
ಬರ್ಮಿಂಗ್‌ಹ್ಯಾಮ್: ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಆ್ಯಶಸ್ ಕದನ ಆರಂಭವಾಗಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೊಸದಾಗಿ ಪರಿಚಯಿಸಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೂ ಭರ್ಜರಿ ಚಾಲನೆ ದೊರಕಿದೆ. ಇದರಂತೆ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಆರಂಭದಲ್ಲೇ ಸ್ಟುವರ್ಟ್ ಬ್ರಾಡ್ ಬಲೆಗೆ ಬಿದ್ದ (2) ನಿರಾಸೆ ಮೂಡಿಸಿದ್ದರು. ಇನ್ನೇನು ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದ ವೇಳೆಯಲ್ಲಿ ಇಂಗ್ಲಿಷ್ ಅಭಿಮಾನಿಗಳು ಸ್ಯಾಂಡ್ ಪೇಪರ್ ತೋರಿಸುವ ಮೂಲಕ ಗೇಲಿ ಮಾಡಿದರು. 2018 ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಸ್ಯಾಂಡ್ ಪೇಪರ್ ಉಪಯೋಗಿಸಿಕೊಂಡು ಚೆಂಡನ್ನು ವಿರೂಪಗೊಳಿಸಿದ್ದರು. ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾವು ವಾರ್ನರ್ ಹಾಗೂ ಸ್ಮಿತ್ ಮೇಲೆ ತಲಾ ಒಂದು ವರ್ಷ ಹಾಗೂ ಬ್ಯಾಂಕ್ರಾಫ್ಟ್‌ಗೆ ಒಂಬತ್ತು ತಿಂಗುಳಗಳ ಕಾಲ ನಿಷೇಧವನ್ನು ಹೇರಿತ್ತು. ತದಾ ಬಳಿಕ ಏಕದಿನ ವಿಶ್ವಕಪ್ ವೇಳೆ ಸ್ಮಿತ್ ಹಾಗೂ ವಾರ್ನರ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ಈ ಮೂವರು ಆಟಗಾರರು ಟೆಸ್ಟ್ ತಂಡವನ್ನು ಸೇರಿಕೊಂಡಿದ್ದಾರೆ. ಈ ಮೊದಲು ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಂದ್ಯದ ವೇಳೆ ಸ್ಮಿತ್‌ಗೆ ಇದಕ್ಕೆ ಸಮಾನವಾದ ಅನುಭವ ಎದುರಾಗಿತ್ತು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಅವಮಾನ ಮಾಡದಂತೆ ವಿನಂತಿಸಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಸ್ಮಿತ್ ಧನ್ಯವಾದವನ್ನು ಸಲ್ಲಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2YF503m