ಪೋರ್ಟ್‌ಬ್ಲೇರ್: ಶಂಕಾಸ್ಪದ ರೀತಿಯಲ್ಲಿ ಭಾರತದ ಜಲಗಡಿಯಲ್ಲಿ ಸಂಚರಿಸುತ್ತಿದ್ದ ಚೀನಾದ ಹಡಗನ್ನು ಯೋಧರು ವಾಪಸ್ ಕಳುಹಿಸಿದ್ದಾರೆ. ಚೀನಾದ ಸಂಶೋಧನಾ ಹಡಗು ಶಿ-ಯಾನ್ 1 ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿತ್ತು. ಇದನ್ನು ತೀರ ರಕ್ಷಣಾ ಪಡೆಯ ಕಣ್ಗಾವಲು ವಿಮಾನಗಳು ಇದನ್ನು ಪತ್ತೆ ಹಚ್ಚಿತು ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ. ಭಾರತದ ಚಟುವಟಿಕೆಗಳ ಮೇಲೆ ಕಣ್ಣಿಡಲು ಈಗ ಹಡಗನ್ನು ಕಳುಹಿಸಲಾಗಿತ್ತು ಎಂಬ ಶಂಕೆ ಇದೆ ಎಂದು ಮೂಲಗಳು ತಿಳಿಸಿವೆ. ಕಣ್ಗಾವಲು ಪಡೆಯ ವಿಮಾನಗಳು ಪತ್ತೆ ಹಚ್ಚಿದ ನಂತರ ಭಾರತೀಯ ನೌಕಾಪಡೆಯ ನೌಕೆಗಳು ಇದನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು. ಭಾರತದ ಜಲಗಡಿ ಹಾಗೂ ವಿಶೇಷ ವಿತ್ತ ವಲಯದ ಪ್ರದೇಶದಲ್ಲಿ ಸಂಶೋಧನೆ ನಡೆಸಲು ವಿದೇಶಿ ನೌಕೆಗಳಿಗೆ ಅವಕಾಶ ಇಲ್ಲ. ಆದರೂ ಈ ಭಾಗದಲ್ಲಿ ಸಂಶೋಧನೆ ನಡೆಸಿದ್ದೇಕೆ ಎಂದು ಚೀನಾವನ್ನು ಭಾರತ ಪ್ರಶ್ನಿಸಿದೆ. ಭಾರತೀಯ ನೌಕಾಪಡೆಯ ಕಾರ್ಯಾಚರಣೆ ಹಾಗೂ ಸೂಚನೆ ನಂತರ ಹಡಗನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ ಎಂದು ಚೀನಾ ಸ್ಪಷ್ಟಪಡಿಸಿದೆ.
from India & World News in Kannada | VK Polls https://ift.tt/35ZBndf