ರಾಜಸ್ಥಾನ ರಾಜ್ಯಸಭೆಗೆ ಮನಮೋಹನ್‌ ಸಿಂಗ್‌ ಹೆಸರು

ಹೊಸದಿಲ್ಲಿ: ಮಾಜಿ ಪ್ರಧಾನಿ, ಕಾಂಗ್ರೆಸ್‌ ಹಿರಿಯ ನಾಯಕ ಮನಮೋಹನ್‌ ಸಿಂಗ್‌, ರಾಜಸ್ಥಾನ ರಾಜ್ಯಸಭಾ ಸ್ಥಾನಕ್ಕೆ ಸ್ಫರ್ಧಿಸಲಿದ್ದಾರೆ. ಗುರುವಾರ ಈ ವಿಚಾರ ಅಧಿಕೃತಗೊಂಡಿದೆ. ಕಳೆದ ಬಾರಿಯ ಬಿಜೆಪಿ ಸರಕಾರದ ಅವಧಿಯಲ್ಲಿ ಆಯ್ಕೆಗೊಂಡಿದ್ದ ರಾಜಸ್ಥಾನ ಬಿಜೆಪಿ ಮುಖ್ಯಸ್ಥ ಲಾಲ್‌ ಸೈನಿಯ ನಿಧನ ಬಳಿಕ, ಈ ಸ್ಥಾನ ತೆರವಾಗಿತ್ತು. ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರಕಾರ ಇರುವುದರಿಂದ, ತನ್ನ ಪ್ರತಿನಿಧಿಯನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವ ಅಧಿಕಾರ ಪಡೆಯಲಿದೆ. ಲಾಲ್‌ ಸೈನಿ ಕಳೆದ ಬಾರಿ ರಾಜಸ್ಥಾನದಲ್ಲಿ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲಿ ಆಯ್ಕೆ ಆಗಿದ್ದರು. ಆ.26ರಂದು ರಾಜ್ಯಸಭೆಗೆ ಚುನಾವಣೆ ನಡೆಯಲಿದ್ದು, ಆಗಸ್ಟ್‌ 7 ರಂದು ಅಧಿಸೂಚನೆ ಜಾರಿಯಾಗಲಿದೆ. ಮತದಾನದ ದಿನವೇ ಫಲಿತಾಂಶ ಪ್ರಕಟವಾಗಲಿದೆ. ಕಳೆದ 28 ವರ್ಷದಿಂದ ಮನಮೋಹನ್‌ ಸಿಂಗ್‌ ಅಸ್ಸಾಂನ ಪ್ರತಿನಿಧಿಯಾಗಿದ್ದರು. ಜೂನ್‌ನಲ್ಲಿ ಸಿಂಗ್‌ ಅವಧಿ ಮುಕ್ತಾಯಗೊಂಡಿತ್ತು. ಈ ಹಿಂದೆ ಕಾಂಗ್ರೆಸ್‌ ಡಿಎಂಕೆಯಿಂದ ರಾಜ್ಯಸಭಾ ಸದಸ್ಯತ್ವಕ್ಕೆ ಆಹ್ವಾನ ನೀಡಿತ್ತು. ಆದರೆ, 2 ಪಕ್ಷಗಳು ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ. 2004ರಿಂದ 2014 ರ ಎರಡು ಅವಧಿಗೆ ಸತತ ದೇಶದ ಪ್ರಧಾನಿಯಾಗಿದ್ದ ಮನಮೋನ್‌ ಸಿಂಗ್‌, ಯುಪಿಎ ಸರಕಾರವನ್ನು ಮುನ್ನಡೆಸಿದ್ದರು. 2014ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಯುಪಿಎ ತನ್ನ ಸ್ಥಾನ ಕಳೆದುಕೊಂಡಿತು. ಬಿಜೆಪಿ ಅತಿದೊಡ್ಡ ಪಕ್ಷವಾಗಿ ಆಯ್ಕೆಯಾಗಿತ್ತು.


from India & World News in Kannada | VK Polls https://ift.tt/2YAmdXG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...