು ಉಷ್ಣತೆಯನ್ನು ಹೀರಿಕೊಳ್ಳುವ ಸಮುದ್ರಗಳು ತಮ್ಮ ಸಾಮರ್ಥ್ಯದ ಗರಿಷ್ಠ ಮಟ್ಟ ತಲುಪಿವ
- - ಸಮುದ್ರದಲ್ಲಿನ ವೈಪರೀತ್ಯಗಳಿಂದಾಗಿ 2019ರ ಮೊದಲರ್ಧದಲ್ಲಿ10 ದಶಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ಅವರಲ್ಲಿ7 ದಶಲಕ್ಷ ಮಂದಿ ಪ್ರವಾಹ, ಚಂಡಮಾರುತದಂತಹ ಕಾರಣಗಳಿಂದ ನೆಲೆ ಕಳೆದುಕೊಂಡಿದ್ದಾರೆ. ವರ್ಷಾಂತ್ಯದ ಹೊತ್ತಿಗೆ ಸಂತ್ರಸ್ತರ ಸಂಖ್ಯೆ 22 ದಶಲಕ್ಷಕ್ಕೆ ಏರಿಕೆಯಾಗಲಿದೆ
- - ಶತಮಾನಕ್ಕೊಮ್ಮೆ ಸಂಭವಿಸುತ್ತಿದ್ದ ಬಿಸಿಗಾಳಿ ಮತ್ತು ಪ್ರವಾಹ ಈಗ ಸಾಮಾನ್ಯ ಸಂಗತಿಗಳಾಗಿ ಪರಿಣಮಿಸಿವೆ
- - ಕಳೆದ ನಾಲ್ಕು ದಶಕಗಳಲ್ಲಿತಾಪಮಾನ ಏರಿಕೆಯಾಗುತ್ತಲೇ ಇದ್ದು, ಪ್ರತಿ ದಶಕವೂ ಹೊಸ ದಾಖಲೆ ಬರೆಯುತ್ತಲೇ ಇದೆ
- - ಆರ್ಟಿಕ್, ಅಂಟಾರ್ಟಿಕಾ ಸಮುದ್ರಗಳಲ್ಲಿನ ಮಂಜುಗಡ್ಡೆ ಕರಗುವ ಪ್ರಮಾಣದಲ್ಲಿತೀವ್ರ ಏರಿಕೆಯಾಗಿದೆ
- - ಸಮುದ್ರ ನೀರಿನಲ್ಲಿಶೇ.26ರಷ್ಟು ಆ್ಯಸಿಡ್ ಅಂಶಗಳು ಪತ್ತೆಯಾಗಿವೆ
- - ಸಮುದ್ರದಲ್ಲಿನ ಏರುಪೇರು ಆಹಾರ ಉತ್ಪಾದನೆ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಹಸಿವಿನಿಂದ ಬಳಲುವವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಲಿದೆ
- 820 ದಶಲಕ್ಷ ಜನರು ವಿಶ್ವದಾದ್ಯಂತ 2018ರಲ್ಲಿಹಸಿವಿನಿಂದ ಬಳಲುತ್ತಿದ್ದಾರೆ. ಅದಕ್ಕೆ ಸಮುದ್ರದಲ್ಲಿನ ಹವಾಮಾನ ಬದಲಾವಣೆ ಮುಖ್ಯ ಕಾರಣ ಎಂದು ಡಬ್ಲ್ಯೂಎಂಒ ವರದಿ ಹೇಳಿದೆ
- 329 ಶತಕೋಟಿ ಟನ್‌ನಷ್ಟು ಮಂಜುಗಡ್ಡೆ 2019ರಲ್ಲಿಕರಗಿದೆ ಎನ್ನುವುದು ಮತ್ತಷ್ಟು ಕಳವಳ ಮೂಡಿಸಿದೆ
- 2019ರಲ್ಲಿಜಾಗತಿಕ ತಾಪಮಾನ ಏರಿಕೆಯನ್ನು 1 ಡಿಗ್ರಿ ಸೆಲ್ಶಿಯಸ್ ಒಳಗೆ ನಿಯಂತ್ರಿಸುವ ಗುರಿ ಹಾಕಿಕೊಳ್ಳಲಾಗಿತ್ತು
- 2019ರಲ್ಲಿನ ಸರಾಸರಿ ಜಾಗತಿಕ ತಾಪಮಾನ ಏರಿಕೆ 1.1 ಡಿಗ್ರಿ ಸೆಲ್ಶಿಯಸ್
- 2030ರ ಹೊತ್ತಿಗೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಶಿಯಸ್ ಪ್ರಮಾಣದೊಳಗೆ ನಿಯಂತ್ರಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದನ್ನು ತಲುಪಲು ಮುಂದಿನ 10 ವರ್ಷಗಳಲ್ಲಿಇಂಗಾಲಾಮ್ಲಹೊರಸೂಸುವಿಕೆಯನ್ನು ಪ್ರತಿವರ್ಷ ಶೇ.7.6ರ ಒಳಗೆ ನಿಯಂತ್ರಿಸಲೇಬೇಕು
- ಎಲ್ಲದೇಶಗಳು ಪ್ಯಾರಿಸ್ ಒಪ್ಪಂದಕ್ಕೆ ಬದ್ಧವಾಗಿ ನಡೆದುಕೊಂಡರೂ ಈ ಶತಮಾನದ ಅಂತ್ಯದ ವೇಳೆಗೆ ಜಾಗತಿಕ ತಾಪಮಾನ ಏರಿಕೆ ಸರಾಸರಿ ಮೂರು ಡಿಗ್ರಿ ಸೆಲ್ಶಿಯಸ್ ತಲುಪಲಿದೆ ಎಂದು ಅಂದಾಜಿಸಲಾಗಿದೆ
- - ಇಂಧನ ತ್ಯಾಜ್ಯಗಳನ್ನು ದಹಿಸುವುದು
- - ಎಗ್ಗಿಲ್ಲದೇ ಆಗುತ್ತಿರುವ ನಗರೀಕರಣ
- - ಬೆಳೆ ಪದ್ಧತಿಯಲ್ಲಿನ ಬದಲಾವಣೆ
- - ಸಾರಿಗೆ ಸೌಲಭ್ಯಗಳಲ್ಲಿಗಣನೀಯ ಏರಿಕೆ
- - ಎಲ್ಲದೇಶಗಳನ್ನೂ ಆವರಿಸಿರುವ ಕೊಳ್ಳುಬಾಕ ಸಂಸ್ಕೃತಿ
from India & World News in Kannada | VK Polls https://ift.tt/2Lgn6kg