ಆ್ಯಶಸ್‌ನಲ್ಲಿ ಸ್ಮಿತ್, ವಾರ್ನರ್, ಬ್ಯಾಂಕ್ರಾಫ್ಟ್‌ಗೆ ಭಾರಿ ಅವಮಾನ

ಬರ್ಮಿಂಗ್‌ಹ್ಯಾಮ್: ಬಾಲ್ ಟ್ಯಾಂಪರಿಂಗ್ ಪ್ರಕಣರದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಆಸ್ಟ್ರೇಲಿಯಾದ ಆಟಗಾರರಾದ ಸ್ಟೀವನ್ ಸ್ಮಿತ್, ಹಾಗೂ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರಿಗೆ ಎದುರಾದ ಅನುಭವ ಅಷ್ಟೊಂದು ಸಿಹಿಯಾಗಿರಲಿಲ್ಲ. 2018 ಮಾರ್ಚ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಸ್ಮಿತ್, ವಾರ್ನರ್ ಹಾಗೂ ಕ್ಯಾಮರೂನ್ ಸ್ಯಾಂಡ್ ಪೇಪರ್ ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು. ಬಳಿಕ ಕ್ರಿಕೆಟ್ ಆಸ್ಟ್ರೇಲಿಯಾವು ಸ್ಮಿತ್ ಹಾಗೂ ವಾರ್ನರ್ ಮೇಲೆ ತಲಾ ಒಂದು ವರ್ಷ ಹಾಗೂ ಬ್ಯಾಂಕ್ರಾಫ್ಟ್‌ಗೆ ಒಂಬತ್ತು ತಿಂಗಳುಗಳ ನಿಷೇಧವನ್ನು ಹೇರಿತ್ತು. ಈ ಪೈಕಿ ಸ್ಮಿತ್ ಹಾಗೂ ವಾರ್ನರ್ ಏಕದಿನ ವಿಶ್ವಕಪ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದರು. ಇದೀಗ ಮೂವರು ಆಟಗಾರರು ಸರಣಿಗಾಗಿ ಟೆಸ್ಟ್ ತಂಡವನ್ನು ಸೇರಿದ್ದರು. ಆದರೆ ಇಂಗ್ಲಿಷ್ ಅಭಿಮಾನಿಗಳು ಭಾರಿ ಅವಮಾನ ಮಾಡಿದ್ದಾರೆ. ಮೂವರು ಆಟಗಾರರಿಗೆ ಸ್ಯಾಂಡ್ ಪೇಪರ್ ತೋರಿಸುವ ಮೂಲಕ ಗೇಲಿ ಮಾಡಿದ್ದಾರೆ. ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಅಭಿಮಾನಿಗಳು, ಸ್ಮಿತ್ ಅಳುವ ಮುಖವಾಡವನ್ನು ಧರಿಸಿ ತಮ್ಮ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. ಇದರೊಂದಿಗೆ ಆ್ಯಶಸ್ ಟೆಸ್ಟ್ ಸರಣಿಗೆ ಮತ್ತಷ್ಟು ಕಿಚ್ಚು ಹಚ್ಚಿದೆ. ಇದು ಇಂಗ್ಲೆಂಡ್ ಹಾಗೂ ಆಸೀಸ್ ಅಭಿಮಾನಿಗಳ ನಡುವೆ ಭಿನ್ನಭಿಪ್ರಾಯಕ್ಕೆ ಕಾರಣವಾಗಿದ್ದು, ಮಾಜಿ ಆಟಗಾರರು ಘಟನೆ ಸಂಬಂಧ ಪರ ಹಾಗೂ ವಿರೋಧ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/336clbS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...