ಈರುಳ್ಳಿ ಬೆಲೆ ಏರಿಕೆ: ಚಿಲ್ಲರೆ ಮಾರಾಟಗಾರರಿಗೆ 5, ಸಗಟು ಮಾರಾಟಗಾರರಿಗೆ 25 ಟನ್‌ ದಾಸ್ತಾನಿಗೆ ಅವಕಾಶ

ಹೊಸದಿಲ್ಲಿ: ಈರುಳ್ಳಿಯ ಬೆಲೆ ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಮತ್ತು ಸಗಟು ವ್ಯಾಪಾರಿಗಳಿಗೆ ಈರುಳ್ಳಿ ದಾಸ್ತಾನು ಮಿತಿಯನ್ನು ಪರಿಷ್ಕರಿಸಿದೆ. ಚಿಲ್ಲರೆ ಮಾರಾಟಗಾರರು 5 ಟನ್ ಹಾಗೂ ಸಗಟು ಮಾರಾಟಗಾರರು 25 ಟನ್‌ಗಿಂತ ಹೆಚ್ಚು ಈರುಳ್ಳಿ ದಾಸ್ತಾನು ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿಯ ಲಭ್ಯತೆಯನ್ನು ಸುಗಮಗೊಳಿಸಲು ಈ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್‌ವಾನ್ ಈ ವಿಷಯ ತಿಳಿಸಿದ್ದು ಆಮದು ಮಾಡಿಕೊಂಡಿರುವ ಈರುಳ್ಳಿ ದಾಸ್ತಾನಿಗೆ ಪರಿಷ್ಕೃತ ನಿಯಮ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಚಿಲ್ಲರೆ ಮಾರಾಟಗಾರರಿಗೆ 10 ಟನ್ ಹಾಗೂ ಸಗಟು ಮಾರಾಟಗಾರರಿಗೆ 50 ಟನ್ ವರೆಗೆ ಮಾತ್ರ ಈರುಳ್ಳಿ ದಾಸ್ತಾನು ಮಾಡಲು ಅವಕಾಶವಿತ್ತು.


from India & World News in Kannada | VK Polls https://ift.tt/35ZFohN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...