ಹೊಸದಿಲ್ಲಿ: ಅತ್ಯಾಚಾರಕ್ಕೆ ಗುರಿಯಾಗುತ್ತಿದ್ದೀರಾ? ಅತ್ಯಾಚಾರಿಗೆ ಕಾಂಡೋಮ್ ನೀಡಿ, ಹಿಂಸಾಚಾರ ರಹಿತ ಘಟ ನೆಗೆ ಸಹಕರಿಸಿ ಎಂದು ಮೂಲದ ಚಿತ್ರ ನಿರ್ದೇಶಕರೊಬ್ಬರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿ, ನಂತರ ವ್ಯಾಪಕ ಆಕ್ರೋಶಕ್ಕೆ ಮಣಿದು ಪೋಸ್ಟ್ ಡಿಲೀಟ್ ಮಾಡಿದ ಘಟನೆ ನಡೆದಿದೆ. ತಮ್ಮನ್ನು ನಿರ್ದೇಶಕ ಎಂದು ಕರೆದುಕೊಂಡಿರುವ ಎಂಬಾತ ಫೇಸ್‌ಬುಕ್ ಖಾತೆಯಲ್ಲಿ ಹಾಕಿದ್ದ ಪೋಸ್ಟ್ ಮಹಿಳೆಯರ ಆಕ್ರೋಶಕ್ಕೆ ಗುರಿಯಾಗಿದೆ. ರೇಪ್ ಎನ್ನುವುದು ಗಂಭೀರ ವಿಚಾರ ವಲ್ಲ. ಆದರೆ ಹತ್ಯೆಗೆ ಕ್ಷಮೆಯಿಲ್ಲ ಎಂಬ ಶೀರ್ಷಿಕೆ ಅಡಿಯಲ್ಲಿ ಡೇನಿಯಲ್ ಪೋಸ್ಟ್ ಹಾಕಿದ್ದರು. ರೇಪ್ ಎನ್ನುವುದು ತಿದ್ದಬಹುದಾದ ಶಿಕ್ಷೆಯಾಗಿದೆ. ಕೋರ್ಟ್, ಸರಕಾರಗಳು ಅತ್ಯಾಚಾರಿಗಳಿಗೆ ಕ್ಷಮೆ ನೀಡಿದರೆ ಅವರಿಗೆ ಮತ್ತೆ ಹತ್ಯೆ ಮಾಡುವ ಆಲೋಚನೆ ಬರುವುದಿಲ್ಲ. ಆತಂಕದಲ್ಲಿ100ಕ್ಕೆ ಕರೆಮಾಡುವ ಬದಲು ನಿಮ್ಮೊಂದಿಗೆ ಕಾಂಡೋಮ್ ಒಯ್ಯಿರಿ ಎಂದು ಡೇನಿಯಲ್ ಪೋಸ್ಟ್‌ನಲ್ಲಿಸಲಹೆ ನೀಡಿದ್ದರು. ಈ ಪೋಸ್ಟ್‌ನ ಚಿತ್ರವನ್ನು ಟ್ವಿಟರ್‌ನಲ್ಲಿ ಹಾಕಿದ ಜನಪ್ರಿಯ ನಟಿ , ಡೇನಿಯಲ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅನೇಕ ನಟ, ನಟಿಯರು ಸೇರಿ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿ ಡೇನಿಯಲ್‌ಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆ ಇದೆ ಎಂದಿದ್ದಾರೆ. ಕಳೆದವಾರ ಹೈದರಾಬಾದ್ ನಲ್ಲಿ ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಹಿನ್ನೆಲೆ ದೇಶಾದ್ಯಂತ ವ್ಯಾಪಕ ಟೀಕೆ ಪ್ರತಿಭಟನೆಗಳು ನಡೆಯುತ್ತಿದೆ.
from India & World News in Kannada | VK Polls https://ift.tt/2OO5zST