IND vs NZ Live Score: ಮಯಾಂಕ್ ಫಿಫ್ಟಿ, ಭಾರತದ ರನ್‌ ಶಿಖರ!

ಮುಂಬೈ: ಅಕ್ಷರಶಃ ಅಧಿಕಾರಯುತ ಆಟವಾಡಿರುವ , ಇಲ್ಲಿ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ರನ್‌ಗಳ ಶಿಖರ ನಿರ್ಮಿಸಿದೆ. ಮಳೆ ಕಾಟದ ನಡುವೆಗೂ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿದ್ದ ಭಾರತ ತಂಡ 325 ರನ್‌ ಗಳಿಸಿ, ಬಳಿಕ ಕಿವೀಸ್‌ ಪಡೆಯನ್ನು ಪ್ರಥಮ ಇನಿಂಗ್ಸ್‌ನಲ್ಲಿ 62 ರನ್‌ಗಳಿಗೆ ಆಲ್‌ಔಟ್‌ ಮಾಡಿತು. ಇದೀಗ ಎರಡನೇ ಇನಿಂಗ್ಸ್‌ನಲ್ಲೂ ಭರ್ಜರಿ ಬ್ಯಾಟಿಂಗ್‌ ನಡೆಸಿದರುವ ಭಾರತ ತಂಡಕ್ಕೆ ಓಪನರ್‌ (62) ಅರ್ಧಶತಕ ಬಾರಿಸಿ ಭದ್ರ ಅಡಿಪಾಯ ಹಾಕಿದ್ದಾರೆ. ಗಿಲ್‌ ಗಾಯಗೊಂಡಿದ್ದ ಕಾರಣ ಓಪನಿಂಗ್‌ ಮಾಡಿದ್ದ ಚೇತೇಶ್ವರ್‌ ಪೂಜಾರ 47 ರನ್‌ ಗಳಿಸಿದ್ದಾಗ ಏಜಾಝ್‌ ಪಟೇಲ್‌ಗೆ ವಿಕೆಟ್‌ ಒಪ್ಪಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ದಾಖಲೆ ಪುಟ ಸೇರಿದ್ದ ಎಡಗೈ ಸ್ಪಿನ್ನರ್‌ ಏಜಾಝ್‌ ಪಟೇಲ್‌, ದ್ವಿತೀಯ ಇನಿಗ್ಸ್‌ನಲ್ಲೂ 2 ವಿಕೆಟ್ ಸಂಪಾದಿಸಿದ್ದಾರೆ. ಆದೆರೆ, ಭಾರತ ತನ್ನ ಒಟ್ಟು ಮುನ್ನಡೆಯನ್ನು 405 ರನ್‌ಗಳಿಗೆ ವಿಸ್ತರಿಸಿದ್ದು, 2ನೇ ಇನಿಂಗ್ಸ್‌ನಲ್ಲಿ 46 ಓವರ್‌ಗಳಲ್ಲಿ 142/2 ರನ್‌ ಗಳಿಸಿದೆ. IND vs NZ ಎರಡನೇ ಟೆಸ್ಟ್‌ ಪಂದ್ಯದ Live ಮಯಾಂಕ್‌ ಅರ್ಧಶತಕಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ ಆಸರೆಯಾಗಿ ನಿಂತು ಬ್ಯಾಟ್‌ ಬೀಸಿದ್ದ ಮಯಾಂಕ್‌ ಅಗರ್ವಾಲ್‌ 311 ಎಸೆತಗಳಲ್ಲಿ 150 ರನ್‌ಗಳ ಮನಮೋಹಕ ಶತಕ ಬಾರಿಸಿದ್ದರು. ಇದು ಅವರ ಟೆಸ್ಟ್‌ ವೃತ್ತಿ ಬದುಕಿನ 4ನೇ ಸೆಂಚುರಿ ಕೂಡ. ಇದೇ ಲಯವನ್ನು ಎರಡನೇ ಇನಿಂಗ್ಸ್‌ನಲ್ಲೂ ಕಾಯ್ದುಕೊಂಡು 108 ಎಸೆತಗಳಲ್ಲಿ 9 ಫೋರ್‌ ಮತ್ತು 1 ಸಿಕ್ಸರ್‌ ಒಳಗೊಂಡ 62 ರನ್‌ಗಳನ್ನು ಬಾರಿಸಿ, ಏಜಾಝ್‌ ಪಟೇಲ್‌ ಬೌಲಿಂಗ್‌ನಲ್ಲಿ ಸಿಕ್ಸರ್‌ ಬಾರಿಸುವ ಯತ್ನದಲ್ಲಿ ವಿಕೆಟ್‌ ಕೈಚೆಲ್ಲಿದರು. ದ್ವಿತೀಯ ಟೆಸ್ಟ್‌ ಪಂದ್ಯದ (ಮೂರನೇ ಭೋಜನ ವಿರಾಮದ ಅಂತ್ಯಕ್ಕೆ)ಭಾರತ: 109.5 ಓವರ್‌ಗಳಲ್ಲಿ 325 ರನ್‌ಗೆ ಆಲ್‌ಔಟ್‌ (ಮಯಾಂಕ್‌ ಅಗರ್ವಾಲ್‌ 150 ಶುಭಮನ್ ಗಿಲ್ 44, ಶ್ರೇಯಸ್‌ ಅಯ್ಯರ್‌ 18, ವೃದ್ಧಿಮಾನ್‌ ಸಹಾ 27, ಅಕ್ಷರ್‌ ಪಟೇಲ್‌ 52; ಏಜಾಝ್ ಪಟೇಲ್ 119ಕ್ಕೆ 10). ನ್ಯೂಜಿಲೆಂಡ್‌: 28.1 ಓವರ್‌ಗಳಲ್ಲಿ 62 ರನ್‌ಗಳಿಗೆ ಆಲ್‌ಔಟ್ (ಟಾಮ್‌ ಲೇಥಮ್‌ 10, ಕೈಲ್‌ ಜೇಮಿಸನ್‌ 17; ಆರ್‌ ಅಶ್ವಿನ್ 8ಕ್ಕೆ 4, ಮೊಹಮ್ಮದ್‌ ಸಿರಾಜ್ 19ಕ್ಕೆ 3, ಅಕ್ಷರ್‌ ಪಟೇಲ್‌ 14ಕ್ಕೆ 2, ಜಯಂತ್ ಯಾದವ್‌ 13ಕ್ಕೆ 1). ಭಾರತ: 2ನೇ ಇನಿಂಗ್ಸ್‌ 46 ಓವರ್‌ಗಳಲ್ಲಿ 2 ವಿಕೆಟ್‌ಗೆ 142 ರನ್ (ಮಯಾಂಕ್‌ ಅರ್ವಾಲ್‌ 62, ಚೇತೇಶ್ವರ್‌ ಪೂಜಾರ 47; ಏಜಾಝ್‌ ಪಟೇಲ್‌ 77ಕ್ಕೆ 2). ಭಾರತ ಟೆಸ್ಟ್‌ ತಂಡಅಜಿಂಕ್ಯ ರಹಾನೆ (ನಾಯಕ), ಮಯಾಂಕ್ ಅಗರ್ವಾಲ್, ರವಿಚಂದ್ರನ್ ಅಶ್ವಿನ್, ಶ್ರೀಕರ್ ಭರತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ, ಚೇತೇಶ್ವರ ಪೂಜಾರ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಇಶಾಂತ್ ಶರ್ಮಾ, ಶುಭಮನ್ ಗಿಲ್, ಉಮೇಶ್ ಯಾದವ್, ಜಯಂತ್ ಯಾದವ್. ಕಿವೀಸ್‌ ಟೆಸ್ಟ್‌ ತಂಡಕೇನ್‌ ವಿಲಿಯಮ್ಸನ್ (ನಾಯಕ), ಟಾಮ್‌ ಬ್ಲಂಡಲ್‌ (ವಿಕೆಟ್‌ಕೀಪರ್‌), ಡೆವೋನ್‌ ಕಾನ್ವೇ, ಕೈಲ್‌ ಜೇಮಿಸನ್‌, ಟಾಮ್ ಲೇಥಮ್‌, ಹೆನ್ರಿ ನಿಕೋಲ್ಸ್‌, ಎಜಾಝ್ ಪಟೇಲ್‌, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ಮಿಚೆಲ್‌ ಸ್ಯಾಂಟ್ನರ್‌, ವಿಲ್‌ ಸಮರ್‌ವಿಲ್ಲೇ, ಟಿಮ್‌ ಸೌಥೀ, ರಾಸ್‌ ಟೇಲರ್‌, ವಿಲ್‌ ಯಂಗ್ ಮತ್ತು ನೈಲ್‌ ವ್ಯಾಗ್ನರ್‌.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3onyWgw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...